HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ವಿದ್ಯುತ್ ಮೀಟರ್ ಕಳಪೆ-ಎಲ್ಲೆಡೆ ಜನರೋಷ
  ಬದಿಯಡ್ಕ: ಬದಿಯಡ್ಕ ವಿದ್ಯುತ್ ಉಪ ವಿಭಾಗ ವ್ಯಾಪ್ತಿಯ ಸುಮಾರು 2 ಸಾವಿರ ಗ್ರಾಹಕರ ನೂತನ ವಿದ್ಯುತ್ ಮೀಟರ್ ಗಳು ಕಳಪೆ ಗುಣಮಟ್ಟದವುಗಳಾಗಿರುವುದರಿಂದ ಈಗಾಗಲೇ ತನ್ನ ಕಾರ್ಯಕ್ಷಮತೆಯನ್ನು ಬಿಂಬಿಸತೊಡಗಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಹಕರ ಭಾರೀ ನಷ್ಟಕ್ಕೆ ಕಾರಣವಾಗುತ್ತಿದೆ.
   ಬದಿಯಡ್ಕ ವ್ಯಾಪ್ತಿಯ 2 ಸಾವಿರ ಮಂದಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಹಿಂದೆಯಷ್ಟೆ ಬದಲಾಯಿಸಿ ನೀಡಲಾದ ನೂತನ ವಿದ್ಯುತ್ ಮೀಟರ್ಗಳು ಚಾಲಿತಗೊಳ್ಳದಿರುವುದು ಕಂಡುಬಂದಿದೆ. ಜೊತೆಗೆ ಹಲವು ಮೀಟರ್ ಗಳು ಗ್ರಾಹಕರು ಬಳಸುವ ವಿದ್ಯುತ್ ನ್ನು ಇಮ್ಮಡಿಯಾಗಿ ತೊರಿಸುತ್ತಿರುವ ಬಗೆಗೂ ದೂರುಗಳು ಕೇಳಿಬರತೊಡಗಿದೆ.
   ಬದಲಾಯಿಸಿ ನೀಡಲಾದ ಹೊಸ ಮೀಟರ್ ಒಮ್ಮಿಂದೊಮ್ಮೆಗೆ ಇಮ್ಮಡಿ ವಿದ್ಯುತ್ ಬಳಕೆಯ ಸೂಚನೆ ತೋರಿಸಿದ್ದರಿಂದ ಹಲವು ಗ್ರಾಹಕರು ವಿದ್ಯುತ್ ವಿಭಾಗೀಯ ಕಚೇರಿಗೆ ತೆರಳಿ ಹಳೆಯ ಮಾದರಿಯ ಮೀಟರ್ ನ್ನು ಮತ್ತೆ ಪರೀಕ್ಷಾರ್ತವಾಗಿ ಬಳಸಿದಾಗ ಈ ಹಿಂದಿದ್ದ ಬಳಕೆಯಂತೆ ರೀಡಿಂಗ್ ತೊರಿಸಿರುವುದರಿಂದ ಹೊಸ ಮೀಟರ್ ಗಳ ಗುಣಮಟ್ಟ ನಂಬಲರ್ಹವಲ್ಲ ಎಮದು ವಿದ್ಯುತ್ ಇಲಾಖೆಯ ಅಧಿಕೃತರು ತಿಳಿಸಿದ್ದಾರೆ. ಈ ಕಾರಣದಿಂದ ಮೂರು ತಿಂಗಳ ಹಿಂದೆ ಮರು ಜೋಡಿಸಲಾದ ಮೀಟರ್ ಗಳನ್ನು ಮತ್ತೆ ಬದಲಾಯಿಸಬೇಕಿದ್ದು, ಇದು ಗ್ರಾಹಕರಿಗೆ ಹಾಗೂ ಇಲಾಖೆಗೆ ಭಾರೀ ನಷ್ಟವುಂಟುಮಾಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries