HEALTH TIPS

No title

             ಕ್ಷೀರ ಕೃಷಿಕರಿಗೆ ಮಾಹಿತಿ ಶಿಬಿರ
   ಕುಂಬಳೆ : ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಅಳವಡಿಸಿಕೊಂಡು ಯುವಜನತೆಯು ಸ್ವ ಉದ್ಯೋಗವನ್ನು ಕೈಗೊಂಡರೆ ಅದು ಗ್ರಾಮಾಭಿವೃದ್ಧಿಗೆ ಪೂರಕವಾಗಲು ಸಾಧ್ಯ ಎಂದು ಕುಂಬಳೆ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎಲ್. ಪುಂಡರೀಕಾಕ್ಷ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕಾರ್ಯಾರಂಭವಾದ ಬಂಬ್ರಾಣ ಕ್ಷೀರೋತ್ಪಾದಕ ಸಹಕಾರಿ ಸಂಘದ ಸದಸ್ಯರಿಗೆ ನಡೆದ `ಮಾಹಿತಿ ಶಿಬಿರ'ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಗೋವನ್ನು ಸಾಕುವ ಮೂಲಕ  ಕೃಷಿಯನ್ನು ಉತ್ತಮಪಡಿಸಿಕೊಳ್ಳಬಹುದು ಎಂದ ಅವರು ಕೃಷಿಕರಿಗೆ ಗ್ರಾಮಪಂಚಾಯತು ವತಿಯಿಂದ ದೊರಕುವ ವಿವಿಧ ಸವಲತ್ತುಗಳ ವಿವರಣೆಯನ್ನು ಸಭೆಗೆ ನೀಡಿದರು.
  ಕುಂಬಳೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕ್ಷೀರೋತ್ಪಾದಕ ಸಹಕಾರಿ ಸಂಘವು ಅಭಿವೃದ್ಧಿಯನ್ನು ಹೊಂದುವುದರೊಂದಿಗೆ ಗ್ರಾಮದ ಜನತೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಶ್ರಮಿಸಲಿ ಎಂದರು.
  ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಂಬಳೆ ಗ್ರಾಮಪಂಚಾಯತು ಸದಸ್ಯ ಮುರಲೀಧರ ಯಾದವ್ ನಾಯ್ಕಾಪು ಮಾತನಾಡಿ ಕಠಿಣ ಪರಿಶ್ರಮದಿಂದ ಹೈನುಗಾರಿಕೆಯನ್ನು ಕೃಷಿಯೊಂದಿಗೆ ಅಳವಡಿಸಿಕೊಂಡರೆ ವಿಷಮುಕ್ತ ಪರಿಸರ ನಮ್ಮದಾಗುವುದಲ್ಲದೆ, ಆರೋಗ್ಯಪೂರ್ಣ ಆಹಾರವನ್ನು ನಾವು ಸೇವಿಸಬಹುದು. ತನ್ಮೂಲಕ ರೋಗಮುಕ್ತ ಬದುಕು ನಮ್ಮದಾಗುತ್ತದೆ ಎಂದರು.
  ಅಂಬಿಲಡ್ಕ ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ರವಿಕಲಾ ಎಸ್. ಶೆಟ್ಟಿ,ಬಂಬ್ರಾಣ ಕ್ಷೀರೋತ್ಪಾದಕ ಸಹಕಾರಿ ಸಂಘದ ಸದಸ್ಯ ನಾಗರಾಜ ಶೆಟ್ಟಿ  ಉಪಸ್ಥಿತರಿದ್ದು ಮಾತನಾಡಿದರು. ಕಾಸರಗೋಡು ಬ್ಲಾಕ್ ಕ್ಷೀರ ವಿಸ್ತರಣಾ ಅಧಿಕಾರಿ ಬಬೀನಾ ಮರಿಯ ತರಗತಿಯನ್ನು ನಡೆಸಿಕೊಟ್ಟರು. ಅಪ್ಪಣ್ಣ ಬಿ.ಎಸ್. ಸ್ವಾಗತಿಸಿ, ಶರತ್ ಕುಮಾರ್ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries