ವಿಶೇಷ ಲೇಖನ: ಶಬರಿಮಲೆ ಅಯ್ಯಪ್ಪ ಸನ್ನಿಧಿಯು ಬಹುತ್ವದ ಸಂಕೇತವಾಗಬೇಕು
ಕುಂಬಳೆ: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಸುಮಾರು 8 ಶತಮಾನಗಳಿಗಿಂತಲೂ ಮಿಕ್ಕ ಇತಿಹಾಸವಿದೆ. ಅಯ್ಯಪ್ಪ ಐಕ್ಯನಾಗಿರುವ ಧರ್ಮಶಾಸ್ತನ ಐತಿಹ್ಯ ಹತ್ತು ಶತಮಾನಗನ್ನು ಮೀರಿದ್ದು. ಅಯ್ಯಪ್ಪ ಪೌರಾಣಿಕತೆಯಾದರೆ, ದರ್ಮಶಾಸ್ತನ ಒಡಲು ಐತಿಹಾಸಿಕತೆಯನ್ನು ಬಿಂಬಿಸುತ್ತದೆ ಎಂಬುದು ಚರಿತ್ರೆಯ ಪುಟಗಳಿಂದ ತಿಳಿಯುತ್ತದೆ.
ಶಬರಿಮಲೆ ಅಥವಾ ಶಬರಿಗಿರಿ ಎಂಬ ಹೆಸರೂ ಕೂಡಾ ರಾಮಾಯಣದಲ್ಲಿ ಉಲ್ಲೇಖವಾಗಿದ್ದು. ಶಬರಿ ಎಂಬ ಮಹಿಳೆ ರಾಮನಿಗೆ ಸಿಹಿಯಾದ ಹಣ್ಣುಗಳ ಸ್ವಾದವನ್ನು ಪರೀಕ್ಷಿಸಿ ನೀಡಿದವಳು ಎಂಬ ಕಥೆಯನ್ನು ಹಲವು ಮಂದಿ ಕೇಳಿದ್ದೇವೆ. ಶಬರಿಮಲೆ ಪ್ರಸ್ತುತ ಕೇವಲ ಒಂದು ಮತ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ, ಚರಿತ್ರೆಯ ಪುಟಗಳನ್ನು ತಿರುವಿದರೆ ಶಬರಿಮಲೆಯ ಐತಿಹಾಸಿಕತೆ ಇದರ ಬಹುತ್ವ ಮತ್ತು ಹಲವು ಮತಗಳ ಆಧ್ಯಾತ್ಮದ ಪರಿಭಾಷೆ ಮತ್ತು ಸಾರವನ್ನು ಜಗಜ್ಜಾಹಿರುಮಾಡುವಂತಿದೆ.
ಜನಪದರ ಪರಾಕ್ರಮಿ, ದೈವ ಪುರುಷ ಅಯ್ಯನಾರ್ ಅಯ್ಯಪ್ಪನಾದ ಎಂಬ ಕಥೆ ಒಂದೆಡೆಯಾದರೆ, ತಮಿಳಕಂ ಪ್ರದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ ಪಾಂಡ್ಯ ರಾಜರು ಹಲವು ಮತಗಳಿಗೆ ರಾಜಾಶ್ರಯ ನೀಡಿದ್ದರು. ಅದರಲ್ಲಿ ಬೌದ್ಧ, ಜೈನ, ಶೈವ, ವೈಷ್ಣವ ಪಂಥಗಳೂ ಇವೆ. ಪ್ರಸ್ತುತ ಶಬರಿಮಲೆಯ ದೈವಿಕತೆ ಆಚಾರ ವಿಚಾರಗಳಿಗೆ ಜನಪದ ಪರಂಪರೆ ಸಹಿತ ಶ್ರಮಣ ಮತ್ತು ಬ್ರಾಹ್ಮಣ ಪರಂಪರೆಯ ಹಿನ್ನೆಲೆಯಿದೆ. ಆದಿಯಲ್ಲಿ ಶ್ರಮಣ ಪರಂಪರೆಯಿಂದ ಪ್ರಭಾವಿಸಲ್ಪಟ್ಟಿದ್ದ ಶಬರಿಗಿರಿಯ ಈ ಸ್ಥಳ ಕಾಲಾನಂತರದಲ್ಲಿ ಹಳೆ ನಂಬಿಕೆಗಳೊಂದಿಗೆ ಹೊಸ ಆಚಾರಗಳನ್ನು ಪೌರಾಣಿಕ ಸ್ಪರ್ಶದೊಂದಿಗೆ ತನ್ನದಾಗಿಸಿಕೊಂಡಿತು. ಪಾಂಡ್ಯ ರಾಜವಂಶದ ಮೂಲಕ ರಾಜಾಶ್ರಯ ಪಡೆದಿದ್ದ ಬೌದ್ಧಮತದ ತುಣುಕು ಶಬರಿಮಲೆಯ ಮೂಲ ಸಾನಿಧ್ಯ ಮೂತರ್ಿ ಧರ್ಮಶಾಸ್ತನಿಗಿದೆ. ಒಂಬತ್ತು ಹತ್ತನೇ ಶತಮಾನದಲ್ಲಿ ಇದ್ದ ಸಂಸ್ಕೃತ ಪಂಡಿತ ಜೈನ ಮತಸ್ಥ ಅಮರಸಿಂಹ ವಿರಚಿತ ಅಮರಕೋಶ ಎಂಬ ಸಂಸ್ಕೃತ ಶಬ್ದಕೋಶದಲ್ಲಿ ಧರ್ಮಶಾಸ್ತ ಎಂಬ ಹೆಸರು ಗೌತಮ ಬುದ್ಧನನ್ನು ಉಲ್ಲೇಖಿಸುತ್ತದೆ. ಆತನಿಗೆ ತಥಾಗತ, ಶಾಕ್ಯಮುನಿ, ಮಾಯಾದೇವಿ ಸುತ ಎಂಬ ನಾಮಾರ್ಥಗಳು ಇವೆ ಎಂದು ಉಲ್ಲೇಖಿಸುತ್ತಾನೆ. ಅಮರಸಿಂಹನ ಅಮರಕೋಶದಲ್ಲಿ ಧರ್ಮಶಾಸ್ತನ ಅನ್ವರ್ಥನಾಮವನ್ನು ಶ್ಲೋಕದ ರೂಪದಲ್ಲಿ ನೀಡಲಾಗಿದ್ದು-
ಮುನೀಂದ್ರ: ಶ್ರೀಧನಃ ಶಾಸ್ತಾ ಮುನಿ ಶಾಕ್ಯ ಮುನಿಸ್ತು ಯ/
ಸ ಶಾಕ್ಯಸಿಂಹಃ ಸರ್ವರ್ಥಸಿದ್ಧಃ ಸುದ್ದೋದನಿಶ್ಚಸಃ
ಗೋತಮಾಸ್ಚರ್ಕ ಬಂಧುಶ್ಚ ಮಾಯಾದೇವಿ ಸುತಶ್ಚಚ// - ಮುನಿ ಗೌತಮ ಬುದ್ಧನು ಮುನೀಂದ್ರನು, ಶಾಸ್ತಾಮುನಿಯೂ, ಶಾಕ್ಯಮುನಿ, ಶಾಕ್ಯಸಿಂಹನೂ, ಸರ್ವರ್ಥ ಸಿದ್ಧನೂ ಆಗಿದ್ದು, ಸುದ್ದೋಧನ, ಗೋತಮಿಯ ಬಂಧುವಾಗಿದ್ದಾನೆ, ಮಾಯಾದೇವಿಯ ಮಗನಾಗಿದ್ದಾನೆ ಎಂಬುದು ಇದರರ್ಥ.
