HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಸೈಕಲ್ ಪರ್ಯಟನೆಯ ಶ್ರವಣ್ ಕುಮಾರ್ ಗೆ ರಾಜ್ಯಕ್ಕೆ ಅಲ್ಲಲ್ಲಿ ಸ್ವಾಗತ
     ಮಂಜೇಶ್ವರ: ಸ್ವಚ್ಚ ಭಾರತ ಅಭಿಯಾನ, ಶಾಂತಿ ಮತ್ತು ಐಕ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮೂರು ದೇಶಗಳಲ್ಲಿ ದ್ವಿಚಕ್ರ ವಾಹನದ ಮೂಲಕ 2018 ಮೇ 3 ರಂದು ಸೈಕಲ್ ಪರ್ಯಟನೆ ಕೈಗೊಂಡಿರುವ ಮಂಗಳೂರು ಗುರುಪುರ ನಿವಾಸಿ ಶ್ರವಣ ಕುಮಾರ್(23) ಅವರಿಗೆ ಬುಧವಾರ ಕೇರಳದ ಗಡಿ ಮಂಜೇಶ್ವದ ಕುಂಜತ್ತೂರಿನಲ್ಲಿ ಭವ್ಯ ಸ್ವಾಗತ ನೀಡಿ ಶುಭ ಹಾರೈಸಲಾಯಿತು.
   ಈಗಾಗಲೇ ನೇಪಾಳ, ಭೂತಾನ್ ದೇಶಗಳ ಸಂಚಾರ ಪೂರ್ಣಗೊಳಿಸಿ ಕಾಶ್ಮೀರದ ಮೂಲಕ ಭಾರತ ಪರ್ಯಟನೆ ನಡೆಸುತ್ತಿರುವ ಶ್ರವಣ್ ಕುಮಾರ್ 9,400 ಕಿ.ಮೀಟರ್ ಸಂಚರಿಸಿ ಬುಧವಾರ ಮಧ್ಯಾಹ್ನ ಕೇರಳದಗಡಿ ತಲಪಾಡಿ ಬಳಿಯ ಕುಂಜತ್ತೂರು ಪ್ರವೇಶಿಸಿರು. ಕೇರಳ ಸಂಚಾರ ಪೂತರ್ಿಗೊಳಿಸಿ ತಮಿಳುನಾಡು ಮೂಲಕ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ತಮ್ಮ ಅಭೂತಪೂರ್ವ ಜಾಗೃತಿ ಪರ್ಯಟನೆಗೆ ಮಂಗಳ ಹಾಡಲಿದ್ದಾರೆ. ಗುರುಪುರ ನಿವಾಸಿ ರಾಜೇಂದ್ರ ನಾಯಕ್-ಕಲಾವತಿ ದಂಪತಿಗಳ ಪುತ್ರ ಶ್ರವಣ್ ಕುಮಾರ್.
  ಬುಧವಾರ ಕುಂಜತ್ತೂರಿನಲ್ಲಿ ಹಿರಿಯ ಬಿಜೆಪಿ ನೇತಾರರಾದ ಹರಿಶ್ಚಂದ್ರ ಮಂಜೇಶ್ವರ ಅವರು ಶಾಲು,ಫಲಪುಷ್ಪಗಳೊಂದಿಗೆ ಸ್ವಾಗತಿಸಿದರು. ಕುಂಜತ್ತೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಟ್ರಸ್ಟಿ ಸುರೇಶ್ ಕುಮಾರ್ ಶೆಟ್ಟಿ, ರಾಜೇಶ್, ಯುವಮೋಚರ್ಾ ಕಾರ್ಯಕರ್ತ ರಾಜೇಶ್ ಮಜಲು ನಾಗರಿಕರು ಉಪಸ್ಥಿತರಿದ್ದರು.
   ಗುರುವಾರ ಕುಂಬಳೆಯಲ್ಲಿ ಸ್ವಾಗತ:
  ಶ್ರವಣ್ ಕುಮಾರ್ ಗುರುವಾರ ಬೆಳಿಗ್ಗೆ ತಮ್ಮ ಪರ್ಯಟನೆಯ ಮಧ್ಯೆ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುಂಬಳೆ ಗ್ರಾ.ಪಂ. ಸದಸ್ಯ ಸುಧಾಕರ ಕಾಮತ್, ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಮುಖಂಡರಾದ ರಮೇಶ್ ಭಟ್, ಕ್ಷೇತ್ರದ ಅಧಿಕಾರಿ ರಾಜಶೇಖರ್ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಮೊದಲಾದವರು ಸ್ವಾಗತಿಸಿದರು.

 
 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries