ನಿಧಿಯಿದೆಯೆಂಬ ಗಾಸಿಪ್-ಪೋಲೀಸರಿಗೆ ಸುಸ್ತು
ಕಾಸರಗೋಡು: ಪ್ರಸಿದ್ದ ಪ್ರವಾಸೀ ಕೇಂದ್ರ ಬೇಕಲಕೋಟೆಯ ಸಮೀಪ ನಿಧಿ ಸಿಕ್ಕಿದೆಯೆಂಬ ಊಹಾಪೋಪಗಳ ಮಧ್ಯೆ ಈ ಸಂಬಂಧ ಪೋಲೀಸ್ ಅಧಿಕೃತರು ಉತ್ತರಿಸಿ ಸುಸ್ತಾದ ಘಟನೆ ಕುತೂಹಲಕ್ಕೆ ಕಾರಣವಾಗಿದೆ.
ಗುರುವಾರ ರಾಜ್ಯ ವ್ಯಾಪಕವಾಗಿ ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ನಡೆದ ಹರತಾಳದ ಮರೆಯಲ್ಲಿ ಕುಹಕಿಗಳು ಸುಳ್ಳು ಸುದ್ದಿ ಹಬ್ಬಿಸಿ ವ್ಯಾಪಕ ಗೊಂದಲಕ್ಕೆ ಕಾರಣವಾಯಿತು. ಹರತಾಳ ನಿರ್ವಹಣೆಯ ಮಧ್ಯೆ ಪೋಲೀಸರು ಕೋಟೆಯ ಪಕ್ಕ ನಿಧಿಯನ್ನು ಅಕ್ರಮವಾಗಿ ವಶಪಡಿಸುವವರನ್ನು ಗುರುತಿಸಿ ಬಂಧಿಸಿರುವರೆಂಬ ವದಂತಿಯ ತರುವಾಯ ಗುರುವಾರ ಬೇಕಲ ಠಾಣೆಗೆ ಸಾವಿರಕ್ಕಿಂತಲೂ ಮಿಕ್ಕ ಪೋನ್ ಕರೆಗಳು ಬಂದು ರೋಸಿಹೋದ ಘಟನೆ ನಡೆದಿತ್ತು. ಕುತೂಹಲಿಗಳಾದವರ ಸಾವಿರಕ್ಕಿಂತಲೂ ಪೋನ್ ಕರೆಗಳು ಬಂದಿವೆ. ಆದರೆ ಅಂತಹ ಯಾವ ಘಟನೆಯೂ ನಡೆದಿಲ್ಲ ಎಂದು ಠಾಣಾಧಿಕಾರಿ ಕೆ.ವಿ.ವಿನೋದ್ ಕುಮಾರ್ ತಿಳಿಸಿದ್ದಾರೆ. ನೂರಾರು ವಾಟ್ಸಫ್ ಗುಂಪುಗಳಲ್ಲಿ ನಿಧಿ ಲಭಿಸಿದವರ ಬಂಧನದ ವದಂತಿ ಹಬ್ಬಿತ್ತು.