ಹೀಗೆ ಗೌತಮನ ಅನ್ವರ್ಥ ನಾಮಗಳನ್ನು ಸೂಚಿಸುವ ಕೆಲ ಶ್ಲೋಕಗಳು ಅಮರಕೋಶದಲ್ಲಿವೆ. ಇಂದಿಗೂ ಕೆಲವೆಡೆ ಶಬರಿಮಲೆಯ ಅಯ್ಯಪ್ಪ ಬ್ರಾಹ್ಮಣರ ದೇವರಲ್ಲ ಎನ್ನುವ ಮಾತಿದೆ. ಇದರರ್ಥ ಇಲ್ಲಿನ ದೈವೀ ಸಾನಿಧ್ಯ ಬ್ರಾಹ್ಮಣೇತರ ಮತದ್ದು ಎಂಬುದು ಸ್ಪಷ್ಟ. ಆದರೆ ಕಾಲಾನಂತರ ವೈದಿಕ ಆಚರಣೆಗಳು ಇಲ್ಲಿಗೆ ಕಾಲಿಟ್ಟವು. ಪಂದಳಂ ರಾಜಕುಟುಂಬವು ಶಾಂತಿಕ್ಕಾರ ಯಾ ಪುರೋಹಿತರನ್ನು ಕರೆಸಿ, ತಂತ್ರಿ ವರ್ಗವನ್ನು ನೇಮಿಸಿ ಪೂಜಾ ವಿಧಿವಿಧಾನಗಳನ್ನು ಆರಂಭಿಸಿದರು ಎನ್ನಲಾಗುತ್ತದೆ. ಬೋಧಿಸತ್ವ ಅವಲೋಕಿತೇಶ್ವರನಿಗೆ ಬಹಳ ಸಾಮ್ಯವಿರುವ ಅಯ್ಯಪ್ಪನ ವಿಗ್ರಹ ಚಿನ್ಮುದ್ರೆಯ ಮೂಲಕ ಶೋಭಿಸುತ್ತದೆ. ದ.ಭಾರತದಲ್ಲಿ ಬೌದ್ಧ ಧರ್ಮದ ಇರುವಿಕೆಯನ್ನು ತಮಿಳು ಸಂಗಮ ಕೃತಿಗಳು ಸ್ಪಷ್ಟಪಡಿಸುತ್ತವೆ. ಸೀಲಪದ್ದಿಕರಮ್ ಮತ್ತು ಮಣಿಮೇಕಲೈ ಕೃತಿ ಸೂಚಿಸುತ್ತದೆ. ಕುಂದಲಕೇಸಿ, ಸಿವಕ ಚಿಂತಾಮಣಿ ಮತ್ತು ವಲಯಪತಿ ಕೃತಿಗಳು ತಮಿಳು ಸಂಗಮ ಸಾಹಿತ್ಯದ ಮೇರು ಕೃತಿಗಳಾಗಿದ್ದು, ಶ್ರಮಣ ಪರಂಪರೆಯ ಅಭ್ಯುದಯದ ಬಗ್ಗೆ ಬೆಳಕು ಚೆಲ್ಲುತ್ತವೆ. ಮಣಿಮೇಕಲೈ ಕೃತಿಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಅವರ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
1800 ರಿಂದ 2000 ವರ್ಷಗಳ ಹಿಂದೆ ಇದ್ದ ಮಹಿಳಾ ಸ್ವಾತಂತ್ರ್ಯ ಮತ್ತು ಮಹಿಳೆ ದೈವತ್ವಕ್ಕೆ ಏರಿದ ಬಗ್ಗೆ ಉಲ್ಲೇಖಿಸಲಾಗಿದೆ. ಸಿಲಾಪದ್ದಿಕರಮ್ ಮತ್ತು ಮಣಿಮೇಕಲೈ ಸಾದರಪಡಿಸುತ್ತದೆ. ಶಬರಿಮಲೆಯ ಬೆಟ್ಟದಲ್ಲೂ ಮಲ್ಲಿಕಾಪುರತ್ತಮ್ಮ ಎಂಬ ದೈವಿ ಸಾನಿಧ್ಯವಿದ್ದು, ತನ್ನದೆ ಆದ ಪೌರಾಣಿಕತೆ ಸಹಿತ ಚರಿತ್ರೆಯನ್ನು ಮುಂದಿಡುತ್ತದೆ. ಮಧುರೈ, ಕಾಂಚಿಯಲ್ಲಿ ಶೈವ, ಜೈನ, ಹಾಗೂ ಬೌದ್ಧರು ಜೊತೆಯಾಗಿ ಧಮರ್ಾಚರಣೆಯಲ್ಲಿ ತೊಡಗಿದ್ದರು ಎಂಬ ಅಂಶ ಉಲ್ಲೇಖವಿದೆ. ಬೋಧೀಸತ್ವ ಮಂಜುಶ್ರೀ ಘೋಷ ವಿರಚಿತ ಮಂಜುಶ್ರೀ ಮೂಲಕಲ್ಪ ಕೃತಿ ಬೌದ್ಧರ ತಂತ್ರಾರಾಧನಾ ಕ್ರಮಗಳಿಗೆ ಮೂಲವಾಗಿದ್ದು, ಕೇರಳ ಮತ್ತು ಟಿಬೆಟ್ಟು ಪ್ರಾಂತ್ಯದಲ್ಲೂ ಚಾಲ್ತಿಯಲ್ಲಿದೆ. ತಂತ್ರಾರಾಧನೆಯಲ್ಲಿ ಮಂಡಲ ಪೂಜೆಗೆ ವಿಶೇಷ ಗೌರವ ಹಾಗೂ ಹಿನ್ನೆಲೆಯಿದ್ದು, ಮಹಾಯಾನ ಬೌದ್ಧ ಪರಂಪರೆಯಲ್ಲಿ ದೈವತ್ವಕ್ಕೆ ಅಥವಾ ನಿವರ್ಾಣಕ್ಕೆ ಏರುವ ಸುಲಭ ಮಾರ್ಗ ಎಂಬ ವಿಶೇಷತೆಯೂ ಉಂಟು.
ಕೇರಳದ ಹಲವು ದೇವಾಲಯದಲ್ಲಿ ಮಂತ್ರಪೂಜೆಗಿಂತ ತಂತ್ರ ಅಂದರೆ ಮುದ್ರೆಗಳ ಮೂಲಕ ದೇವರಿಗೆ ಪೂಜೆ ಸಲ್ಲಿಸುವ ಕ್ರಮ ರೂಢಿಯಲ್ಲಿದ್ದು ಇದಕ್ಕೆ ಮೂಲಾಧಾರವಾದ್ದು ಮಂಜುಶ್ರೀ ಘೋಷನ ಆಗಮ ತಂತ್ರಯಾನ ಪದ್ದತಿ. ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ದಕ್ಷಿಣ ಭಾರತಕ್ಕೆ ಆಗಮಿಸಿದ್ದ ಸಂದರ್ಭ ಇಲ್ಲಿನ ಹಲವು ಪ್ರದೇಶಗಳಲ್ಲಿ ಬೌದ್ಧ ವಿಹಾರಗಳು ಇತ್ತೆಂಬುದನ್ನು ತಿಳಿಸುತ್ತಾನೆ. ಪೊತಕಲಾ ಬೆಟ್ಟ ಅಂದರೆ ತಮಿಳುನಾಡು ಕೇರಳದ ಗಡಿ ಪ್ರದೇಶವಾದ ಅಗಸ್ತ್ಯಮಲೆ ಪ್ರದೇಶದಲ್ಲಿ ಬೋಧಿಸತ್ವ ಅವಲೋಕಿತೇಶ್ವರನ ವಿಹಾರ ಇತ್ತೆಂಬುದನ್ಜು ವಣರ್ಿಸುತ್ತಾನೆ. ಪಾಂಡ್ಯರ ಕಾಲಘಟ್ಟದಲ್ಲಿ ಬೆಳೆದು ಬಂದ ರಾಜಕುಟುಂಬ ಪಂದಂಳಂ. ತಮಿಳುನಾಡಿನ ಹಲವೆಡೆ ಪೂಜನೀಯವಾಗಿ ಕಾಣಲಾಗುತ್ತಿದ್ದ ಜನಪದರ ದೈವ ಅಯ್ಯನಾರ್ ಆರಾಧನೆ ಅಯ್ಯಪ್ಪ ಎಂದಾಯಿತು ಎಂಬುದು ಜನಪದ ಐತಿಹ್ಯ. ಪೌರಾಣಿಕ ಹಿನ್ನೆಲೆಯು ಶೈವ ಮತ್ತು ವೈಷ್ಣವ ಮತ ಪರಂಪರೆಯು ಒಂದುಗೂಡುವ ಮೂಲಕ ಹರಿಹರ ಪುತ್ರನೆಂಬ ಉಪಾದಿಯು ಅಯ್ಯಪ್ಪನಿಗೆ ದೊರೆಯುತ್ತದೆ.
ಪ್ರಸ್ತುತ ಶಬರಿಮಲೆಯು ಹಲವು ಮತಗಳ ಸಮನ್ವಯತೆಗೆ ಸಾಕ್ಷಿಯಾಗಿದೆ. ಯಾವುದೇ ಬೇಧಗಳಿಲ್ಲದೆ ವಿವಿಧ ಮತ ಧರ್ಮ ವಿಶ್ವಾಸಿಗಳು ಶಬರಿಮಲೆ ತೀಥರ್ಾಟನೆಗೆ ಬರುತ್ತಾರೆ ಎಂಬುದು ಬಹಳ ವಿಶೇಷ. 42 ದಿನಗಳ ಸುದೀರ್ಘ ವೃತನಿಷ್ಠೆಯು ಪ್ರಕೃತಿ ಸಾಮೀಪ್ಯ ಸಹಿತ ಅಲೌಕಿಕ ಭಾವವನ್ನು ಬೆಳೆಸಿ ಕರುಣೆ, ವಾತ್ಸಲ್ಯ ವೃದ್ಧಿಯೊಂದಿಗೆ ಅಚಲ ವಿಶ್ವಾಸಕ್ಕೆ ಕಾರಣವಾಗಿದೆ. ಈ ಮಧ್ಯೆ 10-50 ವಯಸ್ಸಿನ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋಟರ್್ ತೀಪರ್ಿನ ಬೆನ್ನಲ್ಲೆ ಹಲವು ಪರ ವಿರೋಧಗಳು ಆರಂಭಗೊಂಡು, ರಾಜಕೀಯ ದೊಂಬರಾಟಕ್ಕೆ ನಾಂದಿ ಹಾಡಿದೆ. ಸರಕಾರ ಆರಂಭದಲ್ಲೇ ಸ್ತ್ರೀ ಪ್ರವೇಶವನ್ನು ಅನುಕೂಲಕರವಾಗುವಂತೆ ನೀಡುವುದರಲ್ಲಿ ಎಡವಿದೆ. ನಿಯಮವನ್ನು ಗಾಳಿಗೆ ತೂರಿ ಸೆ.28 ರಂದು ಬಂದ ಸುಪ್ರೀಂ ಕೋಟರ್್ ಅಧಿನಿಯಮವನ್ನು ಸಮರ್ಥವಾಗಿ ಪಾಲಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಇನ್ನು ಜನರ ಧಾಮರ್ಿಕ ಭಾವನೆಗಳನ್ನು ಅಥರ್ೈಸಿಕೊಳ್ಳಲು ಸರಕಾರ ವಿಫಲವಾಗಿದೆ ಎಂಬುದು ಸ್ಪಷ್ಟ. ಸುಪ್ರೀಂ ಕೋಟರ್್ ತೀರ್ಪನ್ನು ಧನಾತ್ಮಕವಾಗಿ ಕಾಣುವ ವಿವಿಧ ರಾಜಕೀಯ ಪಕ್ಷಗಳ ನಡೆ ಕೇರಳದಲ್ಲಿ ಮಾತ್ರ ವಿರುದ್ಧವಾಗಿದೆ. ಯಾಕೆಂದರೆ ಅ. 17 ಕ್ಕೆ ಆರಂಭಗೊಂಡ ತುಲಾ ಮಾಸ ಪೂಜೆಯ ಸಂದರ್ಭದಲ್ಲಿ ಸನ್ನಿಧಾನದ ಆಚರಣೆಗೆ ಪೂರಕವಾಗಿರುವ 42 ದಿನಗಳ ವೃತನಿಷ್ಠೆಯನ್ನು ಪಾಲಿಸಲು ಮಹಿಳೆಯರಿಗೆ ಸಾಧ್ಯವಾಗಿಲ್ಲ. ಇನ್ನು ಕೆಲವರಿಗೆ ಸೂಕ್ತ ರೀತಿಯಲ್ಲಿ ಗುರುವರ್ಯ ಹಿರಿ ಸ್ವಾಮಿಗಳ ಮಾರ್ಗದರ್ಶನ ಸಿಗಲಿಲ್ಲ, ಕೆಲ ಮಂದಿ ಹದಿನೆಂಟು ಮೆಟ್ಟಿಲುಗಳನ್ನು ಏರಲು ಇರುಮುಡಿ(ಶಬರಿಗಿರೀಶನಿಗೆ ಇಷ್ಟವಾದ ಅಕ್ಕಿ ಬೆಲ್ಲ ತುಪ್ಪ ದ್ರವ್ಯಗಳ ಎರಡು ಕಟ್ಟು) ಕೊಂಡೊಯ್ಯಬೇಕೆನ್ನುವ ಪರಿಜ್ಞಾನವೂ ಇರಲಿಲ್ಲ. ಹೀಗೆ ಹಲವು ನ್ಯೂನತೆಗಳ ಮಧ್ಯೆ ಮಹಿಳಾ ಪ್ರವೇಶವನ್ನು ನೀಡಲು ಮುಂದಾಗಿದ್ದ ಸರಕಾರದ ಕ್ರಮ ಸಾಧುವಾಗಿರಲಿಲ್ಲ.
ಸಾವಿರಾರು ವರ್ಷಗಳ ಹಿಂದೆಯೂ ಮಹಿಳೆಯರು ಶಬರಿಗಿರಿಯ ಸನ್ನಿಧಾನಕ್ಕೆ ತೆರಳುತ್ತಿದ್ದರು ಎಂಬುದು ಸ್ಪಷ್ಟ, 1990 ಕ್ಕೂ ಹಿಂದೆ ಶಬರಿಮಲೆಗೆ ಎಲ್ಲ ವಯೋಮಾನದ ಸ್ತ್ರೀಯರು ಪ್ರವೇಶಿಸುತ್ತಿದ್ದರು ಎಂಬುದು ಸ್ಪಷ್ಟ, ಆದರೆ ಅಲ್ಲಿಗೆ ತೆರಳುತ್ತಿದ್ದ ಯುವತಿಯರ ಸಂಖ್ಯೆಯು ಹೆಚ್ಚಿರಲಿಲ್ಲ ಎಂಬುದು ನಿಜ ಸಂಗತಿ. ಪ್ರಸ್ತುತ ಜನರ ಭಾವನೆಯನ್ನು ಅಸ್ತ್ರವಾಗಿಸಿ ರಾಜಕೀಯ ದೊಂಬರಾಟದಲ್ಲಿ ರಾಜ್ಯ ಸರಕಾರ ಮತ್ತು ಪ್ರತಿಪಕ್ಷ ಬಿಜೆಪಿ ತೊಡಗಿದೆ. ಶನಿ ಶಿಂಗಣಾಪುರ ಸಹಿತ ಶಬರಿಮಲೆಯ ಮುಕ್ತ ಸ್ತ್ರೀ ಪ್ರವೇಶಕ್ಕೆ ಒಮ್ಮತ ಸೂಚಿಸಿದ್ದ ಬಿಜೆಪಿ, ಕೇಂದ್ರ ಮತ್ತು ರಾಜ್ಯದಲ್ಲಿ ಭಿನ್ನ ನಿಲುವನ್ನು ಹೊಂದಿದೆ. ಹಿಂದೂ ಓಟ್ ಬ್ಯಾಂಕ್ ಎಲ್ಲಿ ತಪ್ಪುತ್ತದೆ ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವೂ ನೀಲಕ್ಕಲ್ಲು ಪ್ರದೇಶದಲ್ಲಿ ಟೆಂಟ್ ಹಾಕಿ ಪ್ರತಿಭಟನೆಗೆ ಇಳಿದಿದ್ದು ರಾಜಕೀಯದ ಸಂಕುಚಿತತೆಯನ್ನು ಎತ್ತಿ ಹಿಡಿಯುತ್ತದೆ. ಹಲವು ಧಾಮರ್ಿಕತೆ, ವೈಶಿಷ್ಟ್ಯಗಳು, ಪೌರಾಣಿಕತೆ ಸಹಿತ ಐತಿಹಾಸಿಕತೆಯನ್ನು ತನ್ನ ಆಂತರ್ಯದಲ್ಲಿ ಅಚಲವಾಗಿರಿಸಿ, ವಿಶಾಲ ಧಾಮರ್ಿಕತೆಯೊಂದಿಗೆ ಬಹುಜನರ ಇಷ್ಟಾರ್ಥ ದೇವನಾಗಿರುವ ಶಬರಿಮಲೆ ಧರ್ಮಶಾಸ್ತ ಸನ್ನಿಧಿಯ ಅಯ್ಯಪ್ಪನ ಸ್ಮರಣೆ, ವೀಕ್ಷಣೆಯ ಭಾಗ್ಯ ಸ್ತ್ರೀಯರಿಗೂ ಸಿಗಬೇಕು. ಕಪೋಲಕಲ್ಪಿತ ಐತಿಹಾಸಿಕ ಸಾಕ್ಷ್ಯಗಳು ಎಂಬಂತೆ ಬಿಂಬಿಸಿ ಶಬರಿಮಲೆಯ ದೈವೀ ಸಾನಿಧ್ಯವನ್ನು ಸ್ತ್ರೀಯರಿಂದ ಮರೆಮಾಚುವುದು ಸಮಂಜಸವಲ್ಲ.
ಕರುಣಾಮೂತರ್ಿಯಾದ ಅಯ್ಯಪ್ಪನ ರಕ್ಷಣೆ ಎಲ್ಲರೂ ಕಟಿಬದ್ಧರಾಗಬೇಕಿದೆ. ಸ್ತ್ರೀ ಸ್ವಾತಂತ್ರ್ಯದ ಕೂಗಿಗಿಂತ ಹೆಚ್ಚಾಗಿ ಪ್ರಸ್ತುತತೆಯ ಅರಿವು ಮತ್ತು ನಂಬಿಕೆಗಳನ್ನು ಮಥಿಸಿ ಉತ್ತಮ ವೇದಿಕೆ ನಿಮರ್ಿಸಬೇಕಾದ ಅನಿವಾರ್ಯತೆ ಇದೆ.
ವಿಶೇಷತೆ:
ಪರ್ಣ ಶಬರಿ ಎಂಬ ಹಿಂದೂ ಮತ್ತು ಬೌದ್ಧ ಧಮರ್ೀಯರ ದೇವತೆ, ಈಕೆ ರೋಗ ರುಜಿನಗಳನ್ನು ಇಲ್ಲವಾಗಿಸುವಳು ಎಂಬ ನಂಬಿಕೆ ಇದೆ. ಪರ್ಣ ಶಬರಿಯ ಹೋಲಿಕೆಯನ್ನು ದೇವಿ ತಾರಾಳಿಗೆ ಹೋಲಿಸಲಾಗಿದೆ. ದೂರದ ಮಂಗೋಲಿಯಾ, ರಷ್ಯಾದಲ್ಲೂ ಪರ್ಣ ಶಬರಿಯನ್ನು ಆರಾಧಿಸಲಾಗುತ್ತಿದೆ. ಬಂಗಾಲದ ಪಾಲ ರಾಜವಂಶದ ಅಧಿದೇವತೆಯು ಈ ಪರ್ಣ ಶಬರಿ. ಈಕೆ ಬೌದ್ಧ ತಾರಾಳ ಉಪದೇವತೆಯು ಹೌದು. ವಿಂಧ್ಯಾ ಗಿರಿ ಪ್ರದೇಶದ ಶಬರ ಎಂಬ ಜನಮಂದಿ ಈಕೆಯನ್ನು ಹೆಚ್ಚಾಗಿ ಆರಾಧಿಸುತ್ತಿದ್ದರು ಎಂಬ ಐತಿಹ್ಯವಿದೆ. ವಜ್ರಯೋಗಿನಿ ತಾಂತ್ರಿಕ ದೇವತೆ ಜೊತೆ ಪರ್ಣ ಶಬರಿಯ ಉಲ್ಲೇಖಗಳು ತಂತ್ರಾರಾಧನೆಯಲ್ಲಿ ಕಂಡು ಬರುತ್ತದೆ.
ಇತರ ಚಿತ್ರಗಳು 1942 ರಲ್ಲಿ ಶಬರಿಮಲೆ ಶ್ರೀ ಕ್ಷೇತ್ರದ ಸಂಗ್ರಹ ಚಿತ್ರ