ಕಾಮರ್ಿಕ ದಿನಾಚರಣೆ-ಮೋದಿ ಸರಕಾರ ದುಡಿಯುವ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ: ಶಾಹುಲ್ ಹಮೀದ್
ಮಂಜೇಶ್ವರ: ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿದ ಬಿಜೆಪಿ ಸರಕಾರ ಕಾಮರ್ಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಮರ್ಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ದುಡಿಯುವ ವರ್ಗದ ಹಕ್ಕನ್ನು ಕಸಿದುಕೊಳ್ಳುವ ಶ್ರಮ ಆರಂಭಗೊಂಡಿದೆ. ಈ ಬಗ್ಗೆ ಜಾಗೃತರಾಗದಿದ್ದರೆ ಕಾಮರ್ಿಕರಿಗೆ ರಾಷ್ಟ್ರದಲ್ಲಿ ಉಳಿಗಾಲವಿರಲಾರದು ಎಂದು ಐ ಎನ್ ಟಿ ಯು ಸಿ ಜಿಲ್ಲಾ ಪ್ರ. ಕಾರ್ಯದಶರ್ಿ ಶಾಹುಲ್ ಹಮೀದ್ ಹೇಳಿದರು.
ಅವರು ಹೊಸಂಗಡಿಯಲ್ಲಿ ಸಂಯುಕ್ತ ಟ್ರೇಡ್ ಯೂನಿಯನಿನ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾಮರ್ಿಕರ ದಿನದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಮರ್ಿಕರನ್ನು ಧರ್ಮದ, ಜಾತಿಯ ಹೆಸರಿನಲ್ಲಿ ವಿಭಜಿಸುವ ಯತ್ನ ನಡೆಯುತ್ತಿದೆ. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ಮೂಲಕ ಭಾರತದಲ್ಲಿ ದೊಡ್ಡ ದೊಡ್ಡ ಕೈಗಾರಿಕೋಧ್ಯಮಿಗಳು ದಿನದಿಂದ ದಿನಕ್ಕೆ ಕೊಬ್ಬಿ ಬೆಳೆಯುವಾಗ ಕಾಮರ್ಿಕರು ದಿನದಿಂದ ದಿನಕ್ಕೆ ಇದ್ದ ಹಕ್ಕುಗಳನ್ನು ಸಂರಕ್ಷಿಸಲು ಹೋರಾಟಕ್ಕಾಗಿ ಬೀದಿಗಿಳಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿ ವಿ ರಾಜನ್ ಅಧ್ಯಕ್ಷತೆ ವಹಿಸಿದರು. ರಾಮ, ಸಂಜೀವ ಶೆಟ್ಟಿ, ಮೊಹಮ್ಮದ್ ಸೀಗಂದಡಿ, ಕೆ ಆರ್ ಜಯಾನಂದ, ಜಯರಾಮ ಬಲ್ಲಂ ಗುಡೇಲ್ ಮೊದಲಾದವರು ಮಾತನಾಡಿದರು.
ನೇತಾರರ ಸಹಿತ ವಿವಿಧ ಸಂಘಟನೆಯ ಹಲವಾರು ಮಂದಿ ಪಾಲ್ಗೊಂಡರು. ಇದಕ್ಕೂ ಮೊದಲು ಕಾಮರ್ಿಕರಿಂದ ಬೃಹತ್ ರ್ಯಾಲಿ ನಡೆಯಿತು.