ಸಂಪತ್ತು ಎಷ್ಟಿದ್ದರೂ ಕಲೋಪಾಸಕನಾಗುವುದು ಮಹತ್ತರ-ಇ.ಜನಾರ್ಧನನ್
ಏತಡ್ಕದಲ್ಲಿ ನೃತ್ಯ ಪ್ರಾತ್ಯಕ್ಷಿಕೆ
ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೃತ್ಯ ಪ್ರಾತ್ಯಕ್ಷಿಕೆ ಜರಗಿತು.
ಕೇರಳ ರಾಜ್ಯ ಗ್ರಂಥಾಲಯದ ಕೌನ್ಸಿಲ್ ಸದಸ್ಯ ಇ.ಜನಾರ್ಧನನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೃತ್ಯ, ಸಂಗೀತ ಮೊದಲಾದ ಕಲೆಗಳು ಮನಸ್ಸನ್ನು ಮುದಗೊಳಿಸುತ್ತವೆ. ಇದರಿಂದ ವ್ಯಕ್ತಿತ್ವದ ವಿಕಾಸವಾಗುತ್ತದೆ. ಎಷ್ಟೇ ಸಂಪತ್ತು ಇದ್ದರೂ ಕಲೆಯ ಉಪಾಸಕನಾಗುವುದು ಮಹತ್ತರ ಕಾರ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಪಿ.ಏತಡ್ಕ ಅವರು ಗ್ರಂಥಾಲಯವು ಓದುವಿಕೆಯ ಜೊತೆಗೆ ಉಳಿದ ಕಲೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಈ ಶಾಲೆಯಲ್ಲಿ ನಡೆಯುತ್ತಿರುವ ನೃತ್ಯ ಪ್ರಾತ್ಯಕ್ಷಿಕೆ ಅದಕ್ಕೊಂದು ಉದಾಹರಣೆ ಎಂಬುದಾಗಿ ಅಭಿಪ್ರಾಯಪಟ್ಟರು. ಇನ್ನೋರ್ವ ಮುಖ್ಯ ಅತಿಥಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ ಶರ್ಮ ಕುದಿಂಗಿಲ ನೃತ್ಯದ ಮಹತ್ವವನ್ನು ಸೋದಾಹರಣವಾಗಿ ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ದಸರಾ ನಾಡಹಬ್ಬದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ನಾಟ್ಯ ವಿದ್ಯಾನಿಲಯ ಕುಂಬಳೆಯ ವಿದುಷಿ ವಿದ್ಯಾಲಕ್ಷ್ಮಿ ಅವರು ನೃತ್ಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಶಾಸ್ತ್ರೀಯ ನೃತ್ಯವಾದ ಭರತನಾಟ್ಯದ ಇತಿಹಾಸ, ಪ್ರಸಕ್ತ ಸ್ಥಿತಿ, ಗತಿಗಳನ್ನು ವಿವರಿಸಿದರು. ಅವರ ಶಿಷ್ಯೆಯರಾದ ಶ್ರುತಿ ಕುಂಬಳೆ, ಧನ್ಯಾ ಕುಂಟಿಕಾನ, ಅಶ್ವಿನಿ ನೀಚರ್ಾಲು ನೃತ್ಯವನ್ನು ಪ್ರಸ್ತುತಪಡಿಸಿದರು. ಕಲಾವಿದೆಯರನ್ನು ಗೌರವಿಸಲಾಯಿತು.
ಇತ್ತೀಚೆಗೆ ವಿದ್ಯುದಾಘಾತದಿಂದ ಸಾವಿಗೀಡಾದ ಏತಡ್ಕ ಶಾಲೆಯ ಒಂದನೇ ತರಗತಿ ವಿದ್ಯಾಥರ್ಿನಿ ಅಪರ್ಿತಾಳ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು. ಅನೂಷಾನಾಥ್ ಮತ್ತು ನಿಕ್ಷಿತಾ ಪ್ರಾರ್ಥನೆ ಗೀತೆ ಹಾಡಿದರು. ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಸ್ವಾಗತಿಸಿ, ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ.ವೇಣುಗೋಪಾಲ್ ಕಳೆಯತ್ತೋಡಿ ವಂದಿಸಿದರು.