HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಬನಾರಿ ಯಕ್ಷಗಾನ ಸಂಘದ 74ನೇ ವರ್ಷದ ವಾಷರ್ಿಕೋತ್ಸವ, ಸನ್ಮಾನ, ಬಯಲಾಟ
   ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 74ನೇ ವಾಷರ್ಿಕೋತ್ಸವ, ಕೀರಿಕ್ಕಾಡು ಪ್ರಶಸ್ತಿ ಪ್ರಧಾನ, ಶೇಣಿ ಶತಮಾನ ಸಂಸ್ಮರಣೆ ಮೇ.26 ರಂದು ಬನಾರಿಯ ಕೀರಿಕ್ಕಾಡು ಸ್ಮಾರಕ ಸಭಾ ಭವನದಲ್ಲಿ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಅಮದು ಬೆಳಿಗ್ಗೆ 10ಕ್ಕೆ ಶ್ರೀಮಹಾಗಣಪತಿ ಹವನ, 11ಕ್ಕೆ ಶ್ರೀಗೋಪಾಲಕೃಷ್ಣ ದೇವರ ಪೂಜೆ, ಅಪರಾಹ್ನ 2 ರಿಂದ "ಸಮರ ಸನ್ನಾಹ" ಯಕ್ಷಗಾನ ತಾಳಮದ್ದಳೆ, 3.30 ರಿಂದ ಭಕ್ತಿಗೀತೆ, ಸಮೂಹ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
   ಸಂಜೆ 4 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸುವರು. ಡಾ.ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡುವರು. ಈ ಸಂದರ್ಭ ಹಿರಿಯ ಸಾಹಿತಿ ಎಂ.ವಿ. ಭಟ್ ಬೆಂಗಳೂರು ರವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಗುವುದು. ಪ್ರೊ.ಹರಿನಾರಾಯಣ ಮಾಡಾವು ಅಭಿನಂದನಾ ಭಾಷಣ ಮಾಡುವರು. ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲ ವೆಂಕಟರಮಣ ಭಟ್ ಶೇಣಿ ಶತಮಾನ ಸ್ಮರಣೆ ನಡೆಸುವರು. ಎ.ನಾರಾಯಣ ನಾಕ್ ಊಜಂಪಾಡಿ ಶುಭಾಶಂಸನೆಗೈಯ್ಯುವರು. ಬಳಿಕ ಭೀಮ-ದ್ರೌಪದಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. 7.30 ರಿಂದ ಸರೋಜಿನಿ ಬನಾರಿಯವರ ಶಿಷ್ಯವೃಂದದವರಿಂದ ಕಾಳಿಂಗ ಮರ್ಧನ ಪ್ರಸಂಗದ ಯಕ್ಷಗಾನ ಬಯಲಾಟ, 8.15 ರಿಂದ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಿಂದ ಮಾರಣಾದ್ವರ-ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ಬನಾರಿ ಶ್ರೀಗೋಪಾಲಕೃಷ್ಣ ಕಲಾಸಂಗದ ಅಧ್ಯಕ್ಷ ವನಮಾಲಾ ಕೇಶವ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries