HEALTH TIPS

No title

               ಸ್ವರ್ಗ ಶಾಲಾ ಪ್ರವೇಶೋತ್ಸವ; ಬ್ಯಾಗ್,ಕೊಡೆ,ಸಿಹಿತಿಂಡಿ-ಪಾಯಸ ವಿತರಣೆ
    ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2018-19 ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಒಂದನೇ ತರಗತಿಗೆ ಸೇರ್ಪಡೆಯಾದ ವಿದ್ಯಾಥರ್ಿಗಳ ಪ್ರವೇಶೋತ್ಸವ ಸಮಾರಂಭ ಶುಕ್ರವಾರ ನಡೆಯಿತು.ಚೆಂಡೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಹೊಸದಾಗಿ ಸೇರ್ಪಡೆಗೊಂಡ ವಿಧ್ಯಾಥರ್ಿಗಳನ್ನು ಸ್ವಾಗತಿಸಲಾಯಿತು.
  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವರ್ಗ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ.ವೈ. ಅಧ್ಯಾಪಕರು ಚಲನಾ ಶೀಲರಾದರೆ ಪವಾಡಗಳನ್ನು ಸೃಷ್ಟಿಸಬಹುದು. ಜ್ಞಾನದ ಬೆಳಕನ್ನು ಪಸರಿಸುವ, ಬೋಧಕರ ಕತೃತ್ವ ಮಹತ್ವದ್ದಾದುದು ಎಂದು ಹೊಸದಾಗಿ ಸೇರ್ಪಡೆಯಾದ ವಿದ್ಯಾಥರ್ಿ ಗಳಿಗೆ ಶುಭ ಹಾರೈಸಿದರು.
   ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರ, ಸ್ಥಳೀಯ ವೈದ್ಯ ಮೋಹನ ಕುಮಾರ್ ವೈ.ಎಸ್ ಅವರು ಮಾತನಾಡಿ ವಿವೇಕಾನಂದರು ಹೇಳಿದಂತೆ ಶಿಕ್ಷಣ ಅಂದರೆ ವ್ಯಕ್ತಿತ್ವ ನಿಮರ್ಾಣ,ವ್ಯಕ್ತಿತ್ವ ನಿಮರ್ಾಣದ ಮೂಲಕ ಚಾರಿತ್ರ್ಯ ನಿಮರ್ಾಣ, ಚಾರಿತ್ರ್ಯ ನಿಮರ್ಾಣದಿಂದ ರಾಷ್ಟ್ರ ನಿಮರ್ಾಣಕ್ಕೆ ಪ್ರೇರಕವಾಗುವುದು. ಹೊಸ ಶೈಕ್ಷಣಿಕ ವರ್ಷದಲ್ಲಿ ಓದಿನ ಚಟುವಟಿಕೆಯ ಜತೆಗೆ ವಿದ್ಯಾಥರ್ಿಗಳು ಸಾಮಾಜಿಕ ಮೌಲ್ಯ ವರ್ಧನೆಯ ಚಟುವಟಿಕೆಗಳಲ್ಲೂ ಪಾಲ್ಗೊಂಡು ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ ಕಾಣಬೇಕು ಹಾಗೂ ಕ್ರಿಯಾತ್ಮಕವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಸುಂದರ ಭಾರತದ ನಿಮರ್ಾಣದ ಶಿಲ್ಪಿಗಳಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಸುದರ್ಶನ ಮಹಿಳಾ ಘಟಕದ ಸಂಚಾಲಕಿ
ಶ್ಯಾಮಲಾ ಆರ್ ಭಟ್ ಪತ್ತಡ್ಕ ಶುಭಾಶಂಸನೆ ಗೈದರು.
  ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ಸುದರ್ಶನ ವತಿಯಿಂದ ಸಮಿತಿ ಮಾರ್ಗದರ್ಶಕರಾಗಿರುವ ಡಾ ಮೋಹನ ಕುಮಾರ್ ವೈ ಎಸ್, ಸುಬ್ರಹ್ಮಣ್ಯ ಭಟ್ ಕೆ.ವೈ ಅವರು ಒಂದನೇ ತರಗತಿಗೆ ಸೇರ್ಪಡೆಯಾದ ಎಲ್ಲಾ ವಿದ್ಯಾಥರ್ಿಗಳಿಗೂ ಬ್ಯಾಗ್ ಹಾಗೂ ಕೊಡೆ, ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆ -ಸ್ವರ್ಗ ವತಿಯಿಂದ ಅಥರ್ಿಕವಾಗಿ ತೀರಾ ಹಿಂದುಳಿದ ವಿದ್ಯಾಥರ್ಿಗಳಿಗೆ ವಿತರಿಸಲಾದ ಬ್ಯಾಗ್ ಗಳನ್ನು ಪ್ರಭಂಧಕ ಶ್ರೀಧರನ್ ನಾಯರ್ ವಿತರಿಸಿದರು
     ಶಿಕ್ಷಕ ರಕ್ಷಕ ಸಂಘ,ಸುದರ್ಶನ ಕ್ರಿಯಾ ಸಮಿತಿ ವತಿಯಿಂದ ಸಿಹಿತಿಂಡಿ,ಮಧ್ಯಾಹ್ನದ ಊಟದ ವೇಳೆ ಪಾಯಸ ವಿತರಣೆ ನಡೆಯಿತು. ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್. ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್ ಪ್ರಕಾಶ್ ನೇರೋಳು, ಮಾತೃ ಸಂಘದ ಚಂದ್ರಾವತಿ ಎ.ಟಿ., ಅಧ್ಯಾಪಕ-ಸಿಬಂದಿ ವರ್ಗ, ವಿದ್ಯಾಥರ್ಿಗಳು, ಪೋಷಕರು,ಸುದರ್ಶನ ಕ್ರಿಯಾ ಸಮಿತಿಯ ಅಜಿತ್ ಸ್ವರ್ಗ, ಜಗದೀಶ್ ಕುತ್ತಾಜೆ,ವಿವಿಧ ಘಟಕಗಳ ಪದಾಧಿಕಾರಿಗಳು,ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
   ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ ಸ್ವಾಗತಿಸಿ, ಅಧ್ಯಾಪಕ ಸಚ್ಚಿದಾನಂದ ಮುಗೇರು ವಂದಿಸಿದರು. ಅಧ್ಯಾಪಕ ವೆಂಕಟ ವಿದ್ಯಾಸಾಗರ ಕಾರ್ಯಕ್ರಮ ನಿರೂಪಿಸಿದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries