HEALTH TIPS

No title

                     ಆನುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸದ ರಾಜ್ಯ
                   ಸರಕಾರದ ವಿರುದ್ಧ ಬಿಜೆಪಿಯಿಂದ ಪಂಜಿನ ಮೆರವಣಿಗೆ
    ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಅನುಷ್ಠಾನಕ್ಕೆ ತರದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ನೀತಿಯನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ಶನಿವಾರ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
   ಕಾಸರಗೋಡು ನಗರದಲ್ಲಿ ನಡೆದ ಪಂಜಿನ ಮೆರವಣಿಗೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಕಾಸರಗೋಡು ನಗರಸಭಾ ಕೌನ್ಸಿಲರ್ಗಳಾದ ಕೆ.ಜಿ.ಮನೋಹರನ್, ಸುಜಿತ್, ಶ್ರೀಲತಾ ಟೀಚರ್, ಅನಿಲ್ ಶೆಟ್ಟಿ, ರವಿ ಕರಂದಕ್ಕಾಡ್, ದುಗ್ಗಪ್ಪ, ಯುವಮೋಚರ್ಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ಕಾರ್ಯದಶರ್ಿ ಅಂಜು ಜೋಸ್ ಟಿ., ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ಕಾರ್ಯದಶರ್ಿ ಗುರುಪ್ರಸಾದ್ ಪ್ರಭು, ಎ.ಪಿ.ಹರೀಶ್ ಕುಮಾರ್ ಮೊದಲಾದವರು ನೇತೃತ್ವ ನೀಡಿದರು.
   ಸರಕಾರದ ನೀತಿ ಖಂಡನೀಯ : ಕೇಂದ್ರ ಸರಕಾರದ ವಿವಿಧ ಜನ ಸುರಕ್ಷಾ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದ ಜನತೆಗೆ ಲಭಿಸದಂತೆ ಕೇರಳ ಸರಕಾರ ಕೈಗೊಂಡ ತೀಮರ್ಾನವು ಖಂಡನೀಯ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್ ಹೇಳಿದರು.
   ಕೇರಳ ರಾಜ್ಯದ ಜನತೆಗೆ ಆರೋಗ್ಯಕ್ಕೆ ಸಂಬಂಧಿಸಿ ಕೇಂದ್ರ ಯೋಜನೆಯ ಜಾರಿಗೆ ಕೇರಳ ಸರಕಾರ ವಂಚಿಸಿದೆ. ರಾಜ್ಯದ ಜನರನ್ನು ಮರಣ ಕದತಟ್ಟುವತ್ತ ಕೊಂಡೊಯ್ಯುತ್ತಿದೆ ಎಂದ ಅವರು ಆಯುಷ್ಮಾನ್ ಭಾರತ್ ಯೋಜನೆಯನ್ನು ಶೀಘ್ರವೇ ಕೇರಳದಲ್ಲಿ ಜಾರಿಗೆ ತರಬೇಕೆಂದು ಆಗ್ರಹಿಸಿದರು. ಈ ಮೂಲಕ ಬಡಜನತೆಗೆ ಕೇಂದ್ರ ಸರಕಾರದ ಯೋಜನೆಯ ಪ್ರಯೋಜನ ಲಭಿಸುವಂತಾಗಬೇಕು ಎಂದರು. ಇಂದು ಇಲ್ಲಿ ನಡೆದಿರುವ ಪಂಜಿನ ಮೆರವಣಿಗೆ ಆರಂಭಿಕ ಪ್ರತಿಭಟನೆ ಮಾತ್ರ. ಕೇರಳ ಸರಕಾರ ಈ ಯೋಜನೆಯನ್ನು ಜಾರಿಗೆ ತರುವವರೆಗೆ ಪ್ರಬಲ ಹೋರಾಟ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಅವರು ಮುನ್ನೆಚ್ಚರಿಕೆ ನೀಡಿದರು.
   ಶನಿವಾರ ಕೇರಳದಾದ್ಯಂತ ಬಿಜೆಪಿ ಪಂಜಿನ ಮೆರವಣಿಗೆ ನಡೆಸಿದೆ. ಈ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ ಎಂದ ಅವರು ಬಡಜನರಿಗೆ ಇದರ ಪ್ರಯೋಜನ ಲಭಿಸುವ ತನಕ ಹೋರಾಟ ನಡೆಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
   ರಾಜಕೀಯವಾಗಿ ಭಿನ್ನಾಭಿಪ್ರಾಯವಿದ್ದರೂ ಇಂತಹ ಜನಪರ ಯೋಜನೆಯನ್ನು ಜಾರಿಗೆ ತರಬೇಕಾದುದು ರಾಜ್ಯ ಸರಕಾರದ ಕರ್ತವ್ಯ. ಈ ಬಗ್ಗೆ ಸರಕಾರ ಅಸಡ್ಡೆ ತೋರಿದರೆ ತೀವ್ರ ಹೋರಾಟ ಅನಿವಾರ್ಯವಾದೀತು ಎಂದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries