HEALTH TIPS

No title

                  ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 77ನೇ ಸ್ಥಾನಕ್ಕೇರಿದ ಭಾರತ
     ನವದೆಹಲಿ: ಈ ಬಾರಿಯ ವಿಶ್ವಬ್ಯಾಂಕ್  ಸುಲಭ  ವ್ಯವಹಾರ ದೇಶಗಳ  ಪಟ್ಟಿಯಲ್ಲಿ ಭಾರತ  77ನೇ ಸ್ಥಾನಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಕರ್ಾರ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.
      ಕಳೆದ ಎರಡು ವರ್ಷಗಳ  ಅವಧಿಯಲ್ಲಿ ಭಾರತ 53  ಅಂಕಗಳೊಂದಿಗೆ  ಬ್ರಿಕ್ಸ್ ರಾಷ್ಟ್ರಗಳಲ್ಲಿ ಮೂರನೇ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮೊದಲ  ರಾಷ್ಟ್ರವಾಗಿ  ಅಗ್ರ 100  ರಾಷ್ಟ್ರಗಳ ಪಟ್ಟಿಯಲ್ಲಿ  ಸ್ಥಾನ ಪಡೆದುಕೊಂಡಿದೆ.
  ಈ ವರ್ಷದಲ್ಲಿ ಇಂತಹ ಮಹತ್ವದ  ಪ್ರಗತಿಯ ಸಾಧನೆ ಮಾಡಿರುವ ರಾಷ್ಟ್ರಗಳಲ್ಲಿ ಭಾರತವೇ ದೊಡ್ಡ ರಾಷ್ಟ್ರವಾಗಿದೆ. ಈ ವರ್ಷದಲ್ಲಿ ಸತತ ಎರಡನೇ ಬಾರಿಗೆ  ಭಾರತ ಪ್ರಗತಿಯ ರಾಷ್ಟ್ರಗಳಲ್ಲಿ ಮಾನ್ಯತೆ ಪಡೆದುಕೊಂಡಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.
   190 ರಾಷ್ಟ್ರಗಳಲ್ಲಿ ಭಾರತ ಟಾಪ್ 100ರ  ಖಚಿಟಿಞಟಿರ ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಪರಿಣಾಮಕಾರಿಯಾಗಿ ಜಿಗಿತ ಕಂಡಿದೆ. ಇದು ಸಹಜವಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ ರಾಫೆಲ್ ವಿವಾದ, ಸಿಬಿಐ ಆಂತರಿಕ ಕಚ್ಚಾಟ , ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸಕರ್ಾರದ ವರ್ಚಸ್ಸನ್ನು ಹಿಗ್ಗಿಸಿದೆ.
   ಸುಲಭ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತ 100 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಛಾನ ಪಡೆಯುವ ಮೂಲಕ ಪ್ರಗತಿ ಹೊಂದಿದೆ ಎಂದು ವಿಶ್ವಬ್ಯಾಂಕ್  ವ್ಯವಹಾರ ವಾಷರ್ಿಕ ವರದಿಯಲ್ಲಿ ಹೇಳಲಾಗಿದೆ.
  ಕಟ್ಟಡ ಅನುಮತಿ,  ವಿದ್ಯುತ್ ಪೂರೈಕೆ, ಸಾಲ ನೀಡಿಕೆ, ತೆರಿಗೆ ಪಾವತಿ, ಮತ್ತಿತರ ಅಂಶಗಳ  ಆಧಾರದ ಮೇಲೆ  ಖಚಿಟಿಞಟಿರ ನೀಡಲಾಗುತ್ತಿದೆ.  2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಭಾರತ 142 ನೇ ಸ್ಥಾನದಲ್ಲಿತ್ತು, ಕಳೆದ ವರ್ಷ 131ನೇ  ಸ್ಥಾನದಲ್ಲಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries