HEALTH TIPS

No title

              ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನ ಬ್ರಹ್ಮಕಲಶೋತ್ಸವ
                   ಪೂರ್ವಭಾವಿ ಸಮಾಲೋಚನಾ ಸಭೆ
     ಪೆರ್ಲ: ಪಡ್ರೆಯ ಮಲೆತ್ತಡ್ಕ  ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ನಾಗಪ್ರತಿಷ್ಠೆ  ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆಯು ಏ.18 ರಿಂದ 24 ರ ವರೆಗೆ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಂತ್ರಿವರ್ಯ ಡಾ.ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಪೂರ್ವಭಾವಿ ತಯಾರಿಗಾಗಿ ಸಮಾಲೋಚನಾ ಸಭೆ ಶ್ರೀ ಕ್ಷೇತ್ರ ಪರಿಸರದಲ್ಲಿ ಭಾನುವಾರ ನಡೆಯಿತು.
   ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆಗೆ ಸಂಬಂಧಿಸಿ ವಿವಿಧ ಸಮಿತಿ, ಉಪಸಮಿತಿಗಳ ಈ ವರೆಗಿನ ಕಾರ್ಯಚಟುವಟಿಕೆಗಳ ಅವಲೋಕನ, ಆಥರ್ಿಕ ಸಂಯೋಜನೆ, ಆಮಂತ್ರಣ ತಲುಪಿಸುವುದು, ಹೊರೆಕಾಣಿಕೆ ಸಂಗ್ರಹ, ಪ್ರಚಾರ ಕಾರ್ಯ, ಸಾಂಸ್ಕೃತಿಕ ಕಾರ್ಯಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಬದಲಾವಣೆ ಇತ್ಯಾದಿ ವಿಷಯಗಳ ಕುರಿತಾಗಿ ತುತರ್ು ಕಾಯರ್ಾಚರಣೆಗಳ ಬಗ್ಗೆ ವಿಸ್ತೃತ ಚಚರ್ೆ ನಡೆಸಲಾಯಿತು.
   ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಬೇಕಾದ ವ್ಯವಸ್ಥೆಗಳ ಬಗ್ಗೆ ನಿದರ್ೇಶನ ನೀಡಲಾಯಿತು. ಅತಿಥಿಗಳಾಗಿ ಸಿಬಿಐ ಚೆನ್ನೈ ವಿಭಾಗದ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ, ಸ್ವರ್ಗ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವಾಸುದೇವ ಭಟ್ ಉಪಸ್ಥಿತರಿದ್ದರು.
   ಬ್ರಹ್ಮಕಲಶೋತ್ಸವ, ಜೀಣರ್ೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ವಿವಿಧ  ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಂಘಸಂಸ್ಥೆಗಳ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries