HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                              ಭಗಿನಿ ನಿವೇದಿತಾ ಸಂಸ್ಮರಣೆ
    ಬದಿಯಡ್ಕ: , ಸೇವೆಯೆನ್ನುವುದು ದೀಪದಂತೆ ನಿರಂತರ ಉರಿಯುತ್ತಾ ಜಗತ್ತಿಗೆ ಬೆಳಕನ್ನು ನೀಡಬೇಕು. ದೀಪದ ಬೆಳಕಿನಂತೆ ಸೇವೆಯು ಸಮಾಜಕ್ಕೆ ಒಳಿತನ್ನು ನೀಡುವ ಕಾರ್ಯವನ್ನು ಮಾಡುತ್ತದೆ. ಅಂತಹ ಉದಾತ್ತ ಕಾರ್ಯಕ್ಕೆ ತನ್ನನ್ನು ಸಮಪರ್ಿಸಿಕೊಂಡ ಭಗಿನಿ ನಿವೇದಿತರ ಸಂಸ್ಮರಣೆಯನ್ನು ಮಾಡಿಕೊಳ್ಳುವುದು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡ ಕಾರ್ಯಕರ್ತರಿಗೆ ಪ್ರೇರಣೆ ನೀಡುತ್ತದೆ ಎಂದು ನಿವೇದಿತಾ ಸೇವಾ ಪ್ರತಿಷ್ಠಾನದ ಪ್ರ.ಕಾರ್ಯದಶರ್ಿ ಗಣೇಶಕೃಷ್ಣ ಅಳಕ್ಕೆ ತಿಳಿಸಿದರು.
    ವೇದಿತಾ ಸೇವಾಮಿಶನ್ ನೀಚರ್ಾಲು ಹಾಗೂ ಯುವಕೇಸರಿ ಕಿಳಿಂಗಾರು ಇದರ ಆಶ್ರಯದಲ್ಲಿ ಶನಿವಾರ ಸಂಜೆ ಕಿಳಿಂಗಾರು ಯುವಕೇಸರಿ ಕಚೇರಿಯಲ್ಲಿ ನಡೆದ ಭಗಿನಿ ನಿವೇದಿತಾ ಸಂಸ್ಮರಣಾ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
   ಕಿಳಿಂಗಾರು ಯುವಕೇಸರಿಯ ಅಧ್ಯಕ್ಷ ಅನಿಲ್ ಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  ಹಿಂದೂ ಐಕ್ಯವೇದಿಕೆಯ ಮಂಜೇಶ್ವರ ತಾಲೂಕು ಪ್ರ. ಕಾರ್ಯದಶರ್ಿ, ಪತ್ರಕರ್ತ ಗಣೇಶ್ ಪಿ.ಎಂ. ಮುಂಡಾನ್ತಡ್ಕ ಸಂಸ್ಮರಣಾ ಭಾಷಣ ಮಾಡಿ ವಿದೇಶದಲ್ಲಿ ಜನಿಸಿ ಪುಣ್ಯಭೂಮಿ ಭಾರತದ ಆದರ್ಶವನ್ನು ಮನಗಂಡು ಸ್ವಾಮಿ ವಿವೇಕಾನಂದರ ಶಿಷ್ಯೆಯಾಗಿ ತನ್ನನ್ನು ತಾನು ತೊಡಗಿಸಿಕೊಂಡ ಭಗಿನಿ ನಿವೇದಿತಾರು ಇಡೀ ಜಗತ್ತಿಗೆ ಸಹೋದರಿಯಾಗಿ ಉನ್ನತ ಸ್ಥಾನದಲ್ಲಿ ನೆಲೆಸಿದ್ದಾರೆ. ಅವರ ಸೇವಾಕಾರ್ಯದಲ್ಲಿ ಸ್ವಾರ್ಥ ಹಾಗೂ ಕಲ್ಮಶಗಳಿರಲಿಲ್ಲ. ಈ ದೇಶಕ್ಕೋಸ್ಕರ ತನ್ನ ಬದುಕನ್ನೇ ಸಮಪರ್ಿಸಿಕೊಂಡ ಅವರು ಆದರ್ಶಪ್ರಾಯರಾದರು. ರಾಮಕೃಷ್ಣ ಮಿಶನ್ನ ಸೇವಾಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆ, ಚಿಕಿತ್ಸೆ ಎನ್ನುವಂತೆ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರು. ಆದುದರಿಂದಲೇ ಅವರು ನಮಗೆ ಪೂಜ್ಯ ಭಾವನೆಯಿಂದಿದ್ದಾರೆ ಎಂದು ತಿಳಿಸಿದರು.
   ರಾಷ್ಟ್ರೀಯ ಸ್ವಯಂಸೇವಕ ಸಂಘದ ಯಜ್ಞೇಶ್ ಪೊಯ್ಯಕಾಡು, ನಿವೇದಿತಾ ಸೇವಾ ಮಿಶನ್ನ ಹರಿಪ್ರಸಾದ್ ಪೆರ್ವ, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಯುವಕೇಸರಿಯ ಕಿಶಿನ್ ರಾಜ್, ಪ್ರಕಾಶ್, ಸುಜಿತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries