HEALTH TIPS

No title

                   ಏಕಾಂತವೆಂದರೆ ಅಂತಬೋFಧೆಯ ಒಳಹೊಗುವುದು-ವಿದ್ವಾನ್ ಹಿರಣ್ಯ
    ಬದಿಯಡ್ಕ: ಭಕ್ತಿ, ಜ್ಞಾನ, ವೈರಾಗ್ಯಗಳು ಇತಿಹಾಸ ಪುರಾಣ ಕಾವ್ಯವಾದ ಶ್ರೀಮದ್ ಭಾಗವತದ ಮುಖ್ಯ ಸಂದೇಶವಾಗಿದ್ದು, ಬದುಕಿನ ಸತ್ಯ ದರ್ಶನದ ಹೆಬ್ಬಾಗಿಲಾಗಿ ಮಾನವ ಜೀವನದ ಬೆಳಕಾಗಿದೆ. ಪೂವರ್ಾಗ್ರಹವಿಲ್ಲದ ಭಾಗತವದ ಓದು ನೆಮ್ಮದಿ ನೀಡಿ ಉದ್ದರಿಸುತ್ತದೆ ಎಂದು ಹಿರಿಯ ಪ್ರವಚನಕಾರ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ತಿಳಿಸಿದರು.
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ  ಹಮ್ಮಿಕೊಂಡಿರುವ ಶ್ರೀಮದ್ ಭಾಗವತ ಸಪ್ತಾಹದಲ್ಲಿ ಮಂಗಳವಾರ ಸಂಜೆ ನಡೆದ ಪ್ರವಚನದಲ್ಲಿ ಅವರು ಮಾತನಾಡಿದರು.
  ಏಕಾಂತದ ಭಗವತ್ ನಾಮ ಸ್ಮರಣೆ ಕ್ಲೇಶಗಳನ್ನು ದೂರಗೊಳಿಸಿ ಬಲ ನೀಡುತ್ತದೆ. ಏಕಾಂತವೆಂದರೆ ನಮ್ಮೊಳಗಿನ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಅಂತಬರ್ೋಧಗೆ ಹೊಕ್ಕು ಒಳಗಿನ ಶಕ್ತಿಯೊಂದಿಗಿನ ಅನುಸಂಧಾನ ಮಾತ್ರವೇ ಆಗಿದೆ. ಆದರೆ ಇಂದು ಏಕಾಂತದ ತಪ್ಪು ವ್ಯಾಖ್ಯಾನ, ಬಳಸುವಿಕೆಗಳಿಂದ ಅತೃಪ್ತಿಗಳು ತಾಂಡವವಾಡುತ್ತಿದ್ದು, ಎಚ್ಚರಿಕೆ ಅಗತ್ಯ ಎಂದು ಅವರು ತಿಳಿಸಿದರು. ಶ್ರವಣ, ಮನನ ಮತ್ತು ಭಕ್ತಿಗಳ ವಿಧಿನ್ಯಾಸಗಳಿಂದ ವಿಷಯ ವೈರಾಗ್ಯಕ್ಕೊಳಗಾಗಿ ಸಾಯುಜ್ಯಕ್ಕೊಳಗಾಗುವುದು ನಮ್ಮ ಜೀವನದ ಲಕ್ಷ್ಯವಾಗಿದ್ದಾಗ ದುಃಖ ರಹಿತತೆ ಸಾಧ್ಯ ಎಂದು ತಿಳಿಸಿದ ಅವರು,ದಶಲಕ್ಷಣಗಳ ಶ್ರೀಮದ್ ಭಾಗತ ಆ ದಾರಿಯ ಮಾರ್ಗದಶರ್ಿಯಾಗಿ ಭಕ್ತರನ್ನು ಉದ್ದರಿಸುವ ಶಕ್ತಿಹೊಂದಿದೆ ಎಂದು ತಿಳಿಸಿದರು. 
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಶುಭಹಾರೈಸಿದರು.
   ಸೋಮವಾರ ಸಂಜೆ ಚಾತುಮರ್ಾಸ್ಯ ಸಾಂಸ್ಕೃತಿಕ ಸಂಜೆಯ ಅಂಗವಾಗಿ ರಾತ್ರಿ 8 ರಿಂದ ಕಾಸರಗೋಡಿನ ಹಿರಿಯ ಸಂಗೀತ ಕಲಾವಿದರಾದ ಸದಾಶಿವ ಆಚಾರ್ ಮತ್ತು ಬಳಗದವರಿಂದ ಸಂಗೀತ ಸಂಧ್ಯಾ ನಡೆಯಿತು. ಸಹ ಹಾಡುಗಾರಿಕೆಯಲ್ಲಿ ಶ್ರೀಪತಿ ರಂಗಾ ಭಟ್ ಮಧೂರು ಸಹಕರಿಸಿದರು. ಡಾ.ಶಂಕರರಾಜ್ ನಾರಂಪಾಡಿ(ಮೃದಂಗ), ಪೂರ್ಣಪ್ರಜ್ಞ(ವಯಲಿನ್), ಶ್ರೀಧರ ರೈ ಕಾಸರಗೋಡು(ಗಂಜೀರ)ದಲ್ಲಿ ಸಹಕರಿಸಿದರು.
  ಮಂಗಳವಾರ ಸಂಜೆ ಭಾಗತ ಪ್ರವಚನದ ಬಳಿಕ ಪೂರ್ಣಪ್ರಜ್ಞ ಕಾಸರಗೋಡು ಮತ್ತು ತಮಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬುಧವಾರ ಸಂಜೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳಿಂದ ಭಕ್ತಿಗೀತೆಗಳ ಗಾಯನ ನಡೆಯಿತು.
  ಗುರುವಾರ ಸಂಜೆ ಭಾಗತ ಪ್ರವಚನದ ಬಳಿಕ ಮಧೂರು ವೆಂಕಟಕೃಷ್ಣ ಮತ್ತು ಬಳಗದವರಿಂದ ಗರುಡ ಗರ್ವಭಂಗ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.ಶುಕ್ರವಾರ ಸಂಜೆ ವಿದ್ವಾನ್ ಟಿ.ಜಿ. ಗೋಪಾಲಕೃಷ್ಣನ್ ಮತ್ತು ಬಳಗದವರಿಂದ ಭಕ್ತಗಾನ ರಸಮಂಜರಿ ನಡೆಯಲಿದ್ದು, ಮೃದಂಗದಲ್ಲಿ ದತ್ತಾತ್ರೇಯ ಶಮರ್ಾ ಬೆಂಗಳೂರು, ತಬಲಾದಲ್ಲಿ ಅಭಿಜಿತ್ ಶೆಣೈ ಮುಲ್ಕಿ ಸಹಕರಿಸುವರು.



   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries