HEALTH TIPS

No title

                                ಗ್ರಂಥಾಲಯಗಳು ಭದ್ದಿಕ ಏಳಿಗೆಗೆ ವಿಕಾಸಕ್ಕೆ ಕಾರಣ-ಸಂಸದ ಪಿ.ಕರುಣಾಕರನ್
   ಉಪ್ಪಳ: ಕೇರಳದಲ್ಲಿ ಭೌದ್ದಿಕ ವಿಕಸನದ ಮೂಲಕ ಸಾಮಾಜಿಕ ಬದಲಾವಣೆಗಳಿಗೆ ಗ್ರಂಥಾಲಯಗಳ ಕೊಡುಗೆ ದಶಕಗಳಿಂದ ಮಹತ್ತರ ಪಾತ್ರ ನಿರ್ವಹಿಸಿವೆ. ಇಲ್ಲಿನ ವಾಚನಾಲಯಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ದಶಕಗಳ ಹಿಂದೆ ತನ್ನ ರಾಜಕೀಯ ಜೀವನಕ್ಕೆ ಗ್ರಂಥಾಲಯಗಳೇ ಸ್ಪೂತರ್ಿಯಾಗಿತ್ತು ಎಂದು ಸಂಸದ ಪಿ.ಕರುಣಾಕರನ್ ಹೇಳಿದರು.
    ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ನೂತನ ಕಟ್ಟಡವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
   ಜನಪರ ಗ್ರಂಥಾಲಯಗಳು ಗ್ರಾಮೀಣ ಜನಮಾನಸದ ಬೌದ್ಧಿಕ ಏಳಿಗೆ ಸಹಿತ ಸಾಂಸ್ಕೃತಿಕ ವಿಕಸನಕ್ಕೂ ಸಹಾಯಕ. 49 ವರ್ಷಗಳ ಹಿಂದೆ ಧರ್ಮತ್ತಡ್ಕದಂತಹ ಗ್ರಾಮೀಣ ಭಾಗದಲ್ಲಿ ಆರಂಭಗೊಂಡ ಗ್ರಂಥಾಲಯವು ಪ್ರಗತಿಪರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಜೌನತ್ಯಕ್ಕೆ ಕಾರಣವಾಗಿರುವುದು ಇತರೆಡೆಗಳಿಗೆ ಮಾದರಿ ಎಂದು ಅವರು ಅಭಿಪ್ರಾಯಪಟ್ಟರು. 19 ಮಂದಿ ಸದಸ್ಯರಿಂದ ಆರಂಭಗೊಂಡ ಗ್ರಂಥಾಲಯವು ಪ್ರಸ್ತುತ ಸಾವಿರ ಸದಸ್ಯರ ಮೂಲಕ ಕಾಯರ್ಾಚರಿಸುತ್ತಿದೆ. ಪ್ರಸ್ತುತ ಗ್ರಂಥಾಲಯವು ಗ್ರಾಮೀಣ ಭಾಗದ ಸಾಹಿತ್ಯಾಸಕ್ತರಿಂದ ಚಟುವಟಿಕಾ ಕೇಂದ್ರವಾಗಿದ್ದು ಆತೀ ಹೆಚ್ಚು ಪುಸ್ತಕಗಳನ್ನು ಒಳಗೊಂಡಿರುವುದು ಸಂತಸ ತಂದಿದೆ ಎಂದು ಪ್ರಶಂಸಿಸಿದರು. ಜಿಲ್ಲೆಯ ಹಲವು ಯುವಕ ಸಂಘಗಳು ಗ್ರಾಮೀಣ ಭಾಗದ ಬೌದ್ಧಿಕ ಪ್ರಗತಿ ಸಹಿತ ಕ್ರೀಡಾ ಚಟುವಟಿಕೆಗಳ ಮೂಲಕ ಶಾರೀರಿಕ ಪ್ರಗತಿಗೂ ಕಾರಣವಾಗಿವೆ ಎಂದರು. ನೂತನ ಕಟ್ಟಡ ಸೌಕರ್ಯ ಲಭ್ಯವಾದ ಗ್ರಂಥಾಲಯವು ಸಾಂಸ್ಕೃತಿಕ ಮತ್ತು ಬೌದ್ಧಿಕ ಚಟುವಟಿಕೆಗಳ ಮೂಲಕ ಕ್ರಿಯಾಶೀಲ ಕೇಂದ್ರವಾಗಲಿ ಎಂದು ಹಾರೈಸಿದರು.
   ಗ್ರಂಥಾಲಯ ಸ್ಥಾಪಕ ಸದಸ್ಯ ಚಕ್ಕೆ ಕೇಶವ ಭಟ್ ಸಂಸದರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಸಂಸದರಿಂದ ಚಕ್ಕೆ ಕೇಶವ ಭಟ್ ಮತ್ತು ಗೋವಿಂದ ಭಟ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಅರುಣಾ.ಜೆ ಮಾತನಾಡಿ ಸಂಸದ ನಿಧಿಯಿಂದ ಕೊಡಮಾಡಲ್ಪಟ್ಟ 11 ಲಕ್ಷರೂ.  ವೆಚ್ಚದಲ್ಲಿ ನಿಮರ್ಾಣಗೊಂಡ ಗ್ರಾಮೀಣ ಭಾಗದ ಧರ್ಮತ್ತಡ್ಕ ಗ್ರಂಥಾಲಯವು ಭಾವೀ ಪೀಳಿಗೆಯ ಶ್ರೇಯೋಭಿವೃದ್ಧಿಗೆ ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸಿದರು. ಸಂಸದರ ಕತೃತ್ವ ಪ್ರಜ್ಞೆಗೆ ಧನ್ಯವಾದ ಸೂಚಿಸಿದರು.
   ಕಾರ್ಯಕ್ರಮದಲ್ಲಿ ಕಾಸರಗೋಡು ಜಿ.ಪಂ ಸದಸ್ಯೆ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಬ್ಲಾ.ಪಂ ಸದಸ್ಯ ಕೆ.ಆರ್.ಜಯಾನಂದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.  ಪುತ್ತಿಗೆ ಗ್ರಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಚನಿಯಪಾಡಿ, ಶಾಂತಿ.ವೈ, ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಶ್ಯಾಮ್ ಭಟ್, ಮಂಜೇಶ್ವರ ಗ್ರಂಥಾಲಯ ಸಮಿತಿ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಮಾಸ್ತರ್, ಮಾಜಿ ಜಿ.ಪಂ ಸದಸ್ಯ ಶಂಕರರೈ ಮಾಸ್ತರ್, ಸ್ಟಾನಿ ಡಿ'ಸೋಜಾ, ಅಚ್ಯುತ ರೈ, ರಘುನಂದನ್ ಮಾಸ್ತರ್, ಜಯಂತ ಪಾಟಾಳಿ, ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಶಂಕರನಾರಾಯಣ.ಎನ್ ಮೊದಲಾದವರು ಉಪಸ್ಥಿತರಿದ್ದರು. ವಾಚನಾಲಯದ ಕಾರ್ಯದಶರ್ಿ ರಾಮಚಂದ್ರ ಭಟ್ ಸ್ವಾಗತಿಸಿ, ಚಕ್ಕೆ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.  ಶಾಲಾ ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries