HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಅಭಿವೃದ್ದಿ ಕಾಣದ ಉದ್ಯಾವರ ಸಾರ್ವಜನಿಕ ರುದ್ರ ಭೂಮಿ
    ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಉದ್ಯಾವರ ಮಾಡ ಸಮೀಪದ ಸಾರ್ವಜನಿಕ ರುಧ್ರ ಭೂಮಿ ವರ್ಷಗಳಿಂದ ಅಭಿವೃದ್ದಿ ಕಾಣದೆ ಪಾಳು ಬಿದ್ದಿರುವುದಾಗಿ ಊರವರು ಆರೋಪಿಸುತಿದ್ದಾರೆ.
  ರುದ್ರಭೂಮಿಯ ಸುತ್ತಲೂ ಕಾಡು-ಪೊದರುಗಳು ತುಂಬಿದ್ದು ಇಲ್ಲಿಗೆ ಅಗಮಿಸಲು ಸರಿಯಾದ ರಸ್ತೆಸೌಕರ್ಯವಿಲ್ಲದೆ ಉಪಯೋಗಶೂನ್ಯತೆಯ ಭೀತಿ ಎದುರಾಗಿದೆ.
  ಇಲ್ಲಿಯ ರುದ್ರಭೂಮಿಯು ಅನಿಲ ಉಪಯೋಗಿಸಿ ಶವ ಸಂಸ್ಕಾರ ಮಾಡುವ ಸ್ಮಶಾನವಾಗಿ ಮಾರ್ಪಡಿಸಿ ಅಭಿವೃದ್ದಿ ಗೊಳಿಸಬೇಕೆಂದು ಊರವರು ಒತ್ತಾಯಿಸುತಿದ್ದಾರೆ.
  ಜಿಲ್ಲೆಯ ಕಿನಾನೂರು ಕರಿಂದಳಂ ಗ್ರಾ. ಪಂ. ನ ಚೂರಿಪಾರ ಎಂಬ ಸ್ಥಳದಲ್ಲಿ ಜಿಲ್ಲೆಯ ಪ್ರಥಮ ಅನಿಲ ಉಪಯೋಗಿಸಿ ಶವ ಶರೀರವನ್ನು ಸಂಸ್ಕಾರಗೈಯ್ಯುವ ಸ್ಮಶಾನ ನಿಮರ್ಾಣ ಕೆಲಸ ಪೂತರ್ೀಕರಣದ ಹಂತದಲ್ಲಿದೆ. ಬ್ಲಾಕ್ ಪಂ. ಹಾಗೂ ಜಿಲ್ಲಾ ಪಂ. ಯೋಜನೆಯಡಿಯಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನ ನಿಮರ್ಾಣಗೊಳುತ್ತಿದೆ. ಇದೇ ರೀತಿ ಮಂಜೇಶ್ವರ ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉದ್ಯಾವರ ಸ್ಮಶಾನವನ್ನು ತುತರ್ು ಅಭಿವೃದ್ದಿಪಡಿಸಬೇಕಿದೆ.
  ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯ ಸುಮಾರು ಏಳು ವಾಡರ್ಿನ ಜನತೆ ಇದೇ ಸ್ಮಶಾನವನ್ನು ಆಶ್ರಯಿಸುತ್ತಿದ್ದಾರೆ. ಶತಮಾನಕ್ಕಿಂತಲೂ ಹಳೆಯದಾಗಿ  ಅಸ್ತಿತ್ವದಲ್ಲಿರುವ ಉದ್ಯಾವರ ಸ್ಮಶಾನವನ್ನು ಅವಗಣಿಸುತ್ತಿರುವ ಗ್ರಾ. ಪಂ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹ.
    ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ರುದ್ರಭೂಮಿಯ ಅಭಿವೃದ್ದಿಯ  ಬಗ್ಗೆ ಸ್ಥಳೀಯರು ರುಧ್ರಭೂಮಿಯ ಸಮಿತಿಯ ಮುಂದಾಳತ್ವದಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಇದರಂತೆ ಅದರ ಸುತ್ತ ಶುಚಿತ್ವ ಗೊಳಿಸುವಂತೆ ನ್ಯಾಯಾಲಯದ ಆದೇಶದ ನಿದರ್ೇಶದ ಪ್ರಕಾರ ನಾವು ಅಲ್ಲಿಗೆ ಎರಡು ಸಲ ತೆರಳಿದಾಗ ಅಲ್ಲಿಯ ಕೆಲವು ಸಮಾಜಘಾತಕ ಶಕ್ತಿಗಳು ನಮಗೆ ಅನುವು ಮಾಡಿ ಕೊಟ್ಟಿಲ್ಲ. ಮತ್ತೆ ನಾವು ಯಾವ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕೆಂಬುದಾಗಿ ಗ್ರಾ.ಪಂ. ಅಧ್ಯಕ್ಷರು ಪ್ರಶ್ನಿಸಿದ್ದಾರೆ. ನಮಗೆ ಎಲ್ಲರೂ ಒಂದೇ ಯಾವುದೇ ಸಮಸ್ಯೆಗೂ ಸೂಕ್ತವಾದ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳಲು  ನಾವು ಪ್ರಯತ್ನಿಸುವುದಾಗಿ ಅವರು ಹೇಳಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries