HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ಬದಿಯಡ್ಕದ ರಾಮಲೀಲಾದಲ್ಲಿ ದಸರಾ ನಾಡಹಬ್ಬ
    ಬದಿಯಡ್ಕ: ದಸರಾ ನಾಡಹಬ್ಬ ಸಮಿತಿಯ ವತಿಯಿಂದ ದಸರಾ ಕಾರ್ಯಕ್ರಮವು ಅ.13 ರಿಂದ ಅ.15ರ ತನಕ ಬದಿಯಡ್ಕ ಶ್ರೀರಾಮಲೀಲಾ ಯೋಗಕೇಂದ್ರದಲ್ಲಿ ನಡೆಯಲಿರುವುದು. ಪ್ರತೀದಿನ ಅಪರಾಹ್ನ 2.30ರಿಂದ 6.30ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
   ಅ.13ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ. ಅಧ್ಯಕ್ಷತೆಯಲ್ಲಿ ನಿವೃತ್ತ ಅಧ್ಯಾಪಕ ವಳಕ್ಕುಂಜ ರಾಮ ಭಟ್ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಬಿ. ರಾಘವ ಟೈಲರ್ ಸಂಸ್ಮರಣೆಯ ಅಂಗವಾಗಿ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಭಾಷಣ ಮಾಡಲಿದ್ದಾರೆ. ನಿವೃತ್ತ ಉನ್ನತ ಸೇವಾಧಿಕಾರಿ ರತ್ನಾಕರ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬಳಿಕ ನುರಿತ ಕಲಾವಿದರಿಂದ `ಕಣರ್ಾಜರ್ುನ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಅ.14ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಕೃಷಿಕ ರಾಮಚಂದ್ರ ಕುಂಡಾಪು ಅಧ್ಯಕ್ಷತೆಯಲ್ಲಿ ಚೇಕರ್ೂಡ್ಲು ಶ್ರೀ ವಿಷ್ಣುಮೂತರ್ಿ ದೇವಸ್ಥಾನದ ವ್ಯವಸ್ಥಾಪಕ ಕೃಷ್ಣರಾಜ ಪಂಜರಿಕೆ ಉದ್ಘಾಟಿಸುವರು. ಕನ್ನಡದೋಜ ದಿ.ಪೆರಡಾಲ ಕೃಷ್ಣಯ್ಯ ಸಂಸ್ಮರಣೆಯ ಅಂಗವಾಗಿ ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಭಾಷಣ ಮಾಡುವರು. ಕಾರ್ಕಳ ಸರಕಾರಿ ಹಿರಿಯ ಮಹಾವಿದ್ಯಾಲಯದ ಡಾ.ವರದರಾಜ ಚಂದ್ರಗಿರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬಳಿಕ ನುರಿತ ಕಲಾವಿದರಿಂದ ಗಮಕ ವಾಚನ-ವ್ಯಾಖ್ಯಾನ ನಡೆಯಲಿದೆ.
ಅ.15ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಗೋಪಿ.ಕೆ ಅಧ್ಯಕ್ಷತೆಯಲ್ಲಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕ ಅಧ್ಯಕ್ಷ ಶಂಕರನಾರಾಯಣ ಮಯ್ಯ ಉದ್ಘಾಟಿಸುವರು. ದಿ. ಮೂಲಡ್ಕ ಸುಬ್ರಹ್ಮಣ್ಯ ಭಟ್ಟ ಸಂಸ್ಮರಣೆಯ ಅಂಗವಾಗಿ ನಿವೃತ್ತ ಮುಖ್ಯೋಪಾಧ್ಯಾಯ ಕೇಳು ಮಾಸ್ತರ್ ಅಗಲ್ಪಾಡಿ ಭಾಷಣ ಮಾಡುವರು. ಕೃಷಿಕ ಸತ್ಯನಾರಾಯಣ ಭಟ್ ಗೋಳಿತ್ತಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ನುರಿತ ಕಲಾವಿದರಿಂದ `ಭೀಮ ಧುಯರ್ೋಧನಕಣರ್ಾಜರ್ುನ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries