HEALTH TIPS

No title

               ಶೇಣಿ ನಮ್ಮ ನೆಲದ ಕಲೆಯ ಹೆಮ್ಮೆಯ ಪ್ರತೀಕ- ಎಂ.ನಾ
              ಮುಳಿಯಾರಿನಲ್ಲಿ ಸಂಪನ್ನಗೊಂಡ ಶೇಣಿ ಶತಕ ಸರಣಿ
  ಮುಳ್ಳೇರಿಯ: ರಂಗದ ಮಾತನ್ನು ದ್ವನಿಪೂರ್ಣ ಕಾವ್ಯವನ್ನಾಗಿಸಿ ಏಕಕಾಲಕ್ಕೆ ಪಂಡಿತ-ಪಾಮರರನ್ನೂ ಮುಟ್ಟಿದ, ತಟ್ಟಿದ ಮಾತುಗಾರಿಕೆಯ ಮಹಾಮರ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಲೋಕದ ಮಾತುಗಾರಿಕೆಗೆ ಹೊಸ ಆವಿಷ್ಕಾರ ಕೊಟ್ಟ ಶಕಪುರುಷ. ಅವರು ಕುಂಬಳೆ ಸೀಮೆಯಲ್ಲಿ ಹುಟ್ಟಿ, ಪಾತರ್ಿಸುಬ್ಬನ ಬಳಿಕ ಈ ನೆಲದ ಕೀತರ್ಿಯನ್ನು ಎತ್ತರಿಸಿದವರು. ಅವರ ಬದುಕು -ಸಾಧನೆ ನಮ್ಮ ಅಭಿಮಾನ ಮತ್ತು ಆದರ್ಶವಾಗಬೇಕು.  ಶೇಣಿ ನಮ್ಮ ನೆಲದ ಕಲೆಯ ಹೆಮ್ಮೆಯ ಪ್ರತೀಕ. ಶೇಣಿಯಂಥ ಸಾಧಕರ ಕೊಡುಗೆಯನ್ನು ಗಡಿನಾಡಿನ ಮುಂದಿನ ತಲೆಮಾರಿಗೆ ಸಮರ್ಥವಾಗಿ ಪರಿಚಯಿಸುವ ಕೆಲಸ ಆಗಬೇಕು. ಈ ದಿಶೆಯಲ್ಲಿ ಶೇಣಿ ಶತಕ ಸರಣಿ ಸ್ತುತ್ಯರ್ಹ ಹಾದಿಯಲ್ಲಿದೆ ಎಂದು ಹಿರಿಯ ಪತ್ರಕರ್ತ, ಕಲಾಚಿಂತಕ, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
      ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರತಿಷ್ಠಾ ವಾಷರ್ಿಕದಂಗವಾಗಿ ಮೇ 28ರಂದು ಶೇಣಿ ರಂಗಜಂಗಮ ಟ್ರಸ್ಟ್  ಕಾಸರಗೋಡು ಇದರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಶೇಣಿ ಶತಕ ಸರಣಿ-4ರ ಕಾರ್ಯಕ್ರಮದಂಗವಾಗಿ ಏರ್ಪಡಿಸಿದ 'ಶೇಣಿ ಸಂಸ್ಮರಣೆ -ತಾಳಮದ್ದಳೆ ಅಭಿಯಾನ'ದಲ್ಲಿ  ಅವರು ಸಂಸ್ಮರಣೆ ಮಾಡಿ ಮಾತನಾಡಿದರು.
  ಕಾಸರಗೋಡಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಕಾಪಾಡುತ್ತಿರುವುದು ಯಕ್ಷಗಾನವೆಂಬ ರಂಗಸಂಸ್ಕೃತಿ ಎಂದರು.
 ಮುಳಿಯಾರು ಶ್ರೀಕ್ಷೇತ್ರದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ,  ಯಕ್ಷಗಾನ ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್, ಅಡ್ಕ ಸುಬ್ರಹ್ಮಣ್ಯ ಭಟ್ ಶುಭಾಶಂಸನೆಗೈದರು. ನಿವೃತ್ತ ಬ್ಯಾಂಕ್ ಅಧಿಕಾರಿ ಎನ್. ಸುಬ್ರಾಯ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದರು. ಯಕ್ಷಗಾನ ಕಲಾವಿದ ವಾಮನ ಆಚಾರ್ಯ ಬೋವಿಕಾನ ಸ್ವಾಗತಿಸಿದರು. ಗೋವಿಂದ ಭಟ್ ಬಳ್ಳಮೂಲೆ ಪ್ರಾರ್ಥನೆ ಹಾಡಿ ಸಭೆಗೆ ಚಾಲನೆ ಇತ್ತರು. ಶೇಣಿ ರಂಗಜಂಗಮ ಟ್ರಸ್ಟ್ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಧೂರು ಬಾಲಕೃಷ್ಣ ಅಗ್ಗಿತ್ತಾಯ ವಂದಿಸಿದರು.  ಬಳಿಕ ನಡೆದ 'ಕೃಷ್ಣಾಜರ್ುನ ಕಾಳಗ' ಆಖ್ಯಾನದ ತಾಳಮದ್ದಳೆ ಪ್ರತಿಷ್ಠಾ ವಾಷರ್ಿಕದ ಸಂಜೆಯನ್ನು ಸಂಪನ್ನ, ಸಮೃದ್ಧಗೊಳಿಸಿತು.  ಭಾಗವತರಾಗಿ ಜಿ.ಕೆ.ನಾವಡ ಬಾಯಾರು, ಶಾಲಿನಿ ಹೆಬ್ಬಾರ್, ಮದ್ದಳೆಯಲ್ಲಿ ಚೈತನ್ಯಕೃಷ್ಣ ಪದ್ಯಾಣ, ಚೆಂಡೆಯಲ್ಲಿ ರಾಮಮೂತರ್ಿ ಕುದ್ರೆಕೋಡ್ಲು, ವರುಣ್ ಹೆಬ್ಬಾರ್ ಪಾಲ್ಗೊಂಡರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರವಿರಾಜ ಪನೆಯಾಲ,  ಪಶುಪತಿ ಶಾಸ್ತ್ರಿ, ರಾಮಜೋಯಿಸ ಬೆಳ್ಳಾರೆ, ದಿವಾಣ ಶಿವಶಂಕರ ಭಟ್, ಶೇಣಿ ವೇಣುಗೋಪಾಲ ಭಟ್ ಪಾಲ್ಗೊಂಡರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries