HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕುಂಬಳೆ ಸೀಮೆ ಧಾಮರ್ಿಕತೆಯ ತಿಲಕ-ವಸಂತ ಪೈ ಬದಿಯಡ್ಕ
    ಬದಿಯಡ್ಕ: ಅನೇಕ ಕುಟುಂಬಗಳು ಬೆಳಕನ್ನು ಕಾಣುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಯೋಜನೆಗಳು ಕಾರಣೀಭೂತವಾಗಿದೆ. ಸಂಘಟನಾತ್ಮಕ ಪ್ರಾರ್ಥನೆಗೆ ದೇವರು ಒಲಿಯುವುದಲ್ಲದೆ ನಾಡಿಗೆ ಒಳಿತಾಗುತ್ತದೆ ಎಂದು ಉದ್ಯಮಿ ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಬದಿಯಡ್ಕ ವಲಯ, ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಾವಿನಕಟ್ಟೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮಾವಿನಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಭಾನುವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಧಾಮರ್ಿಕ ಸಭೆ ಮತ್ತು ಮಾರ್ಪನಡ್ಕ ಒಕ್ಕೂಟ ಪದಗ್ರಹಣ ಸಮಾರಂಭದಲ್ಲಿ ಧಾಮರ್ಿಕ ಭಾಷಣಗೈದು ಅವರು ಮಾತನಾಡಿದರು.
   ಕುಂಬಳೆ ಸೀಮೆಯು ಧಾಮರ್ಿಕ ಚಟುವಟಿಕೆಗಳಿಗೆ ತಿಲಕವಾಗಿ ಕಂಗೊಳಿಸುತ್ತಿದೆ. ವಿಶ್ವದಲ್ಲಿ ಅತೀ ಹೆಚ್ಚು ಧಾಮರ್ಿಕ ಚಟುವಟಿಕೆಗಳು ನಡೆಯುವುದು ತುಳುನಾಡಿನಲ್ಲಾಗಿದೆ. ಭಗವಂತನನ್ನು ಅರಿಯುವ ಜ್ಞಾನವನ್ನು ಮಾನವನು ಸಂಪಾದಿಸಿದರೆ ಆತ ಜೀವನದಲ್ಲಿ ಸಾರ್ಥಕ್ಯವನ್ನು ಹೊಂದುತ್ತಾನೆ. ಅಶ್ವತ್ಥ ಮರದ ಅಡಿಯಲ್ಲಿ ಹೇಗೆ ಶುದ್ಧವಾದ ಗಾಳಿ ನಮಗೆ ಸಿಗುವುದೋ ಹಾಗೆಯೇ ಜೀವನದಲ್ಲಿ ಉನ್ನತಿಯನ್ನು ಕಾಣಲು ಸದ್ವಿಚಾರಗಳತ್ತ ಮನಮಾಡಬೇಕು. ಸದ್ಭಾವನೆಯಿಂದ ಮಾಡಿದ ಕಾರ್ಯಗಳಿಗೆ ಶ್ರೇಷ್ಠ ಫಲ ಲಭಿಸುತ್ತದೆ ಎಂದರು.
ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನ ಮಂದಿರದ ಅಧ್ಯಕ್ಷ ದಿವಾಕರ ಮಾವಿನಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ವೈದಿಕರಾದ ಕೃಷ್ಣ ಚಡಗ ಪಳ್ಳತ್ತಮೂಲೆ ದೀಪ ಬೆಳಗಿಸಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ ಎಂ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಒಂದೊಂದು ಕುಟುಂಬವು ನೆಮ್ಮದಿಯನ್ನು ಕಾಣುವಂತಾದಾಗ ಆ ಗ್ರಾಮವೇ ಅಭಿವೃದ್ಧಿಯನ್ನು ಹೊಂದುತ್ತದೆ ಎಂಬ ಆಶಯವನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಕಾರಗೊಳ್ಳುತ್ತದೆ. ಸಂಪ್ರದಾಯಪ್ರದವಾದ ಮನೆಯ ಮಕ್ಕಳು ಊರಿಗೆ ಹೆಮ್ಮೆಯೆನಿಸುತ್ತಾರೆ. ಕಳೆದ 32 ವರ್ಷಗಳಿಂದ ಜನರಿಂದ ಜನರಿಗಾಗಿ ಈ ಸಂಘಟನೆಯು ಕೆಲಸವನ್ನು ಮಾಡುತ್ತಿದ್ದು, ಗ್ರಾಮಗಳ ಅಭಿವೃದ್ಧಿಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ತರವಾಗಿದೆ ಎಂದರು.
   ಗ್ರಾಮಪಂಚಾಯತಿ  ಸದಸ್ಯ ಶಶಿಧರ ತೆಕ್ಕೆಮೂಲೆ, ಕಾಸರಗೋಡು ಯಾದವ ಸಭಾ ತಾಲೂಕು ಸಮಿತಿ ಕಾರ್ಯದಶರ್ಿ ನಾರಾಯಣ ಮಣಿಯಾಣಿ ಚೇಕರ್ೂಡ್ಲು, ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ  ಉಪಸ್ಥಿತರಿದ್ದು ಮಾತನಾಡಿದರು.
   ಗಾಯತ್ರಿ ಸ್ವಾಗತಿಸಿ, ಸರಸ್ವತಿ ವಂದಿಸಿದರು. ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ಧನಂಜಯ ನಿರೂಪಣೆಗೈದರು. ವೇದಮೂತರ್ಿ ಶಿವರಾಮ ಭಟ್ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಟ್ಟರು. ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries