HEALTH TIPS

No title

                 ಧೈರ್ಯ, ಆತ್ಮವಿಶ್ವಾಸಗಳಿಗೆ ಕ್ರೀಡೆಗಳು ಸ್ಪೂತರ್ಿ-ಶ್ರೀಕೃಷ್ಣ ಶಿವಕೃಪಾ 
   ಮಂಜೇಶ್ವರ: ಕೋಟಿ ಚೆನ್ನಯ್ಯರು ಕ್ರೀಡೆಯ ಮೂಲಕ ಸಮಾನತೆಯ ಹಕ್ಕಿಗಾಗಿ ಹೋರಾಟದ ಕಿಚ್ಚನ್ನು ಬೆಳೆಸಿಕೊಂಡವರು. ಅಂತಹ ಮಹಾನ್ ಪುರುಷರ ಹೆಸರಿನಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಸ್ಪಧರ್ಾತ್ಮಕ ಮನೋಬಾವದಿಂದ  ಪಾಲ್ಗೋಂಡದ್ದು ಬಿಲ್ಲವ ಸಮಾಜದ ಒಗ್ಗಟ್ಟಿಗೆ ಪ್ರಧಾನ ಪಾತ್ರವಾಗಿತ್ತೆಂದು ಕಾಸರಗೋಡು ಜಿಲ್ಲಾ ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಭಿಪ್ರಾಯ ವ್ಯಕ್ತಪಡಿಸಿದರು.
   ಅವರು ಮೀಯಪದವು ಶಾಲಾ ಮೈದಾನದಲ್ಲಿ ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಗುರುವಾರ ಜರಗಿದ ಶ್ರೀ ಕೋಟಿ-ಚೆನ್ನಯ್ಯ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಮಾತಾನಾಡಿದರು.
    ಜೀವನದಲ್ಲಿ ಹತಾಶೆ, ನಿರಾಸೆ, ಬೆಳೆಸಿಕೊಳ್ಳಬಾರದು. ಧೈರ್ಯ, ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಎಂದು ಕ್ರೀಡಾ ಪಟುಗಳಿಗೆ ಸ್ಪೂತರ್ಿಯ ಮಾತುಗಳನ್ನಾಡಿದರು. ಕೋಟಿ ಚೆನ್ನಯರು ಸತ್ಯ, ನ್ಯಾಯಧರ್ಮದ ನೆಲೆಯಲ್ಲಿ ಬದುಕಿದರೆ ನಾರಾಯಣ ಗುರುಗಳು ಸಾಮರಸ್ಯದ ಬದುಕು ನಡೆಸಿದ್ದಾರೆ. ಅವರ ಜೀವನಾದರ್ಶಗಳು ನಮಗೆ  ಸ್ಪೂತರ್ಿಯಾಗಬೇಕು. ಕ್ರೀಡಾ ಪಟುಗಳನ್ನು ಗುರುತಿಸಿ ಗೌರವಿಸಲು, ಬೆಳಕಿಗೆ ತರಲು ಇಂತಹ ಕ್ರೀಡಾ ಕೂಟಗಳಿಂದ ಮಾತ್ರ ಸಾದ್ಯವೆಂದರು.
   ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಬಿಲ್ಲವ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ ವಹಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೃಷ್ಣಪ್ಪ ಕಡಂಬಾರು ಭಂಡಾರಮನೆ ಸ್ವಾಗತಿಸಿ, ಬಿಲ್ಲವ ಸಂಘ ಮೀಂಜ ಘಟಕದ ಪ್ರಧಾನ ಕಾರ್ಯದಶರ್ಿ ರಮೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ  ಬಿಲ್ಲವ ಒಕ್ಕೂಟದ ಕೋಶಾಧಿಕಾರಿ ಅಶೋಕ್ ಎಮ್. ಸಿ ಲಾಲ್ಭಾಗ್ ವಂದಿಸಿದರು.
  ಬೆಳಿಗ್ಗೆ ನಡೆದ ಕ್ರೀಡಾ ಸ್ಪಧರ್ೆಯನ್ನು ಶ್ರೀಕ್ಷೇತ್ರ ಮಾಡದ ಆರ್ಚಕ ತಿಮ್ಮಪ್ಪ ಕಾಂಜ ಹೊಸಬೆಟ್ಟುರವರು ದೀಪ ಬೆಳಗಿಸಿ, ಕ್ರೀಡಾಂಗಣದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು ಬಿಲ್ಲವ ಶಕ್ತಿ ಮಂಗಳೂರಿನ ಸಂಘಟಕ ರವಿ ಸೂರಿಂಜೆ ಸಭಾ ಕಾರ್ಯಕ್ರಮ ದೀಪ  ಬೆಳಗಿಸಿ ಉಧ್ಘಾಟಿಸಿದರು. ಜಿಲ್ಲಾ ಬಿಲ್ಲವ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಬಿಲ್ಲವ ಸಂಘಟಕ, ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ಅಭಿವೃದ್ದಿ ಸಮಿತಿ ಸದಸ್ಯ ಡಿ. ಡಿ ಕಟ್ಟೆಮಾರ್, ಮುಡಿಮಾರು ಶ್ರೀ ಮಲರಾಯ ಗುಳಿಗ  ಕ್ಷೇತ್ರದ ಚಂದ್ರಹಾಸ ಪೂಜಾರಿ, ಕಾಸರಗೋಡು ಉದ್ಯಮಿ  ಚಂದ್ರಶೇಖರ ಸುವರ್ಣ ಕೊರಕೋಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ ಕಾಸರಗೋಡು ವಲಯ ಮೇಲ್ವಿಚಾರಕಿ ಮಧುರಾವಸಂತ್, ದಾಮೋದರ ಮೊಗ್ರಾಲ್ ಪುತ್ತೂರು, ಮೀನಾಕ್ಷಿ ಸಿ.ಕೆ ಚಿಪ್ಪಾರ್ ಮೊದಲಾದವರು ಉಪಸ್ಥಿತರಿದ್ದರು.
  ಒಕ್ಕೂಟದ ಪ್ರಧಾನ ಕಾರ್ಯದಶರ್ಿ ಚಂದ್ರಹಾಸ ಪೂಜಾರಿ ಕಡಂಬಾರು ಭಂಡಾರಮನೆ ಸ್ವಾಗತಿಸಿ, ಜೊತೆಕಾರ್ಯದಶರ್ಿ ರಾಮಕೃಷ್ಣ ಸಂತಡ್ಕ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಅಶೋಕ ಎಮ್.ಸಿ ಲಾಲ್ಭಾಗ್ ವಂದಿಸಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries