ಬಂಗ್ರಮಂಜೇಶ್ವರದಲ್ಲಿ ಅಕ್ಷರಾಭ್ಯಾಸ
ಮಂಜೇಶ್ವರ: ಓಂ ಎಂಬ ನಾಮ ಸ್ಮರಣೆಯೊಂದಿಗೆ ಸಾವಿರಾರು ಪುಟಾಣಿಗಳು ಅಕ್ಷರ ಲೋಕಕ್ಕೆ ವಿಜಯ ದಶಮಿಯ ದಿನವಾದ ಶುಕ್ರವಾರ ಬೆಳಿಗ್ಗೆ ಕಾಲಿರಿಸಿದರು.
ವಿಜಯ ದಶಮಿ ಪ್ರಯುಕ್ತ ಪುಟ್ಟ ಮಕ್ಕಳಿಗೆ ಅಕ್ಷರಭ್ಯಷಾ ಮಾಡಿಸುವ ಸಂಪ್ರದಾಯ ಪ್ರತಿ ವರ್ಷ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿಯವರು ವಿದ್ಯಾರಾಂಭಕ್ಕೆ ದೇವರ ಸನ್ನಿಧಿಯಲ್ಲಿ ಚಾಲನೆ ನೀಡಿದರು. ಹಲವಾರು ಪುಟಾಣಿಗಳು ಓಂ ಅಕ್ಷರದ ಮೂಲಕ ಶುಭಗಳಿಗೆಯಲ್ಲಿ ಅಕ್ಷರ ಲೋಕಕ್ಕೆ ಕಾಲಿರಿಸಿದರು. ಕ್ಷೇತ್ರದ ಆಡಳಿತ ಸಮಿತಿಯ ಸರ್ವ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.