HEALTH TIPS

No title

                     ಸಂಸ್ಕೃತಿ ಶಿಬಿರ ಮತ್ತು ಕಾರ್ಯಕರ್ತರ ಸಮಾವೇಶ
    ಬದಿಯಡ್ಕ : ಭಾರತ ದೇಶದ ಒಟ್ಟು ಸ್ಥಿತಿ ಹೇಗಿದೆ ಎಂಬುದನ್ನು ನಾವು ಗಂಭೀರವಾಗಿ ಅಭ್ಯಸಿಸಿದರೆ ನಮಗರಿವಿಲ್ಲದೆ ನಮ್ಮನ್ನು ನಿನರ್ಾಮ ಮಾಡಲಿಕ್ಕಿರುವ ಷಡ್ಯಂತ್ರ ನಡೆಯುತ್ತಿರುವುದು ವಾಸ್ತವವಾದ ವಿಚಾರವಾಗಿದೆ. ಕುಟುಂಬಜೀವನದಲ್ಲಿದ್ದುಕೊಂಡು ಸಮಾಜದ ಒಳಿವಿಗೋಸ್ಕರ ತನ್ನನ್ನು ತಾನು ಸಮಪರ್ಿಸಿಕೊಂಡು ನಮ್ಮ ಪಾಲಿಗೆ ಗುರುತುಲ್ಯರಾಗಿರುವ ವ್ಯಕ್ತಿ ಆರ್ಷವಿದ್ಯಾಸಮಾಜಮ್ನ ಮುಂದಾಳು ಮನೋಜ್ ಆಗಿದ್ದಾರೆ ಎಂದು ಧಾಮರ್ಿಕ ನೇತಾರ ಕುಂಟಾರು ರವೀಶ ತಂತ್ರಿ ಅಭಿಪ್ರಾಯಪಟ್ಟರು.
ಎನರ್ಾಕುಳಂನ ಆರ್ಷವಿದ್ಯಾಸಮಾಜಮ್ನ ವತಿಯಿಂದ ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಹಾಗೂ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣಕೇಂದ್ರಗಳ ನೇತೃತ್ವದಲ್ಲಿ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಶನಿವಾರ ನಡೆದ ಸಂಸ್ಕೃತಿ ಶಿಬಿರ ಮತ್ತು ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಲವ್ ಜಿಹಾದ್ ಇದೆ ಎಂದು ಪ್ರತಿಪಾದಿಸಿಕೊಂಡು ಬಂದಿರುವ ಸಂದರ್ಭದಲ್ಲಿ ರಾಜಕೀಯ ನಾಯಕರು ತಮ್ಮ ಸ್ವಾರ್ಥ ಲಾಭಕ್ಕೋಸ್ಕರ ಹೇಳಿರುವುದು ಲವ್ ಜಿಹಾದ್ ಇಲ್ಲ, ಅದು ಹಿಂದೂ ಸಂಘಟನೆಗಳ ಸೃಷ್ಟಿ ಎಂಬುದಾಗಿದೆ. ಇದಕ್ಕೆ ಆಧಾರವಾಗಿ ನಮ್ಮ ಎದುರೇ ಬೇಕಾದಷ್ಟು ಘಟನೆಗಳು ನಡೆಯುತ್ತಿದೆ. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಮಾತ್ರವಲ್ಲದೆ ನಮ್ಮ ಸಮಾಜದ ಯುವಕರನ್ನೂ ಬೇರೆ ಬೇರೆ ಆಮಿಶಗಳನ್ನೊಡ್ಡಿ ವಶೀಕರಣ ಮಾಡಿಕೊಳ್ಳುವಂತಹ ಪ್ರಯತ್ನಗಳು ನಡೆಯುತ್ತಾ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಕುದಾದ ವ್ಯವಸ್ಥೆಯನ್ನು ಕೈಗೊಳ್ಳದಿದ್ದಲ್ಲಿ ಹಲವು ತಂದೆ ತಾಯಿಗಳು ಗಂಡುಮಕ್ಕಳನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.
ನಮ್ಮ ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸುವುದಲ್ಲದೆ ಅದರಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು. ನಮ್ಮ ಮಕ್ಕಳು ಪ್ರಶ್ನೆ ಕೇಳುವಂತಹ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದಿದ್ದರೂ ತಿಳಿದವರಿಂದ ಉತ್ತರವನ್ನು ಹುಡುಕಿ ಅವರಿಗೆ ನೀಡಬೇಕು. ಹಿಂದೂ ಸಮಾಜ ತನ್ನಲ್ಲಿರುವ ಸರ್ವಸಂಪದ್ಭರಿತವಾದ ವಿಚಾರಗಳನ್ನು ಅಥರ್ೈಸಲು ಮುಂದಾಗಬೇಕು ಅವರು ತಿಳಿಸಿದರು.
   ಕಾಸರಗೋಡು ಚಿನ್ಮಯ ಮಿಶನ್ನ ಶ್ರೀ ವಿವಿಕ್ತಾನಂದ ಸ್ವಾಮಿಯವರು ಆಶೀರ್ವಚನವನ್ನು ನೀಡುತ್ತಾ ಭಾರತೀಯ ಸಂಸ್ಕೃತಿಯ ಮಹತ್ವದ ಅರಿವಿನ ಕೊರತೆಯೇ ಮತಾಂತರಕ್ಕೆ ಪ್ರಮುಖ ಕಾರಣವಾಗಿದೆ. ನಮ್ಮ ಧರ್ಮದ ಕುರಿತು ಇಡೀಕುಟುಂಬಕ್ಕೇ ಗೊತ್ತಿರುವುದಿಲ್ಲ. ಹಿಂದೂ ಧರ್ಮದ ಕುರಿತು ಕೆಟ್ಟದಾಗಿ ಮಾತನಾಡುವ ಸಂದರ್ಭದಲ್ಲಿ ಅದಕ್ಕೆದುರಾಗಿ ಮಾತನಾಡುವ ತಿಳುವಳಿಕೆ ನಮಗಿರಬೇಕು ಎಂದರು.
ಆರ್ಷವಿದ್ಯಾಸಮಾಜಮ್ನ ಯೋಗಾಚಾರ್ಯ ಕೆ.ಆರ್. ಮನೋಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಟಿ.ಆರ್.ಕೆ.ಭಟ್ ಪೆರ್ಲ, ಪ್ರೇಮ ಬಾರಿತ್ತಾಯ ಅಡೂರು, ರಾಮಪ್ಪ ಮಂಜೇಶ್ವರ ಅವರುಗಳನ್ನು ಗೌರವಿಸಲಾಯಿತು. ಶಿವಳ್ಳಿ ಬ್ರಾಹ್ಮಣ ಸಭಾ ಹಾಗೂ ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಆರ್ಷವಿದ್ಯಾಸಮಾಜಕ್ಕೆ ನೀಡಿದ ಧನಸಹಾಯವನ್ನು ಕೆ.ಆರ್. ಮನೋಜ್ ಅವರಿಗೆ ಅರವಿಂದ ಅಲೆವೂರಾಯ ಮತ್ತು ಕುಮಾರಸುಬ್ರಹ್ಮಣ್ಯ ಪೈಸಾರಿ ಹಸ್ತಾಂತರಿಸಿದರು. ಬದಿಯಡ್ಕ ಬಾಲಕೃಷ್ಣ ಕೇಕುಣ್ಣಾಯ ದಂಪತಿಗಳು ಆರ್ಷವಿದ್ಯಾಸಮಾಜಕ್ಕೆ ಸೀರೆ ಮತ್ತು ಬಟ್ಟೆಬರೆಗಳನ್ನು ಉಡುಗೊರೆಯಾಗಿ ನೀಡಿದರು. ಆರ್ಷವಿದ್ಯಾಸಮಾಜಂನ ಸ್ಮಿತಾ ಸ್ವಾಗತಿಸಿ, ಸುಚಿತ್ ಧನ್ಯವಾದವನ್ನಿತ್ತರು. ಗಣೇಶ್ ಪಿ.ಎಂ. ಮುಂಡಾನ್ತಡ್ಕ ನಿರೂಪಣೆಗೈದರು. ಎಸ್.ಎಂ.ಉಡುಪ, ಮಹೇಶ್ ವಳಕ್ಕುಂಜ ಹಾಗೂ ನೂರಾರು ಹಿಂದೂಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries