HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಹೊಸ ತಲೆಮಾರಿನ ಕವಿತೆಗಳು ಕ್ರಿಯಾತ್ಮಕವಾಗಿ ಬಲಗೊಳ್ಳಬೇಕು-ಡಾ.ರತ್ನಾಕರ ಮಲ್ಲಮೂಲೆ
     ಮುಳ್ಳೇರಿಯ: ಸಾಹಿತ್ಯ ಬರಹಗಳು ವ್ಯಕ್ತಿ-ವ್ಯಕ್ತಿತ್ವವನ್ನು ಬೆಳೆಸುತ್ತದೆ. ಆದಿಕವಿ ವಾಲ್ಮೀಕಿಯ ಪರಂಪರೆಯಲ್ಲಿ ಮೂಡಿಬಂದ ಸಾಹಿತ್ಯ ಪರಂಪರೆಯು ಸುಧೀರ್ಘ ಕಾಲದಿಂದ ಸಾಮಾಜಿಕ ಕಳಕಳಿಯೊಂದಿಗೆ ಮೂಡಿಬಂದಿರುವುದರಿಂದ ಮೌಲ್ಯಯುತ ಸಮಾಜ, ರಾಷ್ಟ್ರ ನಿಮರ್ಾಣದಲ್ಲಿ ಮಹತ್ವಪಡೆದಿದೆಯೆಂದು ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಶಾಂತಾ ರವಿ ಕುಂಟಿನಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲದ ಕವಿ ಹೃದಯದ ಸವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸರಣಿ ಸಾಹಿತ್ತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮುಳ್ಳೇರಿಯದ ಗಜಾನನ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
   ಸಮಾರಂಭವನ್ನು ಉದ್ಘಾಟಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ, ಕವಿತೆಯು ಅದ್ಬುತ ಶಕ್ತಿಯಿರುವ ಸಾಹಿತ್ಯ ಪ್ರಕಾರವಾಗಿದ್ದು, ಗೇಯತೆ,ಲಾಲಿತ್ಯಗಳಿಂದ ಆಕಷರ್ಿತಗೊಳಿಸುತ್ತದೆ. ಕವಿತೆಯ ಗುಣಮಟ್ಟ, ವಾಚನಾ ಶೈಲಿ, ಸಮಕಾಲೀನ ವಿಚಾರಗಳ ಚಿಕಿತ್ಸಕತನ ಮತ್ತು ಸಾಹಿತ್ಯ ಪರಂಪರೆಯ ಅರಿವುಗಳು ಕಾವ್ಯದ ಯಶಸ್ಸಿಗೆ ಕಾರಣವಾಗುತ್ತದೆ. ಪ್ರಾದೇಶಿಕ ಅರಿವಿನೊಂದಿಗೆ ಸಮಕಾಲೀನತೆಯ ಅನುಸಂಧಾನ ಕವಿತೆಯ ವ್ಯಾಪಕತೆಯನ್ನು ವಿಸ್ತರಿಸುತ್ತದೆ ಎಂದು ಅವರು ತಿಳಿಸಿದರು. ಸಾಮಾಜಿಕ ಬದ್ದತೆ, ಕಳಿಕಳಿಗಳು ಕವಿತೆಗಳ ವಿಸ್ತಾರತೆಗೆ ಕಾರಣವಾಗಿ ಪ್ರಬುದ್ದ ಸಮಾಜವೊಂದರ ನಿಮರ್ಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಕ್ರಿಯಾತ್ಮಕವಾದ ಹೋರಾಟ, ಭಾಷೆಯ ಬಗೆಗಿನ ಅಭಿಮಾನವನ್ನು ಕಟ್ಟಿ ಬೆಳೆಸುವಲ್ಲಿ ಆಧುನಿಕ ಕವಿತೆಗಳು ಇನ್ನಷ್ಟು ಬಲಗೊಳ್ಳಬೇಕು. ಮೌಲ್ಯಾಧಾರಿತ ಬರಹಗಳು ಅಜರಾಮರವಾಗಿ ಜನರೊಂದಿಗೆ ಮಿಳಿತಗೊಂಡಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯ-ಬರಹಗಳು ತಮ್ಮ ಹಿಂದಿನ ಸತ್ವವನ್ನು, ಶಕ್ತಿಯನ್ನು ಕಳಕೊಂಡಿರುವಂತೆ ಇಂದು ಕಂಡುಬರುತ್ತಿದೆ. ವರ್ತಮಾನದಲ್ಲಿ ನಿಂತು ಹಿಂದಿನ-ಮುಂದಿನ ಸಾಧ್ಯತೆಗಳನ್ನು ಕಟ್ಟಿಕೊಡುವ ಸಾಮಥ್ರ್ಯದ ಕೊರತೆ ಇಂದು ಕಾಡುತ್ತಿದೆ. ಈ ನಿಟ್ಟಿನಲ್ಲಿ ಹೊಸ ತಲೆಮಾರನ್ನು ಬೆಳೆಸಿ, ಬೆಸೆಯುವ ಸಾಹಿತ್ತಿಕ ಕಾರ್ಯಕ್ರಮಗಳು ವಿಸ್ತಾರಗೊಳ್ಳುತ್ತಿರುವುದು ಗಡಿನಾಡಿನ ಭಾಷೆ, ಬೆಳವಣಿಗೆಗೆ ಪೂರಕವಾಗುವುದೆಂದು ಅಭಿಪ್ರಾಯಪಟ್ಟರು. ಬಳಿಕ ಅವರು ನಿಮಗೆ ನಮಸ್ಕಾರ ಎಂಬ ತಮ್ಮ ಕವಿತೆಯೊಂದನ್ನು ವಾಚಿಸಿದರು. ಅಕ್ಷರಗಳಿಗೆಸ್ವರದಕಾವಿದೆ, ನೋವಿಗೆಜೀವವಿದೆ, ಕಡತಗಳು ಭವಿಷ್ಯದಲಿ ಮಾತನಾಡುತ್ತವೆ, ನಿದ್ದೆಯ ನಟಿಸುವಾಗ ಎಚ್ಚರವಿರಲಿ ಸ್ನೇಹಿತರೆ, ನಾಳೆನೋಡುತಾವೆ ಕಣ್ಣುಗಳು,, ಅವರನ್ನ ತಟ್ಟೆಗಳಲಿ, ನೀವು ಹಾಕಿದ ಹೇಲಿನುಂಡೆಗಳನು ಎನ್ನುವ ಸಾಲಿನ ಮೂಲಕ ವರ್ತಮಾನದ ಗೊಂದಲದ ಸಮಾಜ ಸ್ಥಿತಿಯ ಬಗ್ಗೆ ಬೆಳಕುಚೆಲ್ಲಿದರು. 
    ಕನರ್ಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಜಿಲ್ಲಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಹಾಗೂ ಪತ್ರಕರ್ತ, ಕವಿ ವಿರಾಜ ಅಡೂರು ಉಪಸ್ಥಿತರಿದ್ದು ಮಾತನಾಡಿ ಕವಿತೆಗಳನ್ನು ವಾಚಿಸಿದರು. ಕವಿ ಹೃದಯದಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಉಪಸ್ಥಿತರಿದ್ದರು.
   ಬಳಿಕ ನಡೆದ ಕವಿಗೋಷ್ಠಿಯಲ್ಲಿ ಜಯಶ್ರೀ ಪುತ್ತೂರು, ಆಶಾಲತಾ ಪೆರಡಾಲ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ದೇವರಾಜ್ ಕೆ.ಎಸ್, ಮಣಿರಾಜ್ ವಾಂತಿಚ್ಚಾಲ್ ಮೊದಲಾದವರು ಸ್ವರಚಿತ ಕವಿತೆಗಳನ್ನು ಓದಿದರು. ಆದ್ಯಂತ ಅಡೂರು ಹಾಗೂ ಸತ್ಯಕಾಮ ಕುಂಟಿನಿ ಹಾಡುಗಳನ್ನು ಹಾಡಿದರು. ಪುರುಷೋತ್ತಮ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ಕೆ.ಎಸ್. ವಂದಿಸಿದರು. ರಾಮಚಂದ್ರ ಬಲ್ಲಾಳ್ ಸಹಕರಿಸಿದರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries