HEALTH TIPS

No title

               ಕಲ್ತುದು ಬದುಕೊಳಿ 2018-ಗ್ರಾಮೀಣ ಸಹವಾಸ ಕ್ಯಾಂಪ್ಗೆ ಚಾಲನೆ
    ಬದಿಯಡ್ಕ : ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯದ ಸಾಮಾಜಿಕ ಅಧ್ಯಯನ  ವಿಭಾಗದ ವಿದ್ಯಾಥರ್ಿಗಳಿಂದ ಕಲ್ತುದು ಬದುಕೊಳಿ 2018- ಗ್ರಾಮೀಣ ಸಹವಾಸ ಶಿಬಿರ ಅ.27 ರಿಂದ ನ.4 ರವರೆಗೆ ಬದಿಯಡ್ಕ ಪೆರಡಾಲ ಕಾಲನಿಯಲ್ಲಿ  ನಡೆಯುತ್ತಿದ್ದು, ಶಿಬಿರದ ಉದ್ಘಾಟನೆಯನ್ನು  ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಸಾಮಾಜಿಕ ಅಧ್ಯಯನ  ವಿಭಾಗದ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ  ರಾಜೇಂದ್ರ ಪಿಲಾಂಕಟ್ಟೆ  ನಿರ್ವಹಿಸಿ ಮಾತನಾಡಿ,  ಸಮಾಜದಲ್ಲಿ ಹಿಂದುಳಿದ ವರ್ಗದ ಜನರ ಜೀವನ ಕ್ರಮವನ್ನು ಅಧ್ಯಯನ ಮಾಡುವುದರೊಂದಿಗೆ ಅವರು ಬಡತನದ ಬೇಗೆಯಲ್ಲಿ  ಪ್ರಸ್ತುತ ಕಾಲಘಟ್ಟದಲ್ಲಿಯೂ ಕಷ್ಟ  ಪಡುವಂತಾಗಲು ಕಾರಣವೇನು ಎಂಬುದನ್ನು ತಿಳಿಯುವ ವಿದ್ಯಾಥರ್ಿಗಳ ಪ್ರಯತ್ನ  ಅಭಿನಂದನೀಯ. ಜೊತೆಗೆ ಈ ಜನರ ಲಭ್ಯ ಸೌಲಭ್ಯಗಳನ್ನು  ಹೇಗೆ ತಲುಪಿಸಬಹುದು ಎಂಬ ವಿಚಾರಗಳ ಕುರಿತಾದ ಅಧ್ಯಯನ ಹಾಗೂ ಅನುಕೂಲಕರವಾದ ಮಾರ್ಗದರ್ಶನ ಈ ಶಿಬಿರದಿಂದ ದೊರೆಯುವಂತಾಗಲಿ ಎಂದು ಹೇಳಿದರು.
    ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ  ಸೈಬುನ್ನಿಸ ಅಧ್ಯಕ್ಷತೆ ವಹಿಸಿದರು. ಪೆರಡಾಲ ನವಜೀವನ ಶಾಲಾ ಪ್ರತಿನಿಧಿ ಪ್ರಸಾದ್, ಸಮಾಜ ಅಧ್ಯನ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಎ.ಕೆ. ಮೊದಲಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹನೀಫ ಓಝೋನ್, ಬದಿಯಡ್ಕ  ಗ್ರಾ.ಪಂ. ಸದಸ್ಯೆ ರಾಜೇಶ್ವರಿ, ಪೆರಡಾಲ ಎಂ.ಜಿ.ಎಲ್.ಸಿ.ಯ ಅಧ್ಯಾಪಕ ಬಾಲಕೃಷ್ಣ  ಅಚ್ಚಾಯಿ ಮೊದಲಾದವರು ಶುಭಾಶಂಸನೆಗೈದರು. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಸಾಮಾಜಿಕ ಅಧ್ಯಯನ  ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದಿಲೀಪ್ ದಿವಾಕರ್ ಜಿ ಸ್ವಾಗತಿಸಿ, ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಸಾಮಾಜಿಕ ಅಧ್ಯಯನ  ವಿಭಾಗದ ಪ್ರಾಧ್ಯಾಪಕಿ, ಶಿಬಿರ ಸಂಯೋಜಕಿ ಡಾ.ಲಕ್ಷ್ಮಿ  ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries