HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ರಾಜ್ಯ ಸರಕಾರ ಕೈಗಾರಿಕೆಗಳ ಅಭಿವೃದ್ದಿಗೆ ಬಲ ನೀಡಲಿದೆ-ಸಚಿವ ಎ.ಸಿ.ಮೊಯ್ದೀನ
      ಕುಂಬಳೆ: ಹಿನ್ನಡೆಯಲ್ಲಿರುವ ಕೈಗಾರಿಕೆಗಳನ್ನು ಸರಕಾರ ಮುನ್ನೆಲೆಗೆ ತರುವಲ್ಲಿ ಉತ್ಸುಕವಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎ.ಸಿ.ಮೊಯ್ದೀನ್ ತಿಳಿಸಿದರು.
   ರಾಜ್ಯ ಸರಕಾರದ ಎರಡನೇ ವಷರ್ಾಚರಣೆಯ ಅಂಗವಾಗಿ ಅನಂತಪುರ ಕೈಗಾರಿಕಾ ಪ್ರಾಂಗಣದ ನೂತನ ರಸ್ತೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
   ಅನಂತಪುರ ಕೈಗಾರಿಕಾ ವಲಯವನ್ನು ಇನ್ನಷ್ಟು ವಿಸ್ತರಿಸಲು ಸರಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ. ಇಲ್ಲಿಯ ವಿದ್ಯುತ್ ಸೌಕರ್ಯವನ್ನು ಉನ್ನತ ಮಟ್ಟಕ್ಕೇರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.ಕೈಗಾರಿಕಾ ಪ್ರಾಂಗಣದಲ್ಲಿ ಇನ್ನೂ ಯಾವುದೇ ಕೈಗಾರಿಕೆಗಳನ್ನು ಹಮ್ಮಿಕೊಳ್ಳದವರಿಂದ ನಿವೇಶನವನ್ನು ಹಿಂಪಡೆದು ಕೈಗಾರಿಕಾಸಕ್ತರಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸಲಿದೆ. ಉದ್ಯೋಗ ಸೃಷ್ಟಿಯ ದೂರದಶರ್ಿತ್ವದಿಂದ ಸ್ವ ಉದ್ಯೋಗಾಸಕ್ತರಿಗೆ ಶೇ.75 ಪ್ರೋತ್ಸಾಹ ನೀಡಲಿದೆ ಎಂದು ಸಚಿವರು ತಿಳಿಸಿದರು.
  ಶಾಸಕ ಎಂ. ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತು ಸದಸ್ಯ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಬ್ಲಾ.ಪಂ.ಸದಸ್ಯ ಎಂ.ಪ್ರದೀಪ್ ಕುಮಾರ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಜೆ, ಸದಸ್ಯೆ ಫಾಯಿಸಾ ರಫೀಕ್, ಜಿಲ್ಲಾ ಕಿರು ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷ ಕೆ.ಟಿ.ಸುಭಾಶ್ ನಾರಾಯಣ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ಪ್ರಬಂಧಕ ಎಂ.ವಿ ಅಬ್ದುಲ್ ರಶೀದ್, ಸ್ವಾಗತಿಸಿ, ಅನಂತಪುರ ಕೈಗಾರಿಕಾ ಪ್ರಾಂಗಣ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷ ಕೆ.ಎಂ. ಫಿರೋಝ್ಖಾನ್ ವಂದಿಸಿದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries