HEALTH TIPS

No title

              ಶೈಕ್ಷಣಿಕ ವ್ಯವಸ್ಥೆಗಳು ವಿಶ್ವಮಟ್ಟದಲ್ಲಿ ಗುರುತಿಸುವ ಸ್ಥಿತಿಗೆ ಮರಳಬೇಕು-ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
     ಕಾಸರಗೋಡು: ಕೇರಳ ರಾಜ್ಯವು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದೆ. ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರು ಮತ್ತು ಶ್ರೀ ಸ್ವಾತಿ ತಿರುನಾಳರಂತಹ ಮಹನೀಯರ ಸಮರ್ಥ ನಾಯಕತ್ವ ಸಮಾಜ ಸುಧಾರಣೆಯ ಫಲದಿಂದ ಶಿಕ್ಷಣ ಕ್ರಾಂತಿ ಸಾಧ್ಯವಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
    ಪೆರಿಯಾ ತೇಜಸ್ವಿನಿ ಹಿಲ್ಸ್ನಲ್ಲಿ ಕಾಯರ್ಾಚರಿಸುತ್ತಿರುವ ಕೇರಳ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಕಟ್ಟಡ ಸಮುಚ್ಚಯವನ್ನು ಭಾನುವಾರ  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
  ಕಾಸರಗೋಡು ಜಿಲ್ಲೆಗೆ ಶ್ರೀಮಂತ ಸಂಸ್ಕೃತಿ,ಆಚರಣೆ ಮತ್ತು ಚರಿತ್ರೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಪ್ರಾಂತ್ಯಾವಾರು ರಾಜ್ಯ ರಚನೆಯ ನಂತರ ಕಣ್ಣೂರು ಜಿಲ್ಲೆಯ ಭಾಗವಾಯಿತು. 1984 ರಲ್ಲಿ ಕೇರಳದ ಉತ್ತರದ ಜಿಲ್ಲೆಯಾಗಿ ವಿಂಗಡಿಸಲ್ಪಟ್ಟ ಕಾಸರಗೋಡಿನಲ್ಲಿ ತೆಯ್ಯಂ, ಪೂರಕ್ಕಳಿ, ಯಕ್ಷಗಾನವು ಪ್ರಖ್ಯಾತ ಸಾಂಸ್ಕೃತಿಕ ಕಲೆಯಾಗಿವೆ, ಹಲವು ಭಾಷೆ ವೈವಿಧ್ಯಗಳಿರುವ ಕಾಸರಗೋಡು ಸಪ್ತಭಾಷಾ ಸಂಗಮಭೂಮಿ ಎನ್ನುವುದು ಅರ್ಥಪೂರ್ಣ ಎಂದರು.
   ಕೇರಳ ಕೇಂದ್ರೀಯ ವಿ.ವಿ ಕಾಸರಗೋಡು ಸಹಿತ ಉತ್ತರ ಮಲಬಾರು ಪ್ರಾಂತ್ಯದ ಶಿಕ್ಷಣಾಥರ್ಿಗಳಿಗೆ ವರದಾನವಾಗಿದೆ. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ ಸಹಿತ ಮೂಲಭೂತ ಸೌಕರ್ಯಗಳ ಅನಿವಾರ್ಯತೆ ಹೆಚ್ಚಾಗಿದೆ. ಕೇಂದ್ರೀಯ ವಿ.ವಿ ಮೂಲಕ ಈ ಭಾಗದ ಶೈಕ್ಷಣಿಕ ಅಗತ್ಯತೆಗಳು ಪೂರೈಕೆಯಾಗಲಿದ್ದು, ಜೀವನ ಮಟ್ಟ ಸುಧಾರಣೆಯಾಗಲಿದೆ ಎಂಬ ವಿಶ್ವಾಸ ತನಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ತೇಜಸ್ವಿನಿ ಗುಡ್ಡದ ಮೇಲೆ ಆರಂಭಗೊಂಡ ಕೇಂದ್ರೀಯ ವಿ.ವಿಯ ಮೂಲಕ ಶಿಕ್ಷಣದ ತೇಜಸ್ಸು ಬಹುದೂರ ಹರಿದು ವಿಶ್ವಕ್ಕೆ ಬೆಳಕಾಗಲಿ ಎಂದು ಹಾರೈಸಿದರು. 21 ನೇ ಶತಮಾನದಲ್ಲಿ ಉನ್ನತ ವಿದ್ಯಾಭ್ಯಾಸವು ಜ್ಞಾನಾಧಾರಿತ ಸಮಾಜವನ್ನು ಸೃಷ್ಠಿಸಲು ಸಹಕಾರಿಯಾಗಿದೆ. ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳಿಗೆ ದೇಶವನ್ನು ಶೈಕ್ಷಣಿಕ ಅಭಿವೃದ್ಧಿಯ ಮೂಲಕ ಹೊಸತನದತ್ತ ಮುಖಮಾಡಿ ಜ್ಞಾನ ಕೇಂದ್ರವಾಗಿಸುವಂತಹ ಪರಿವರ್ತನೆ ಸಾಧ್ಯವಾಗಬೇಕು ಎಂದರು. ಶತಮಾನಗಳ ಹಿಂದೆ ಭಾರತವು ಶೈಕ್ಷಣಿಕ ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸಿತ್ತು. ವಿಶ್ವದ ಮೂಲೆ ಮೂಲೆಗಳಿಂದ ಜ್ಞಾನ ದಾಹಿಗಳು ಇಲ್ಲಿಗೆ ಆಗಮಿಸಿ ವಿವಿಧ ವಿಷಯಗಳ ಬಗ್ಗೆ ಜ್ಞಾನಾರ್ಚನೆಯಲ್ಲಿ ತೊಡಗುತ್ತಿದ್ದರು, ಸತತ ವಿದೇಶಿ ಆಕ್ರಮಣ ಸಹಿತ ಬ್ರಿಟಿಷರ ಆಳ್ವಿಕೆಯ ಪರಿಣಾಮವಾಗಿ ಹಿಂದಿದ್ದ ಶೈಕ್ಷಣಿಕ ಗೌರವಸ್ಥಾನ ಇಲ್ಲದಾಯಿತು. ಪ್ರಸ್ತುತ ದೇಶವು ಶಿಕ್ಷಣದ ಮೂಲಕ ವಿಶ್ವದಲ್ಲಿ ಪ್ರಬಲ ಶಕ್ತಿಯಾಗಲಿದೆ. ಇದಕ್ಕಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಪಠ್ಯಕ್ರಮ ಬದಲಾಗಬೇಕಿದ್ದು, ಉತ್ತಮ ಮೂಲ ಸೌಕರ್ಯ ಸಹಿತ ಬೌತಿಕ ಸೌಲಭ್ಯಗಳ ಪೂರೈಕೆಯ ಅಗತ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ದೇಶದಲ್ಲಿ 800 ಕ್ಕೂ ಮಿಗಿಲಾದ ವಿಶ್ವವಿದ್ಯಾನಿಲಯಗಳಿವೆ, ಆದರೆ ಇವುಗಳಲ್ಲಿ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಸಹ ವಿಶ್ವದ ಉತ್ತಮ ಶೈಕ್ಷಣಿಕ ಕೇಂದ್ರಗಳೆಂಬ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಲ್ಲ. ನಾವು ಯಾವತ್ತೂ 'ನಮ್ಮ ಕರ್ತವ್ಯವಿಷ್ಟೇ' ಎನ್ನುವ ಮನೋಭಾವದಿಂದ ಹೊರಬಂದು ಪ್ರಸ್ತುತ ಸ್ಥಿತಿಗತಿಗಳನ್ನು ಬದಲಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಿತ ಕೇಂದ್ರೀಯ ವಿ.ವಿಯವರೆಗಿನ ಶಿಕ್ಷಣ ಸಂಸ್ಥೆಗಳು ಕ್ರಾಂತಿಕಾರಿ ಹೆಜ್ಜೆಗಳನ್ನಿಡುವ ಮೂಲಕ 21 ನೇ ಶತಮಾನದಲ್ಲಿ ದೇಶವನ್ನು ಉತ್ತಮ ಶೈಕ್ಷಣಿಕ ಕೇಂದ್ರವನ್ನಾಗಿಸಲು ಪ್ರಯತ್ನಿಸಬೇಕಿದೆ ಎಂದರು. ಪ್ರಸ್ತುತ ಸಮಾಜವು ಜ್ಞಾನಾಧಾರಿತ ಈ ಮಧ್ಯೆ ಉನ್ನತ ವಿದ್ಯಾಭ್ಯಾಸ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳು ಸಮಾಜ, ಸಮುದಾಯಗಳ ಆಥರ್ಿಕ ಸ್ವಾವಲಂಬನೆಯ ವಾಹಕಗಳಾಗಿ ದೇಶದ ಅಭಿವೃದ್ಧಿಗೆ ರಹದಾರಿಯಾಗಬೇಕಿದೆ ಎಂದರು. ಶಿಕ್ಷಣವು ಕೇವಲ ಉದ್ಯೋಗಕ್ಕೆ ಸೀಮಿತವಾಗಬಾರದು ಬದಲಾಗಿ ಶಿಕ್ಷಣವು ಸಮಾಜದ ಬೆಳಕಾಗಬೇಕು. ಶಿಕ್ಷಣ ವ್ಯಕ್ತಿತ್ವ, ಜಾಣ್ಮೆ, ಕಾರ್ಯ ತತ್ಪರತೆಯನ್ನು ಹೆಚ್ಚಿಸಿ ಉತ್ತಮ ನಡತೆಯನ್ನು ವಿದ್ಯಾಥರ್ಿಗಳು ಮೈಗೂಡಿಸಲು ಸಹಕಾರಿಯಾಗಬೇಕು ಎಂದರು. ನಮ್ಮ ಶ್ರೀಮಂತ ಸಂಸ್ಕೃತಿ, ಆಚರಣೆ ಸಹಿತ ನಾಗರಿಕ ಇತಿಹಾಸದ ಬಗ್ಗೆ ಹೆಮ್ಮೆಪಟ್ಟು ಸಂಸ್ಕೃತಿ ಆಚರಣೆಗಳನ್ನು ಮುಂದುವರಿಸಲು ವಿದ್ಯಾಥರ್ಿಗಳು ಕಾರಣೀಭೂತರಾಗಬೇಕು ಎಂದರು.
