HEALTH TIPS

No title



        ಭಾರತದಲ್ಲಿ ವಾಟ್ಸ್ ಅಪ್ ಪಾವತಿ ಸೇವೆ: ಕೇಂದ್ರ ಸಕರ್ಾರ, ಮೆಸೇಜಿಂಗ್ ಸಂಸ್ಥೆಗೆ ಸುಪ್ರೀಂ ನೋಟೀಸ್
    ನವದೆಹಲಿ: ವಾಟ್ಸ್ ಅಪ್ ಮೆಸೇಜಿಂಗ್ ಸೇವಾ ಸಂಸ್ಥೆಯು ಭಾರತದಲ್ಲಿ ಪ್ರಾರಂಭಿಸಿದ ಪೇಮೆಂಟ್ ಸಿಸ್ಟಮ್ (ಪಾವತಿ ಸೇವೆ) ಆರ್ ಬಿಐ ನ ನಿಬಂಧನೆಗಳನ್ನು ಪೂರ್ಣವಾಗಿ ಅನುಸರಿಸದಿದ್ದಲ್ಲಿ ಈ ಸೇವೆಯನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅಜರ್ಿ ವಿಚಾರಣೆ ನಡೆಸಿರುವ ಸವರ್ೋಚ್ಚ ನ್ಯಾಯಾಲಯ ವಾಟ್ಸ್ ಅಪ್ ಸಂಸ್ಥೆ ಹಾಗೂ    ಕೇಂದ್ರ ಸಕರ್ಾರಕ್ಕೆ ನೋಟೀಸ್ ಜಾರಿ ಮಾಡಿದೆ.
     ನ್ಯಾಯಮೂತರ್ಿಗಳಾದ ರೊಹಿಂಟನ್ ಫಾಲಿ ನಾಕ್ರ್ಮನ್ ಮತ್ತು ನ್ಯಾಯಮೂತರ್ಿ ಇಂಡು ಮಲ್ಹೋತ್ರಾ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳಲ್ಲಿ ವಾಟ್ಸ್ ಅಪ್ ಹಾಗೂ ಕಾನೂನು ಸಚಿವಾಲಯ,  ಹಣಕಾಸು ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನಿಡಬೇಕು ಎಂದು ನಿದರ್ೇಶಿಸಿದೆ.
    ಮೆಸೇಜಿಂಗ್ ಸಂಸ್ಥೆಯು  ರಿಸವರ್್ ಬ್ಯಾಂಕ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಅನುಸರಿಸಿಲ್ಲ. ಭಾರತದಲ್ಲಿ  ವಾಟ್ಸ್ ಅಪ್ ದೂರು ನಿರ್ವಹಣಾ ಅಧಿಕಾರಿಯನ್ನು ನೇಮಿಸಿಲ್ಲ ಹೀಗಾಗಿ ಸಂಸ್ಥೆಗೆ ಹಣಕಾಸು ನಿರ್ವಹಣಾ ಸೇವೆ ಮುಂದುವರಿಸಲು ಅವಕಾಶ ನಿಡಬರದೆಂದು ಅಜರ್ಿದಾರ ಪರ ವಕೀಲ ವಿರಾಗ್ ಗುಪ್ತಾ ವಾದಿಸಿದ್ದಾರೆ.
ಫೇಸ್ ಬುಕ್ ಹಾಗೂ ಗೂಗಲ್ ನಂತಹಾ ಸಂಸ್ಥೆಗಳು ಭಾರತದಲ್ಲಿ ಬಳಕೆದಾರರ ದೂರುಗಳನ್ನಾಲಿಸಲು ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ವಾಟ್ಸ್ ಅಪ್ ಇದುವರೆಗೆ ಇಂತಹಾ ಅಧಿಕಾರಿಗಳನ್ನು ನೇಮಿಸಿಲ್ಲ. ವಾಟ್ಸ್ ಅಪ್ ಜವಾಬ್ದಾರಿಯುತವಾಗಿ ಸೇವೆ ಮುಂದುವರಿಸಲು ಭಾರತೀಯ ಕಾನೂನಿನ ಅನುಸರಣೆಗೆ ನಿದರ್ೇಶನ ನೀಡಬೇಕು ಮತ್ತು ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುವ ದೂರುದಾರ ಅಧಿಕಾರಿ ನೇಮಕಕ್ಕೆ ಆದೇಶಿಸಬೇಕು ಎಂದು ಅಜರ್ಿಯಲ್ಲಿ ಹೇಳಲಾಗಿದೆ.
    ವಾಟ್ಸ್ ಅಪ್ ಭಾರತದಲ್ಲಿ ಯಾವುದೇ ಕಛೇರಿ ಅಥವಾ ಸರ್ವರ್ ಹೊಂದಿಲ್ಲದ ವಿವಿದೇಶೀ ಸಂಸ್ಥೆಯಾಗಿದೆ. ಆದರೆ ವಾಟ್ಸ್ ಅಪ್ ಭಾರತದಲ್ಲಿ ಸುಮಾರು 200 ದಶಲಕ್ಷ ಬಳಕೆದಾರರನ್ನು ಹೊಂದಿದೆ ಮತ್ತು ಸುಮಾರು ಒಂದು ದಶಲಕ್ಷ ಜನರು ಭಾರತದಲ್ಲಿ ವಾಟ್ಸ್ ಅಪ್ ಪಾವತಿ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.ಇದು ಫೇಸ್ ಬುಕ್ ಮಾಲಿಕತ್ವದ ಸಂಸ್ಥೆಯ ಬಹುದೊಡ್ಡ ಆದಾಯ ಮೂಲವಾಗಿದೆ.
   ವಾಟ್ಸ್ ಅಪ್ ಜಾಗತಿಕವಾಗಿ 1.5 ಶತಕೋಟಿಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.ಪ್ರತಿ ಬಳಕೆದಾರರು ವಾಟ್ಸ್ ಅಪ್ ನಲ್ಲಿ ಬಳಕೆದಾರ ಸಂಖ್ಯೆಯನ್ನು ಹೊಂದ್ದ್ದಾರೆ.ಆದರೆ ಮೆಸೇಜಿಂಗ್ ಸಂಸ್ಥೆಯು ದೂರುಗಳ ದಾಖಲಾತಿಗಾಗಿ ಯಾವುದೇ ನಿದರ್ಿಷ್ಟ ಸಂಸ್ಖ್ಯೆಯನ್ನು (ಹೆಲ್ಪ್ಲೈನ್) ಹೊಂದಿಲ್ಲ ಎಂದು ಅಜರ್ಿದಾರರು ವಾದಿಸಿದ್ದಾರೆ.
ಕಳೆದ ವಾರ ವಾಟ್ಸ್ ಅಪ್ ನ  ಸಿಇಓ ಕ್ರಿಸ್ ಡೇನಿಯಲ್ಸ್ ಭಾರತಕ್ಕೆ ಆಗಮಿಸಿದ್ದು  ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಭೇಟಿಯಾಗಿದ್ದರು. ಆಗ ಸಚಿವರು  ಸುಳ್ಳು ಸಂದೇಶ ಕುರಿತ ದೂರುಗಳ ಸ್ವೀಕೃತಿಗಾಗಿ ದೇಶದಲ್ಲೇ ಓರ್ವ ಅಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕೆಂದು ಸೂಚಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries