HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಉಳಿಯತ್ತಡ್ಕರ `ನೆಲದ ಧ್ಯಾನ' ದ್ವಿತೀಯ ಆವೃತ್ತಿ ಬಿಡುಗಡೆ
    ಉಪ್ಪಳ: ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಸಾಹಿತ್ಯ ಸಮೀಕ್ಷೆ `ನೆಲದ ಧ್ಯಾನ'ದ ದ್ವಿತೀಯ ಆವೃತ್ತಿಯನ್ನು ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇತ್ತೀಚೆಗೆ ಬಿಡುಗಡೆಗೊಳಿಸಿದರು.
    ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ನೇತೃತ್ವದಲ್ಲಿ ಸುಬ್ಬಯ್ಯಕಟ್ಟೆ ತರಂಗಿಣಿ ಆಟ್ಸರ್್ ಆ್ಯಂಡ್ ಸ್ಪೋಟ್ಸರ್್ ಕ್ಲಬ್ನ ಸಹಯೋಗದಲ್ಲಿ ಕುಡಾಲು ಮೇರ್ಕಳ ಅನುದಾನಿತ ವಿದ್ಯಾಲಯದಲ್ಲಿ ಆಯೋಜಿಸಲಾದ ಚಿನ್ನರ ಕಲರವ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಲ್ಕೂರರು ಗಡಿನಾಡಿನ ಹಿರಿಯ ಕವಿ, ಬರಹಗಾರರಾಗಿ ತನ್ನ ಅನುಭವ ಹಾಗೂ ಸಮಾಜದ ನೋವು ನಲಿವುಗಳನ್ನು, ಹಿಂದುಳಿದವರ ಬದುಕಿನ ಬವಣೆಗಳನ್ನು ಬಹಳ ಆಪ್ತವಾಗಿ ಮನಸ್ಸಿಗೆ ತಟ್ಟುವಂತೆ ತನ್ನ ಬರಹಗಳಲ್ಲಿ ಹಿಡಿದಿಡುವ ಕವಿಗಳ ಚಾಕಚಕ್ಯತೆ ಮೆಚ್ಚತಕ್ಕದ್ದು. ಜೊತೆಗೆ ಪತ್ರಿಕೆಯ ಮೂಲಕ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ ಉಳಿಯತ್ತಡ್ಕ ಓರ್ವ ಶ್ರೇಷ್ಠ ಬರಹಗಾರ ಎಂದು ಹೇಳಿದರು.
    ಕೈರಳಿ ಪ್ರಕಾಶನದ ವತಿಯಿಂದ 2010ರಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ `ನೆಲದ ಧ್ಯಾನ'ದ ಪ್ರಥಮ ಆವೃತ್ತಿ ಬಿಡುಗಡೆಗೊಂಡಿತ್ತು. ಸರಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ವಹಿಸಿದ್ದರು. ಕನರ್ಾಟಕ ಜಾನಪದ ಪರಿಷತ್ ಕೇರಳ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಮಕ ಕಲಾ ಪರಿಷತ್ ಕೇರಳ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಜನಾರ್ಧನ ಹಂದೆ, ಶೋಭಾನೆ ಕಲಾವಿದೆ ಗಿರಿಜಾ ಭಟ್, ಸಂಧ್ಯಾಗೀತಾ ಬಾಯಾರು, ಸೀತಾರಾಮ ಶೆಟ್ಟಿ ಮುಂತಾದವರು ಉಪಸ್ಥಿರಿದ್ದರು. ಅಕಾಡೆಮಿ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರ್ವಹಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries