HEALTH TIPS

No title

              ಪೂಂಚ್ ಬಳಿ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತದ ಸೇನೆ ದಾಳಿ
      ಜಮ್ಮು-ಕಾಶ್ಮೀರ : ಮಹತ್ವದ ಬೆಳವಣಿಗೆಯೊಂದರಲ್ಲಿ ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನಾ ಆಡಳಿತಾತ್ಮಕ ಕೇಂದ್ರ  ಕಚೇರಿ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.
   ಅಕ್ಟೋಬರ್ 23 ರಂದು ಪೊಂಚ್ ಹಾಗೂ ಜಾಲ್ಹಾಸ್  ಬಳಿ  ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
   ಭಾರತೀಯ ಸೇನೆಯಿಂದ ಗುಂಡಿನ ದಾಳಿ ನಡೆಸಿದ ನಂತರ ಪೊಂಚ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಹೊಗೆ ಕಾಣಿಸಿಕೊಂಡಿದೆ. ಪಾಕಿಸ್ತಾನದಿಂದ ನಿರಂತರವಾಗಿ ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆ ಗರಿಷ್ಠ ಪ್ರಮಾಣದಲ್ಲಿ ಪ್ರತಿರೋಧ ನೀಡುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
  ಪಾಕಿಸ್ತಾನದ ಹಜಿರಾ, ನಿಕಿಯಾಲ್ ಮತ್ತು ಸಾಮನಿ ಮತ್ತಿತರ ಪಟ್ಠಣಗಳು ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿದ್ದು, ಗಡಿ ಪ್ರದೇಶದಲ್ಲಿನ  ಜನರು  ದೌರ್ಜನ್ಯ ಅಥವಾ ಗುರಿಯಾಗುವುದನ್ನು  ತಪ್ಪಿಸಲು ಭಾರತೀಯ ಸೇನೆ ನಿರಂತರವಾಗಿ ಹೋರಾಡುತ್ತಿದೆ.
    ಜಮ್ಮು ಮತ್ತು ಕಾಶ್ಮೀರದ ಉರಿ ಮತ್ತು ನಾಗ್ರೋತಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ  2016 ಸೆಪ್ಟೆಂಬರ್ ತಿಂಗಳಲ್ಲಿ ಭಾರತ  ಸಜರ್ಿಕಲ್ ಸ್ಟ್ರೈಕ್ ನಡೆಸಿದ ಎರಡು ವರ್ಷದ ನಂತರ ಪಾಕ್ ಮೇಲೆ  ನಡೆಸಿರುವ ದೊಡ್ಡಮಟ್ಟದ ದಾಳಿ ಇದಾಗಿದೆ.
ಅನಕ್ಷರಸ್ಥ ಹಾಗೂ ಉದ್ಯೋಗ ಇಲ್ಲದ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿನ ಪಾಕ್  ಕುಟುಂಬಗಳು  ಆ ರಾಷ್ಟ್ರದ ಸೇನೆಯ ಸಮೀಪದಲ್ಲಿದ್ದು, ಅವರನ್ನು ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ  ಕಾಯರ್ಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ಡಾನ್ ಪತ್ರಿಕೆ ವರದಿ ಮಾಡಿತ್ತು. 
  ಈ ನಿಟ್ಟಿನಲ್ಲಿ, ಪಾಕಿಸ್ತಾನ ಸೈನ್ಯದ ಹಗರಣ ಬಹಿರಂಗ  ಮತ್ತು  ಉಗ್ರರನ್ನು ಪ್ರೋತ್ಸಾಹಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿತ್ತು ಎಂದು  ಮೂಲಗಳು ಹೇಳುತ್ತವೆ.
ಪಾಕಿಸ್ತಾನದಲ್ಲಿನ ತಮ್ಮ ಸಂಬಂಧಿಗಳು, ಸ್ನೇಹಿತರು ಹಾಗೂ ವ್ಯಾಪಾರದ ಉದ್ದೇಶಕ್ಕಾಗಿ ಭಾರತೀಯರು  ತೆರಳುತ್ತಿದ್ದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ.ಈ ಮಾರ್ಗದಲ್ಲಿ  ಪಾಕಿಸ್ತಾನ ಅನೇಕ ನಿರ್ಬಂಧ ವಿಧಿಸಿದ್ದು, ಕೆಲವೇ  ಭಾರತೀಯರು ಪಾಕಿಸ್ತಾನಕ್ಕೆ ತೆರಬಹುದಾಗಿದೆ. ಹಾಗೇ ನೋಡಿದರೆ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನದ ಜನರು ಭಾರತಕ್ಕೆ ಬರುತ್ತಿದ್ದಾರೆ.
  ಈ ವರ್ಷದ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಮುಖಾಂತರ  ಒಟ್ಟಾರೇ 283 ಪಾಕಿಸ್ತಾನ ನಿವಾಸಿಗಳು ಭಾರತಕ್ಕೆ ಬಂದಿದ್ದಾರೆ.ಭಾರತದಿಂದ ಕೇವಲ 8 ಮಂದಿ ನಾಗರಿಕರು ಮಾತ್ರ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries