HEALTH TIPS

No title

                ಭಯೋತ್ಪಾದನೆ ನಿಲ್ಲಿಸುವವರೆಗೆ ಪಾಕ್ ಜತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್
     ನವದೆಹಲಿ: ಪಾಕಿಸ್ತಾನ ತಾನು ಭಯೋತ್ಪಾದನೆಯನ್ನು ಪೋಷಿಸುವುದನ್ನು ನಿಲ್ಲಿಸುವವರೆಗೆ  ಆ ರಾಷ್ಟ್ರದೊಡನೆ ಯಾವ ರೀತಿಯ ಸಂಭಾಷಣೆ ಸಾಧ್ಯವಿಲ್ಲ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
      ಗಡಿಯಲ್ಲಿ ಜನ ಸಾಯುತ್ತಿರುವಾಗ ಮಾತುಕತೆ ಸೂಕ್ತವಲ್ಲ ಎಂದು ಆವರು ಪ್ರತಿಪಾದಿಸಿದರು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಾವು ಯಾವಾಗಲೂ ಸಿದ್ಧರಿದ್ದೇವೆ ಆದರೆ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಾಗಿ ನಡೆಯದು, ಪಾಕಿಸ್ತಾನ ಭಯೋತ್ಪಾದನೆಯನ್ನು ಬಿಡುವವರೆಗೆ ಮಾತುಕತೆ ಇಲ್ಲ ಅವರು ಹೇಳಿದರು.ನರೇಂದ್ರ ಮೋದಿ ನೇತೃತ್ವದ ಸಕರ್ಾರ.ನಾಲ್ಕು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
   ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರದಲ್ಲ್ಲಿ ಭಾರತ ಪಾಕ್ ಮಾತುಕತೆ ಮತ್ತೆ ಪ್ರಾರಂಭವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ ಭಾರತ ಮತ್ತು ಪಾಕಿಸ್ತಾನದ ಎನ್ಎಸ್ಎಗಳು ಭಯೋತ್ಪಾದನೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಒಪ್ಪಿಕೊಂಡರು.
   ಗಿಲ್ಗಿಟ್-ಬಾಲ್ತಿಸ್ಥಾನ್ ಆರ್ಡರ್ 2018ರ ಕುರಿತಂತೆ ಮಾತನಾಡಿದ ಸ್ವರಾಜ್ ಪಾಕಿಸ್ತಾನ ಯಾವಾಗಲೂ "ಇತಿಹಾಸವನ್ನು ವಿರೂಪಗೊಳಿಸುತ್ತದೆ" ಎಂದು ಹೇಳಿದರು."ಪಾಕ್ ನಮಗೆ ಭೂಗೋಳ ಹಾಗೂ ಇತಿಹಾಸದ ಪಾಠ ಹೇಳಲು ಪ್ರಯತ್ನಿಸುತ್ತದೆ. ಪಾಕಿಸ್ತಾನ ಒಂದು ನ್ಯಾಯಪರ ಆಡಳಿತದ ಕುರಿತು ನಂಬಿಕೆ ಇಲ್ಲದ ದೇಶವಾಗಿದೆ. " ಎಂದರು.
ಮೇ 21 ರಂದು ಪಾಕಿಸ್ತಾನದ ಕ್ಯಾಬಿನೆಟ್ ಗಿಲ್ಗಿಟ್-ಬಾಲ್ಟಿಸ್ತಾನ್ ಆರ್ಡರ್ 2018 ಅನ್ನು ಅಂಗೀಕರಿಸಿತು. ವಿವಾದಿತ ಪ್ರದೇಶವನ್ನು ಪಾಕಿಸ್ತಾನದ ಐದನೇ ಪ್ರಾಂತ ಎಂದು ಸೇರಿಸುವದಕ್ಕೆ ಇಸ್ಲಾಮಾಬಾದ್ ಪ್ರಯತ್ನಿಸುತ್ತಿದ್ದು ಇದೇ ಪ್ರಯತ್ನದ ಭಾಗವಾಗಿ ಈ ಆದೇಶ ಅಂಗೀಕಾರವಾಗಿದೆ.
  ದೆಹಲಿಯಲ್ಲಿ ಪಾಕಿಸ್ತಾನದ ಉಪ ಕಮಿಷನರ್ ಸೈಯದ್ ಹೈದರ್ ಷಾ ಅವರನ್ನು ಬಾನುವಾರ ಭೇಟಿಯಾಗಿದ್ದ ಭಾರತ ಪಾಕಿಸ್ತಾನದ ಕ್ರಮವನ್ನು ಬಲವಾಗಿ ಪ್ರತಿಭಟಿಸಿದ್ದಲ್ಲದೆ ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ, ಇದೊಂದು  ಬಲವಂತದ ಮತ್ತು ಕಾನೂನುಬಾಹಿರ ಆಕ್ರಮಣ  ಎಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries