HEALTH TIPS

No title

               ಜನಾರ್ಧನ ಪ್ರತಾಪನಗರ ಸಂಸ್ಮರಣಾ ಆರೋಗ್ಯ ಶಿಬಿರ
    ಉಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತಾರರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ದಿ. ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ಭಾನುವಾರ ಉಪ್ಪಳದ ಐಲ ಶ್ರೀ ದುಗರ್ಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
   ಮಂಗಲ್ಪಾಡಿಯ ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಕೃಷ್ಣ ಪಿ ಬಂದ್ಯೋಡು ರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಆರ್ ಎಸ್ ಎಸ್ ನ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ರಾ.ಸ್ವ.ಸೇ.ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿ ಜನಾರ್ಧನ ಪ್ರತಾಪನಗರ ಅವರು ಸಲ್ಲಿಸಿದ್ದ ಚಟುವಟಿಕೆಗಳನ್ನು ಶ್ಲಾಘಿಸಿದರು. ವ್ಯಕ್ತಿಯು ಶಕ್ತಿಯಾಗಿ ಸಮಾಜೋದ್ದಾರಕ್ಕಾಗಿ ಅಪರ್ಿಸಿಕೊಂಡವರನ್ನು ಆರೋಗ್ಯ ಮಾಹಿತಿ ಶಿಬಿರ, ರಕ್ತದಾನಗಳಂತಹ ಮಹತ್ವದ ಸೇವಾ ಕಾರ್ಯದ ಮೂಲಕ ಸ್ಮರಿಸುವುದು ಮಾದರಿ ಎಂದು ಅಭಿಪ್ರಾಯಪಟ್ಟರು. ಸಂಘವು ಸಾಮಾಜಿಕ ಪರಿವರ್ತನೆಯ ದೃಷ್ಟಿಕೋನಗಳ ಮೂಲಕ ಬೆಳೆಸುವ, ಬೆಸೆಯುವ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿ ಪ್ರವತರ್ಿಸುತ್ತದೆ ಎಂದು ಅವರು ತಿಳಿಸಿದರು.
  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಐಲ ದುಗರ್ಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಎ ಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಅರವಿಂದ್, ಮಕ್ಕಳ ತಜ್ಞರಾದ ಡಾ. ಜಿತೇಂದ್ರ ರೈ ಕಾಸರಗೋಡು ಉಪಸ್ಥಿತರಿದ್ದರು. ಜನಾರ್ಧನ ಪ್ರತಾಪನಗರ ಕುರಿತಾದ ನೆನಪುಗಳನ್ನು ಅವರ ಒಡನಾಡಿ ವೀರಪ್ಪ ಅಂಬಾರ್ ನಡೆಸಿದರು.
  ಸತೀಶ ಶೆಟ್ಟಿ ಮಾಸ್ಟರ್ ಸ್ವಾಗತಿಸಿ, ರಘು ಚೆರುಗೋಳಿ ವಂದಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಕಾರ್ಯಕ್ರಮ ನಿರೂಪಿಸಿದರು. ಸುಮಾರು 125 ಮಂದಿ ರಕ್ತದಾನವನ್ನು ಮಾಡಿದರು.ಉಪ್ಪಳ ಕೆಎನ್ಎಚ್ ಆಸ್ಪತ್ರೆಯ ಸಿಬ್ಬಂದಿಯವರು 100 ಜನರ ರಕ್ತದ ಗುಂಪು ನಿರ್ಣಯ  ಪರೀಕ್ಷೆ ನಡೆಸಿಕೊಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries