HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಜಂಪಾಡಿ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
    ಪೆರ್ಲ: ಕಜಂಪಾಡಿ ಸರಕಾರಿ ಆಭ್ಯುದಯ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಇತ್ತೀಚೆಗೆ ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಾಣಿ ಕಜಂಪಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತು ಅಧ್ಯಕ್ಷೆ ರೂಪಾವಾಣಿ ಆರ್.ಭಟ್ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಹಲೋ ಇಂಗ್ಲೀಷ್, ತರಗತಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಸರಕಾರಿ ಶಾಲೆಯಾಗಿದ್ದರೂ ಅಧ್ಯಾಪಕರು, ಹೆತ್ತವರು ಎಲ್ಲಾ ಕಾರ್ಯಗಳಲ್ಲೂ ಸಕ್ರಿಯರಾಗಿ ಭಾಗವಹಿಸುತ್ತಿರುವುದು ಸಂತಸದ ವಿಚಾರವೆಂದು ತಿಳಿಸಿದರು.
   ಸುರೇಖಾ ಕೆ. ಕಳೆದ ಸಾಲಿನ ವರದಿಯನ್ನು ವಾಚಿಸಿದರು. ವಿಜಯಶ್ರೀ ವಾಷರ್ಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ 2018-19 ನೇ ಸಾಲಿನ ನೂತನ ರಕ್ಷಕ ಶಿಕ್ಷಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ  ಚಂದ್ರಶೇಖರ ನಾಯ್ಕ ಕಜಂಪಾಡಿ, ಉಪಾಧ್ಯಕ್ಷರಾಗಿ ಉದಯಕೃಷ್ಣ ಭಟ್ ಪಂಜಿಕುಂಜೆ, ಮಾತೃ ಸಂಘದ ಅಧ್ಯಕ್ಷೆಯಾಗಿ ಜ್ಯೋತಿ ಅರ್ಕತ್ತಿಮಾರು ಆಯ್ಕೆಯಾದರು. ಸಭೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಚರ್ಿಸಲಾಯಿತು. ಮಾತೃ ಸಂಘದ ನಿಕಟಪೂರ್ವ ಅಧ್ಯಕ್ಷೆ ಭುವನೇಶ್ವರಿ, ಸಾಧು ಕಜಂಪಾಡಿ,  ದಯಾನಂದ ಇನ್ನಿತರರು ಉಪಸ್ಥಿತರಿದ್ದರು.
   ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ಕ್ಲಬ್ಗಳ ಔಪಚಾರಿಕವಾದ ಉದ್ಘಾಟನೆ ಮಾಡಲಾಯಿತು. ಹೆತ್ತವರಿಗೆ ಹಲೋ ಇಂಗ್ಲೀಷ್ ತರಗತಿಯನ್ನು ಮತ್ತು ವಿದ್ಯಾಥರ್ಿಗಳ ಇಂಗ್ಲೀಷ್ ಕಲಿಕೆಯ ವಿವಿಧ ಸಾಕ್ಷ್ಯಗಳನ್ನು  ಹಾಡು, ಅಭಿನಯ, ಮಾತುಗಾರಿಕೆಯ ಮೂಲಕ ಪ್ರದಶರ್ಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕಮಲಾಕ್ಷ ನಾಯಕ್ ವಂದಿಸಿದರು. ಯೂಸುಫ್ ಪಿ.ಕೆ, ಗಿರಿಜ ಕೆ ಸಹಕರಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries