ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ= ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕತರ್ೆಯರು ಕೊನೆಗೂ ವಾಪಸ್!
ಭಾರಿ ಭದ್ರತೆಯೊಂದಿಗೆ ಶಬರಿಮಲೆ ಗುಡ್ಡ ಹತ್ತಿದ್ದ ಮಹಿಳಾ ಪತ್ರಕತರ್ೆಯರೊಂದಿಗಿನ ಸಂಧಾನ ಯಶಸ್ವಿ
ಕಾಸರಗೋಡು: ಸುಪ್ರೀಂ ಕೋಟರ್್ ಆದೇಶ, ಕೇರಳ ಪೊಲೀಸರ ಭಾರಿ ಭದ್ರತೆಯ ನಡುವೆಯೂ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಅಸಾಧ್ಯವಾಗಿದ್ದು, ಶಬರಿಮಲೆಯಿಂದ ಮಹಿಳಾ ಪತ್ರಕತರ್ೆಯರು ವಾಪಸ್ ಆಗಿದ್ದಾರೆ.
ಪುರಾತನ ಧಾಮರ್ಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋಟರ್್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳಾ ಪತ್ರಕತರ್ೆಯರು ಶುಕ್ರವಾರ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆಂಧ್ರ ಪ್ರದೇಶ ಮೂಲದ ಪತ್ರಕತರ್ೆ ಕವಿತಾ ಜಕ್ಕಲ್ ಮತ್ತು ಮಹಿಳಾ ಕಾರ್ಯಕತರ್ೆ ರೆಹಾನಾ ಫಾತಿಮಾ ಶಬರಿಮಲೆಯತ್ತ ಪ್ರಯಾಣ ಆರಂಭಿಸಿದ್ದರು. ಆದರೆ ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆಗೆ ಅವರು ಮಣಿದಿದ್ದು, ಶಬರಿಮಲೆಯಿಂದ ವಾಪಸ್ ತೆರಳಲು ನಿರ್ಧರಿಸಿದ್ದಾರೆ.
ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಮಹಿಳೆಯರು ದೇಗುಲದತ್ತ ಹೆಜ್ಜೆ ಹಾಕಿದರು. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಶಬರಿಲಮಯೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸತ್ತರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದೇ ಆದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಪ್ರಧಾನ ಅರ್ಚಕರು ಬೆದರಿಕೆ ಹಾಕಿದರು. ಹೀಗಾಗಿ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿದ ಪೊಲೀಸ್ ವರಿಷ್ಠಾಧಿಕಾರಿಗಳು ಪಥನಂತಿಟ್ಟ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಈ ವೇಳೆ ಕಚೇರಿಗೆ ಮಹಿಳಾ ಪತ್ರಕತರ್ೆಯರನ್ನೂ ಕರೆಸಿಕೊಂಡ ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯಲ್ಲಿ ದೇವರ ದರ್ಶನ ಬೇಡ ಎಂದು ಪತ್ರಕತರ್ೆಯರ ಮನವೊಲಿಸಿದ್ದಾರೆ.
ಅಲ್ಲದೆ ಸ್ವತಃ ದೇಗುಲದ ಅಚರ್ಕರೂ ಕೂಡ ಅಯ್ಯಪ್ಪ ಸ್ವಾಮಿ ಭಕ್ತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ದೇಗುಲ ಮುಚ್ಚುವ ಬೆದರಿಕೆ ಹಾಕಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವಂತೆ ಮಾಡಿತ್ತು. ಅಂತಿಮವಾಗಿ ಮಹಿಳಾ ಪತ್ರಕತರ್ೆಯರು ಶಬರಿಮಲೆಯಿಂದ ವಾಪಸ್ ತೆರಳು ನಿರ್ಧರಿಸಿದ್ದಾರೆ.
ದೇವರ ದರ್ಶನಕ್ಕಾಗಿ ಕಣ್ಣೀರು ಹಾಕಿ ಗೋಗರೆದ ಮಹಿಳೆಯರು:
ಶಬರಿಮಲೆಗೆ ಮಹಿಳೆಯ ಪ್ರವೇಶ ಮಾಡುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ದಂಡು ಅವರನ್ನು ತಡೆಯಿತು. ಈ ವೇಳೆ ದೇಗುಲ ಅರ್ಚಕರೂ ಕೂಡ ಮಹಿಳೆಯರನ್ನು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಮಹಿಳೆಯರು ನಮ್ಮ ಪ್ರಾಣದ ಹಂಗು ತೊರೆದು ಪೊಲೀಸ್ ಭದ್ರತೆಯಲ್ಲಿ ಇಲ್ಲಿಯವರೆಗೂ ಬಂದಿದ್ದೇವೆ. ದಯವಿಟ್ಟೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಿ ಎಂದು ಕಣ್ಣೀರು ಹಾಕಿ ಗೋಗರೆದ ದೃಶ್ಯ ಕಂಡುಬಂತು. ಆದರೆ ಮಹಿಳಾ ಕಾರ್ಯಕರ್ತರಿಗೆ ಮಣಿಯದ ಅರ್ಚಕರು ಸಂಪ್ರದಾಯ ಮೀರಲು ಸಾಧ್ಯವೇ ಇಲ್ಲ. ನೀವು ಇಲ್ಲಿಂದ ವಾಪಸ್ ಹೋಗದಿದ್ದರೆ ದೇಗುಲವನ್ನು ಮುಚ್ಚಿ ಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರಿಂದ ಮಹಿಳೆಯರು ಅನಿವಾರ್ಯವಾಗಿ ಅಲ್ಲಿಂದ ವಾಪಸ್ ಆದರು.
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಮಹಿಳಾ ಕಾರ್ಯಕತರ್ೆ ರೆಹಾನಾ ಫಾತಿಮಾ ಮನೆ ಮೇಲೆ ದಾಳಿ!
ಶಬರಿಮಲೆಗೆ ಪ್ರವೇಶ ಮಾಡಲು ಯತ್ನಿಸಿದ್ದ ಮಹಿಳಾ ಕಾರ್ಯಕತರ್ೆ ರೆಹಾನಾ ಫಾತಿಮಾ ಅವರ ಕೊಚ್ಚಿ ನಿವಾಸದ ಮೇಲೆ ದಾಳಿಯಾಗಿದ್ದು, ಮನೆಯ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಅತ್ತ ರೆಹಾನಾ ಫಾತಿಮಾ ಶಬರಿಮಲೆ ಗುಡ್ಡ ಹತ್ತುತ್ತಿದ್ದಂತೆಯೇ ಇತ್ತ ಆಕ್ರೋಶಿತ ಗುಂಪೊಂದು ಕೊಚ್ಚಿಯಲ್ಲಿ ಆಕೆಯ ಮನೆಯನ್ನು ಧ್ವಂಸಗೊಳಿಸಿದೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಉದ್ರಿಕ್ತ ಗುಂಪು ಚದುರಿದ್ದು, ಪ್ರಸ್ತುತ ರೆಹಾನಾ ಫಾತಿಮಾ ಅವರ ಮನೆಯ ಬಳಿ ಪೊಲೀಸ್ ಜೀಪೊಂದು ಮೊಕ್ಕಾಂ ಹೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶುಕ್ರವಾರ 300 ಮಂದಿ ಸೇನಾ ಸಿಬ್ಬಂದಿ ನಡುವೆ ಹೆಲ್ಮೆಟ್ ಧರಿಸಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡು ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶ ಮೂಲಕ ಮಹಿಳಾ ಪತ್ರಕತರ್ೆ ಶಬರಿಮಲೆಗೆ ತೆರಳಿದ್ದರು. ಆದರೆ ಸನ್ನಿಧಾನಂಗೆ ಸಮೀಪದಲ್ಲಿರುವ ವಳಿಯ ನದಪ್ಪಂಧಲ್ ನಲ್ಲಿಯೇ ಪ್ರತಿಭಟನಾಕಾರರು ಅವರನ್ನು ತಡೆದರು. ಈ ವೇಳೆ ಕೇರಳ ಪೊಲೀಸ್ ವರಿಷ್ಠಾಧಿಕಾರಿಗಳು ಸಂಧಾನ ನಡೆಸಿದ್ದು, ಅಲ್ಲದೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನಿ ಅರ್ಚಕರೂ ಕೂಡ ದೇಗುಲದ ಬಾಗಿಲು ಹಾಕಿ ಬಿಡುವುದಾಗಿ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಅವರನ್ನು ಶಬರಿಮಲೆಯಿಂದ ವಾಪಸ್ ಕಳುಹಿಸಲಾಯಿತು.
ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಲ್ಲ, ಕಾನೂನು ಸುವ್ಯವಸ್ಥೆ ರಕ್ಷಣೆಯೇ ನಮಗೆ ಮುಖ್ಯ': ಕೇರಳ ಸಚಿವ
ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಲ್ಲ, ಇಲ್ಲಿ ಯಾವುದೇ ರೀತಿಯ ಮೇಲುಗೈ ಸಾಧನೆ ಎಂಬುದಕ್ಕಿಂತ ಕಾನೂನು ಸುವ್ಯವಸ್ಥೆ ರಕ್ಷಣೆಯೇ ನಮಗೆ ಮುಖ್ಯ ಎಂದು ಕೇರಳ ಸಚಿವ ಕಡನಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಪ್ರವೇಶ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಓರ್ವ ಮಹಿಳಾ ಪತ್ರಕತರ್ೆ ಮತ್ತು ಓರ್ವ ಮಹಿಳಾ ಕಾರ್ಯಕರ್ತರು ಶಬರಿಮಲೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಸೂಕ್ತ ಭದ್ರತೆ ಕೂಡ ನೀಡಲಾಗಿದೆ. ಇಲ್ಲಿ ಯಾರ ಪ್ರತಿಷ್ಟೆಯ ಪ್ರಶ್ನೆಯೂ ಇಲ್ಲ. ಸುಪ್ರೀಂ ಕೋಟರ್್ ಆದೇಶದ ಪಾಲನೆ ಮತ್ತು ಅದರ ಜೊತೆ ಜೊತೆಗೇ ಕಾನೂನು ಸುವ್ಯವಸ್ಥೆ ಕೂಡ ಮುಖ್ಯ. ಶಾಂತಿ ಹಾಳಾಗುವುದು ನಮಗೆ ಬೇಕಿಲ್ಲ. ಮಹಿಳಾ ಶಕ್ತಿ ಪ್ರದರ್ಶನಕ್ಕೆ ಶಬರಿಮಲೆ ವೇದಿಕೆಯಾಗುವುದು ಸರಿಯಲ್ಲ. ಶಕ್ತಿ ಪ್ರದರ್ಶನಕ್ಕೆ ಇದು ಸೂಕ್ತ ಪರಿಸ್ಥಿತಿಯೂ ಅಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.
ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ= ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕತರ್ೆಯರು ಕೊನೆಗೂ ವಾಪಸ್!
ಪುರಾತನ ಧಾಮರ್ಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋಟರ್್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳಾ ಪತ್ರಕತರ್ೆಯರು ಶುಕ್ರವಾರ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರ ಬೆನ್ನಿಗೇ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದೇ ಆದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಪ್ರಧಾನ ಅರ್ಚಕರು ಬೆದರಿಕೆ ಹಾಕಿದರು. ಹೀಗಾಗಿ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿದ ಪೊಲೀಸ್ ವರಿಷ್ಠಾಧಿಕಾರಿಗಳು ಪಥನಂತಿಟ್ಟ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಈ ವೇಳೆ ಕಚೇರಿಗೆ ಮಹಿಳಾ ಪತ್ರಕತರ್ೆಯರನ್ನೂ ಕರೆಸಿಕೊಂಡ ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯಲ್ಲಿ ದೇವರ ದರ್ಶನ ಬೇಡ ಎಂದು ಪತ್ರಕತರ್ೆಯರ ಮನವೊಲಿಸಿದ್ದಾರೆ.
ಜೊತೆಗೆ ಸ್ವತಃ ದೇಗುಲದ ಅಚರ್ಕರೂ ಕೂಡ ಅಯ್ಯಪ್ಪ ಸ್ವಾಮಿ ಭಕ್ತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ದೇಗುಲ ಮುಚ್ಚುವ ಬೆದರಿಕೆ ಹಾಕಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವಂತೆ ಮಾಡಿತ್ತು. ಅಂತಿಮವಾಗಿ ಮಹಿಳಾ ಪತ್ರಕತರ್ೆಯರು ಶಬರಿಮಲೆಯಿಂದ ವಾಪಸ್ ತೆರಳು ನಿರ್ಧರಿಸಿದರು.
ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ, ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ: ಕೇರಳ ಪೊಲೀಸ್
ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಶಬರಿಮಲೆಯಲ್ಲಿ ಹಿಂಸಾಚಾರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಕ್ತಾದಿಗಳೊಂದಿಗೆ ಮಾತುಕತೆ ನಡೆಸಿರುವ ಕೇರಳ ಐಜಿ ಎಸ್.ಶ್ರೀಜಿತ್ ಅವರು, ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ. ಮಹಿಳೆಯರ ಪ್ರವೇಶ ಕುರಿತು ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸ್ಥಳದ ಪರಿಸ್ಥಿತಿ ಕುರಿತಂತೆ ಅವರಿಗೆ ವಿವರಣೆ ನೀಡುತ್ತಿದ್ದೇವೆಂದು ಹೇಳಿದ್ದಾರೆ.
ದೇಶದ ಸವರ್ೋನ್ನತ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದರಂತೆ ಸುಪ್ರೀಂಕೋಟರ್್ ಆದೇಶದ ಬಳಿಕ ಬುಧವಾರವಷ್ಟೇ ದೇಗುಲದ ಬಾಗಿಲನ್ನು ತೆರೆಯಲಾಗಿತ್ತು. ಆದರೆ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.



