HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ನಿವೇದಿತಾದೊಂದಿಗೆ ಮತ್ತೊಂದು ನೆರವಿಗೆ ಕೈಜೋಡಿಸುವಿರಾ
                         ಚೇವಾರಿನ ಪಾರ್ವತಿ ಅಬರ್ುದದಿಂದ ಸಂಕಷ್ಟದಲ್ಲಿ       
     ಕುಂಬಳೆ: ಪೈವಳಿಕೆ ಗ್ರಾಮಪಂಚಾಯತಿ ವ್ಯಾಪ್ತಿಯ ಚೇವಾರು ಚಂದ್ರ ಎಂಬವರ ಪತ್ನಿ ಪಾರ್ವತಿ(45) ಅಬರ್ುದ ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಚಿಕಿತ್ಸಾವೆಚ್ಚವನ್ನು ಸರಿದೂಗಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವ ಕುಟುಂಬವು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ.
ಮರದ ಕೆಲಸವನ್ನು ಮಾಡುತ್ತಿರುವ ಚಂದ್ರ ಹಾಗೂ ಇದೀಗ ಸ್ತನ ಅಬರ್ುಧ ರೋಗದಿಂದ ಬಳಲುತ್ತಿರುವ ಮಹಿಳೆ ಪಾರ್ವತಿಯವರಿಗೆ ನಾಲ್ಕು ಜನ ಮಕ್ಕಳು. ಹಿರಿಯ ಪುತ್ರಿ ಶಿಕ್ಷಕ ತರಬೇತಿ(ಟಿಟಿಸಿ) ವ್ಯಾಸಂಗವನ್ನು ಮಾಡುತ್ತಿದ್ದಾರೆ. ಹಿರಿಯ ಪುತ್ರ ಪ್ಲಸ್ ವನ್, ಕಿರಿಯ ಪುತ್ರ 5ನೇ ತರಗತಿ ಹಾಗೂ ಕಿರಿಯ ಪುತ್ರಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸುವುದರ ಜೊತೆಗೆ ಈ ರೋಗ ಬಾಧಿಸಿರುವುದು ಕುಟುಂಬಕ್ಕೆ ಸಿಡಿಲಿನಾಘಾತವಾದಂತಾಗಿದೆ. ತೀರಾ ಬಡತನದಲ್ಲಿರುವ ಕುಟುಂಬದ ಪೋಷಣೆಯೊಂದಿಗೆ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಕಷ್ಟಪಡುವಂತಾಗಿದೆ.
ಮಂಗಳೂರು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆಯಲ್ಲಿರುವ ಪಾರ್ವತಿಯವರಿಗೆ ಬುಧವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಗೆ ಮೊದಲೇ ಸುಮಾರು 75 ಸಾವಿರಕ್ಕೂ ಮಿಕ್ಕಿ ಹಣ ಖಚರ್ಾಗಿದ್ದು, ಇನ್ನೂ 1 ಲಕ್ಷದಷ್ಟು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಸುಮಾರು 6-10 ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವೂ ಇದೆ.
12 ಸೆಂಟ್ಸ್ ಸ್ಥಳದಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಇವರಿಗೆ ಬೇರೆ ಯಾವುದೇ ಆದಾಯವಿಲ್ಲದಾಗಿದೆ. ಕಳೆದ 3 ತಿಂಗಳಿನಿಂದ ಪಾರ್ವತಿ, ನೀಚರ್ಾಲು ಸಮೀಪದ ಕಿಳಿಂಗಾರಿನ ತವರುಮನೆಯಲ್ಲಿ ವಾಸವಾಗಿದ್ದರು. ತಂಗಿಯ ಚಿಕಿತ್ಸಾವೆಚ್ಚಕ್ಕಾಗಿ ಅಣ್ಣ ಪಾಂಡುರಂಗ ಎಂಬವರು ನೀಚರ್ಾಲಿನ ನಿವೇದಿತಾ ಸೇವಾ ಮಿಶನ್ನ ಪದಾಧಿಕಾರಿಗಳನ್ನು ಸಂಪಕರ್ಿಸಿದ್ದರು. ಈ ನಿಟ್ಟಿನಲ್ಲಿ ನಿವೇದಿತಾ ಸೇವಾ ಮಿಶನ್ನ ಕಾರ್ಯಕರ್ತರು ಹಣ ಸಂಗ್ರಹಕ್ಕೆ ಸಹಾಯವನ್ನು ನೀಡುವುದಾಗಿ ಭರವಸೆಯನ್ನೂ ನೀಡಿರುತ್ತಾರೆ. ಕುಟುಂಬದ ಸಂಕಷ್ಟಕ್ಕೆ ಧನಸಹಾಯವನ್ನು ನೀಡಬೇಕಾಗಿ ಈ ಮೂಲಕ ಅವರು ವಿನಂತಿಸಿಕೊಂಡಿದ್ದಾರೆ. ಧನಸಹಾಯವನ್ನು ನೀಡುವವರು ಪಾರ್ವತಿ ಪಿ., ಸಿಂಡಿಕೇಟ್ ಬ್ಯಾಂಕ್, ಪೈವಳಿಕೆ ಶಾಖೆ, ಐಎಫ್ಎಸ್ಸಿ ಕೋಡ್ ಎಸ್ವೈಎನ್ಬಿ0004230, ಬ್ಯಾಂಕ್ ಖಾತೆ ಸಂಖ್ಯೆ 42302250002166 ಗೆ ಹಣ ವಗರ್ಾಯಿಸಿ ಚಿಕಿತ್ಸೆಗೆ ನೆರವಾಗಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಪಾಂಡುರಂಗ 9605291342 ಸಂಪಕರ್ಿಸಬಹುದಾಗಿದೆ.
ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸದ ಕೇರಳ ಸರಕಾರವು ರಾಜ್ಯದಲ್ಲಿ ಅದೆಷ್ಟೋ ಬಡಜನತೆಯ ಚಿಕಿತ್ಸಾ ವೆಚ್ಚಕ್ಕಾಗಿ ಯಾವ ರೀತಿ ನೆರವಾಗುತ್ತದೆ ಎಂದು ಕಾದುನೋಡಬೇಕಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries