HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ದೇವರ ನಾಡಿನಲ್ಲಿ ಸಂಪ್ರದಾಯವನ್ನು ಮೀರಲು ಮಹಿಳೆಯರು ಸಿದ್ಧರಿಲ್ಲ- ನ್ಯಾಯವಾದಿ.ಶಿಖಾ
   ಉಪ್ಪಳ: ಅಸಂಖ್ಯ ದೇವಾಲಯಗಳು ಮತ್ತು ವೈವಿಧ್ಯಮಯ ಆಚರಣೆಗಳಿಂದ ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳದಲ್ಲಿಯೇ  ಸಂಪ್ರದಾಯವನ್ನು ಮೀರಲು ಮಹಿಳೆಯರು ಸಿದ್ಧರಿಲ್ಲ. ಶಬರಿಮಲೆಯಲ್ಲಿ ಸ್ತ್ರೀಯರಿಗೆ ಎಂದೂ ಪ್ರವೇಶ ನಿರ್ಬಂದಿಸಿಲ್ಲ.ಅಲ್ಲಿ ಮಿತಿಗೊಳಪಟ್ಟ ಹರೆಯದವರಿಗೆ ಮುಕ್ತ ಪ್ರವೇಶ ನೀಡಲಾಗಿದೆ. ಆದರೆ ಸವರ್ೋಚ್ಛ ನ್ಯಾಯಾಲಯದ ತೀಪರ್ಿನ ನೆಪದಲ್ಲಿ ಹಿಂದುಗಳ ಸಂಪ್ರದಾಯ ಮತ್ತು ಸಂಸ್ಕಾರವನ್ನು ಹೀಗೆಳೆಯುವ ರಾಜ್ಯ ಸರಕಾರ ಹುನ್ನಾರ ಫಲ ನೀಡದು ಎಂದು ಭಾರತೀಯ ಯುವಮೋಚರ್ಾ ರಾಜ್ಯ ಸಮಿತಿ ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ.ಶಿಖಾ ಎನ್.ಪಿ. ಅಭಿಪ್ರಾಯಪಟ್ಟರು.
 ಭಾರತೀಯ ಮಹಿಳಾಮೋಚರ್ಾ ಪೈವಳಿಕೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಸಂಘ ಪರಿವಾರದ ವಿವಿಧ ಸಮಿತಿಗಳ ನೇತೃತ್ವದಲ್ಲಿ ಭಾನುವಾರ ಬಾಯಾರು ಸಮೀಪದ  ಮುಳಿಗದ್ದೆಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
   ಮದ್ಯಮಾಫಿಯಾ ತಂಡದೊಂದಿಗೆ ಶಾಮೀಲಾಗಿರುವ ಸಂಸ್ಕಾರ ವಿಹೀನ ತೃಪ್ತಿ ದೇಸಾಯಿ ಎಂಬ ಮಹಿಳೆ ಶಬರಿಮಲೆಗೆ ಪ್ರವೇಶಿಸಲು ವಿಫಲ ಯತ್ನ ನಡೆಸುವರೇ ಹೊರತು ಸಂಸ್ಕಾರಯುಕ್ತ ಮಹಿಳಾ ಭಕ್ತೆಯಾಗಿ ಎಂದೂ ಕ್ಷೇತ್ರದ ಸಂಪ್ರದಾಯದ ಉಲ್ಲಂಘನೆಗೆ ಮುಂದಾಗುವುದಿಲ್ಲ. ನಂಬಿಕೆಗಳನ್ನು ಪ್ರಶ್ನಿಸುವ, ಸವಾರಿಮಾಡುವ ಪ್ರಯತ್ನಗಳಿಗೆ ಭಕ್ತರು ಬೆಲೆ ನೀಡರು ಎಂದು ಅವರು ತಿಳಿಸಿದರು.
   ಬಿ.ಜೆ.ಪಿ.ಜಿಲ್ಲಾ ಸಮಿತಿ ಸದಸ್ಯೆ, ಬ್ಲಾಕ್ ಪಂಚಾಯತಿ ಮಾಜಿ ಸದಸ್ಯೆ ಸ್ನೇಹಲತಾ ದಿವಾಕರ್ ಮಾತನಾಡಿ ಭಾರತೀಯ ಮಹಿಳೆಯರು ಪರಂಪರೆಯ ಹಕ್ಕುದಾರರು.ಮಾನವನ ಮತ್ತು ಪ್ರಕೃತಿಯ ನೈಸಗರ್ಿಕ ಕ್ರಿಯೆಯನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ.ಆದುದರಿಂದ ಮಹಿಳೆಯರ ನೈಸಗರ್ಿಕ ಕ್ರಿಯೆಯನ್ನು ಮೀರಿ ಶಬರಿಮಲೆ ಯಾತ್ರೆಗೈದು  ಮಹಿಳೆಯರು ಏನನ್ನೂ ಸಾಧಿಸಲಾರರು. ನಾಸ್ತಿಕವಾದಿ ರಾಜ್ಯ ಸರಕಾರದ ಹುನ್ನಾರ ಫಲ ನೀಡದು ಎಂದು ತಿಳಿಸಿದರು.
  ಭಾರತೀಯ ಮಹಿಳಾಮೋಚರ್ಾ ಜಿಲ್ಲಾಧ್ಯಕ್ಷೆ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ ಈ ಸಂದರ್ಭ ಮಾತನಾಡಿ ನಿವೃತ್ತ ಶಿಕ್ಷಕಿ, ಸಿ.ಪಿ.ಎಂ.ಪಕ್ಷದ ಕೇಂದ್ರ ಸಮಿತಿ ಸದಸ್ಯೆ ಕಣ್ಣೂರಿನ ಲೋಕಸಭಾ ಸದಸ್ಯೆಯಾದ ಶ್ರೀಮತಿ ಟೀಚರ್ ಶಬರಿಮಲೆ ನೆಪದಲ್ಲಿ ಮಹಿಳೆಯರ ಕುರಿತು ಅವಹೇಳನ ನಡೆಸಿರುವುದು ಖಂಡನೀಯವಾಗಿದ್ದು ಸ್ತ್ರೀ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ತಿಳಿಸಿದರು.
    ವಿಶ್ವಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾಮೋಚರ್ಾ ನಾಯಕಿಯರಾದ ಸರೋಜ ಆರ್.ಬಲ್ಲಾಳ್,ಪುಷ್ಪಾ ಲಕ್ಷ್ಮಿ, ಕಮಲಾ ಭಟ್, ಗಿರಿಜಾ ಶೆಟ್ಟಿ, ಲೀಲಾವತಿ, ಭವ್ಯಾ ಬಾಯಾರು, ರಾಜೀವಿ ರೈ, ತಾರಾ ವಿ.ಶೆಟ್ಟಿ, ಚಂದ್ರಾವತಿ ಕುಳ್ಯಾರು, ಲಲಿತಾ ಬಾಯಾರು ಸಂಘ ಪರಿವಾರದ ನಾಯಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ,ಹರಿಶ್ಚಂದ್ರ ಮಂಜೇಶ್ವರ, ಪ್ರಸಾದ್ ರೈ ಕಯ್ಯಾರ್, ಧನರಾಜ್ ಪ್ರತಾಪ್ನಗರ, ರಾಜೇಶ್ ಮಾರು ಬಾಯಾರ್, ಮಣಿಕಂಠ ರೈ, ಪ್ರವೀಣಚಂದ್ರ ಬಲ್ಲಾಳ್, ಎಸ್.ಸುಬ್ರಹ್ಮಣ್ಯ ಭಟ್,ಎ.ಕೆ.ಕಯ್ಯಾರ್, ಸದಾನಂದ ಕೊಮ್ಮಂಡ, ಕುರುವೇರಿ ಕೃಷ್ಣ ಭಟ್, ವಿಷ್ಣು ಭಟ್ ಕನಿಯಾಲ, ಅಚ್ಯುತ ಚೇವಾರ್, ಅನಂತಕೃಷ್ಣ ಭಟ್, ಸುಂದರ ಶೆಟ್ಟಿ ಕಳಾಯಿ,ಎಸ್.ಎಸ್.ಭಟ್, ಕಿಶೋರ್ ಕುಮಾರ್ ನಾಕ್, ಗಣೇಶ್ ಕುಲಾಲ್, ಸುಕುಮಾರ ಕೊಜಪ್ಪೆ, ವಿನೋದ್ ಬಾಯಾರು, ಸಂತೋಷ್ ಶೆಟ್ಟಿ ಪಟ್ಲ, ಗುರುಸ್ವಾಮಿಗಳಾದ ಗಣಪತಿ ಭಟ್, ಚಂದ್ರಶೇಖರ್, ರಾಘವ ಮಾಸ್ಟರ್ ಉಪಸ್ಥಿತರಿದ್ದರು. ಪ್ರತಿಭಟನೆಗೆ ಮೊದಲು ನೂರಾರು ಮಹಿಳೆಯರ ಸಹಿತ ಚಿಪ್ಪಾರು ಪದವಿನಿಂದ ಮತ್ತು ಬದಿಯಾರು ದೈವಸ್ಥಾನ ಬಳಿಯಿಂದ ಮುಳಿಗದ್ದೆಗೆ ಬೃಹತ್ ನಾಮ ಸಂಕೀರ್ತನಾ ಮೆರವಣಿಗೆ ಆಗಮಿಸಿತು. ವಿಹಿಂಪ ಮುಖಂಡ ಉಳುವಾನ ಶಂಕರ ಭಟ್ ಸ್ವಾಗತಿಸಿ, .ಪುಷ್ಪಾ ಕೊಮ್ಮಂಗಳ ವಂದಿಸಿದರು.



   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries