HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ಆಟೋಪಕರಣಗಳ  ವಿತರಣೆ
     ಬದಿಯಡ್ಕ : ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ಯೂತ್ವಿಂಗ್ ವತಿಯಿಂದ ರಾಷ್ಟ್ರೀಯ ವ್ಯಾಪಾರದಿನದ ಅಂಗವಾಗಿ ಗುರುವಾರ ಪೆರಡಾಲ ಕೊರಗಕೋಲನಿಯ ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ಆಟೋಪಕರಣಗಳನ್ನು ನೀಡಲಾಯಿತು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಪುಟ್ಟ ಮಕ್ಕಳಿಗೆ ವಿತರಿಸಿ ಮಾತನಾಡುತ್ತಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಪೆರಡಾಲ ಕೊರಗ ಕಾಲನಿಯ ಎಂ.ಜಿ.ಎಲ್.ಸಿ. ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಮಾತನಾಡುತ್ತಾ ತನ್ನ ವ್ಯಾಪಾರವನ್ನು ಬದಿಗಿಟ್ಟು ಬಡ ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಿದ ವ್ಯಾಪಾರದಿನವು ಎಲ್ಲರಿಗೂ ಸ್ಮರಣೀಯವಾಯಿತು. ಜನರೊಡನೆ ಬೆರೆತು ಊರಿನ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತಿರುವ ವ್ಯಾಪಾರಿಗಳ ಶ್ರಮ ಶ್ಲಾಘನೀಯವಾಗಿದೆ ಎಂದರು. ಬೇಳ ಆಯುವರ್ೇದ ಡಿಸ್ಪೆನ್ಸರಿಯ ಡಾ| ಆಯಿಷತ್ ನಾಝಿಯಾ, ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿ ಧನಲಕ್ಷ್ಮಿ, ಯೂತ್ವಿಂಗ್ ಅಧ್ಯಕ್ಷ ರವಿ ನವಶಕ್ತಿ ಮಾತನಾಡಿದರು. ಯೂನಿಟ್ ಉಪಾಧ್ಯಕ್ಷ ಜಗನ್ನಾಥ ಆಳ್ವ, ಬದಿಯಡ್ಕ ಯೂನಿಟ್ ಕಾರ್ಯದಶರ್ಿ ಕುಂಜಾರು ಮುಹಮ್ಮದ್ ಹಾಜಿ, ಜೊತೆಕಾರ್ಯದಶರ್ಿ ರಾಜುಸ್ಟೀಫನ್, ಮಹಿಳಾವಿಂಗ್ ಅಧ್ಯಕ್ಷೆ ನಿರಪಮಾ ಶೆಣೈ, ಸತ್ಯವತಿ, ವೆಲ್ಫೇರ್ ಸೊಸೈಟಿ ಅಧ್ಯಕ್ಷ ನರೇಂದ್ರ ಬದಿಯಡ್ಕ, ಯೂತ್ ವಿಂಗ್ ಕೋಶಾಧಿಕಾರಿ ರಫೀಕ್ ಒಲಿವ್, ಹಮೀದ್ ಬರಾಕಾ, ವಿಶ್ವನಾಥನ್, ಉದಯ ಶಂಕರ ಜೊತೆಗಿದ್ದರು. ಯೂತ್ ವಿಂಗ್ ಕಾರ್ಯದಶರ್ಿ ಗಣೇಶ್ ಚೇಕರ್ೂಡ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries