ಶಬರಿಮಲೆ ವಿವಾದ: ಸುಪ್ರೀಂಕೋಟರ್್ ತೀಪರ್ು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದಾಳಿ
ತಿರುವನಂತಪುರ: 10-50 ವಯೋಮಾನದ ಎಲ್ಲಾ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋಟರ್್ ತೀರ್ಪನ್ನು ಸ್ವಾಗತಿಸಿದ್ದ ಕೇರಳದ ತಿರುವನಂತಪುರದ ಕುಂಡಮಕಡವುದಲ್ಲಿರುವ ಸ್ವಾಮಿ ಸಂದೀಪಾನಂದ ಗಿರಿಯವರ ಆಶ್ರಮದ ಮೇಲೆ ದುಷ್ಕಮರ್ಿಗಳ ತಂಡವೊಂದು ಶನಿವಾರ ದಾಳಿ ನಡೆಸಿದೆ.
ಆಶ್ರಮದ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿರುವ ದುಷ್ಕಮರ್ಿಗಳು ಆಶ್ರಮಕ್ಕೆ ಸೇರಿದ ಎರಡು ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿದ ಪರಿಣಾಮ ಆಶ್ರಮದಲ್ಲಿ ದಟ್ಟ ಹೊಗೆ ಆವರಿಸಿದ ಹಿನ್ನಲೆಯಲ್ಲಿ ಆಶ್ರಮದಲ್ಲಿದ್ದ ಸೇವಕರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದ್ದು, ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ದುಷ್ಕಮರ್ಿಗಳ ದಾಳಿಯಿಂದಾಗಿ ಆಶ್ರಮದ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯುಂಟಾಗಿದೆ. ಘಟನೆ ವೇಳೆ ಗಿರಿಯವರು ಆಶ್ರಮದಲ್ಲಿರಲಿಲ್ಲ. ಆಶ್ರಮದಲ್ಲಿ ಕೇವಲ ಇಬ್ಬರು ಸೇವಕರು ಮಾತ್ರ ಇದ್ದರು ಎಂದು ವರದಿಗಳು ತಿಳಿಸಿವೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂದೀಪಾನಂದ ಅವರು, ದಾಳಿ ಹಿಂದೆ, ಬಿಜೆಪಿ ಸಂಘ ಪರಿವಾರ, ಪಂದಳಂ ರಾಜಮನೆತನದ ಕುಟುಂಬ, ತಂಝಾಮೋನ್ ತಂತ್ರಿ ಹಾಗೂ ಅಯ್ಯಪ್ಪ ಧರ್ಮಸೇನಾ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಇಂತಹ ದಾಳಿಗಳಿಗೆ ನಾನು ತಲೆ ಬಾಗುವುದಿಲ್ಲ. ಈ ರೀತಿ ಅವರು ಒಂದು ದಿನ ಬೆಂಕಿ ಹಚ್ಚಬಹುದು. ಆದರೆ, ನಾನು ಸತ್ಯವನ್ನು ಹೇಳುವುದನ್ನು ಹೀಗೆಯೇ ಮುಂದುವರೆಸುತ್ತೇನೆಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಜಿಪಿ ಲೋಕನಾಥ್ ಬೆಹರಾ ಅವರು, ಘಟನೆ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.