   2009 ರಲ್ಲಿ ಹಿಂದುಳಿದ ಪ್ರದೇಶದಲ್ಲಿ ಪ್ರಾರಂಭವಾದ ಕೇಂದ್ರೀಯ ವಿ.ವಿಯು 17 ವಿದ್ಯಾಥರ್ಿಗಳ ಮೂಲಕ ಆರಂಭಗೊಂಡು 2017-18 ನೇ ವರ್ಷದಲ್ಲಿ ಒಟ್ಟು 1426 ವಿದ್ಯಾಥರ್ಿಗಳನ್ನು ಹೊಂದಿದೆ. 2022 ರಲ್ಲಿ ವಿ.ವಿ ಯಲ್ಲಿ ಒಟ್ಟು 5000 ವಿದ್ಯಾಥರ್ಿಗಳು ಶಿಕ್ಷಣಾಥರ್ಿಗಳಾಗಬೇಕು. ದೇಶದ 16 ರಾಜ್ಯಗಳಿಂದ ಬರುವ ವಿದ್ಯಾಥರ್ಿಗಳ ಮೂಲಕ ವಿ.ವಿಯು ರಾಷ್ಟ್ರೀಯತೆಯ ಅಭಿವ್ಯಕ್ತಿಯಾಗಬೇಕು ಎಂದರು. 
   ಕೇರಳ ರಾಜ್ಯ ಬಂದರು ಇಲಾಖೆ ಸಚಿವ ಕಡನಪಳ್ಳಿ ರಾಮಚಂದ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳ ರಾಜ್ಯ ಸರಕಾರ ಸಹಿತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ಸತತ ಪ್ರೋತ್ಸಾಹ, ಸಹಕಾರ ಕೇಂದ್ರೀಯ ವಿ.ವಿ ಕೇರಳಕ್ಕೆ ಲಭ್ಯವಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ವಿವಿಧ ವಿಭಾಗಗಳನ್ನು ಹೊಂದಿ ಉನ್ನತ ವಿದ್ಯಾಭ್ಯಾಸದ ಮೂಲಕ ಮಾದರಿ ಕೇಂದ್ರವಾಗಿರುವ ಕೇರಳ ಕೇಂದ್ರೀಯ ವಿ.ವಿಯು ನೂತನ ಶೈಕ್ಷಣಿಕ ಕೇಂದ್ರ ಸಮುಚ್ಚಯದ ಲೋಕಾರ್ಪಣೆಯ ಮೂಲಕ ಹೊಸ ದಿಶೆಯಲ್ಲಿ ಸಾಗಲು ಕಾರಣವಾಗಲಿದೆ ಎಂದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಂಗಳೂರಿನಿಂದ ಪೆರಿಯಾಕ್ಕೆ ಆಗಮಿಸಿದ ಉಪರಾಷ್ಟ್ರಪತಿಯವರನ್ನು ಸಚಿವ ಕಡನಪಳ್ಳಿ ರಾಮಚಂದ್ರನ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಸಂಸದ ಪಿ.ಕರುಣಾಕರನ್, ಯು.ಜಿ.ಸಿ ಸದಸ್ಯ ಡಾ.ಜಿ.ಗೋಪಾಲ ರೆಡ್ಡಿ, ಕುಲಸಚಿವ ಡಾ.ಎ.ರಾಧಾಕೃಷ್ಣನ್ ನಾಯರ್ ಉಪಸ್ಥಿತರಿದ್ದರು. ಉಪಕುಲಪತಿ ಡಾ.ಜಿ.ಗೋಪಕುಮಾರ್ ಸ್ವಾಗತಿಸಿ, ವಿಶ್ವ ವಿದ್ಯಾನಿಲಯದ ಕಾರ್ಯಕಾರಿ ಸದಸ್ಯ ಡಾ.ಕೆ.ಜಯಪ್ರಸಾದ್ ವಂದಿಸಿದರು.  ಶಾಸಕ ಕೆ.ಕುಞರಾಮನ್, ಎನ್.ಎ.ನೆಲ್ಲಿಕುನ್ನು, ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries