ಹಿಂದೂ ಸಮಾಜೋತ್ಸವ-ಸ್ವಾಗತ ಸಮಿತಿ ರೂಪೀಕರಣ ಸಭೆ
ಕಾಸರಗೋಡು : ಸವಾಲು ಮತ್ತು ನಂಬಿಕೆಗಳಿಗೆ ಘಾಸಿಗೊಳಗಾಗುವ ಹಿಂದೂ ಸಮಾಜದ ಪರಂಪರೆ, ಸಾಂಸ್ಕೃತಿಕತೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತ ಚಟುವಟಿಕೆಗಳ ಅಗತ್ಯ ಇಂದಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ಹೆಚ್ಚು ಪರಿಣಾಮಕಾರಿಯಾಗಿ ಬಡಿದೆಬ್ಬಿಸುವಲ್ಲಿ ಸಫಲವಾಗುತ್ತದೆ ಎಂದು ಬ್ರಹ್ಮಶ್ರೀ ವಿಷ್ಣು ಅಸ್ರ ಉಳಿಯ ಹೇಳಿದರು.
ಅವರು ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ 'ಹಿಂದೂ ಸಮಾಜೋತ್ಸವ'ದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೊಸ ತಲೆಮಾರಿಗೆ ಆಧ್ಯಾತ್ಮಿಕ, ಧಾಮರ್ಿಕ, ಸಾಮಾಜಿಕ, ಸಾಂಸ್ಕೃತಿಕತೆಗಳ ತಿಳುವಳಿಕೆ ಮೂಡಿಸುವ ವ್ಯವಸ್ಥೆಗಳು ಇಂದು ಇಲ್ಲವಾಗಿದೆ. ಅರಿವಿನ ಕೊರತೆಯು ಅಧಃಪತನಕ್ಕೆ ಕಾರಣವಾಗುವುದರಿಂದ ಜಾಗೃತಿ ಮೂಡಿಸುವ ಹಿಂದೂ ಸಮಾಜೋತ್ಸವಗಳು ನಿರಂತರ ನಡೆಯುತ್ತಿರಬೇಕು ಎಂದು ಅವರು ತಿಳಿಸಿದರು. ಧರ್ಮದ ಮೇಲಿನ ಪ್ರಹಾರಗಳು ಸಮಷ್ಠಿಯಲ್ಲಿ ವಿಘಟನೆಗಳಿಗೆ ಕಾರಣವಾಗುತ್ತವೆ. ಹಲವು ಹತ್ತು ವಿಚಾರಧಾರೆಗಳ ಹಿಂದೂ ಧರ್ಮದ ತಾತ್ವಿಕ ನೆಲೆಗಟ್ಟುಗಳನ್ನು ಒಮ್ಮತದಲ್ಲಿ ಕಟ್ಟಿಬೆಳೆಸುವ ಇಂದಿನ ವ್ಯವಸ್ಥೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾದ ಅನಿವಾರ್ಯತೆಯಿದ್ದು, ಒಗ್ಗಟ್ಟು ಮಾತ್ರ ಸವಾಲುಗಳನ್ನು ಗೆಲ್ಲುವ ಶಕ್ತಿ ನೀಡುವುದೆಂದು ಅವರು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲಭಾರತ ಕುಟುಂಬ ಪ್ರಬೋಧನ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದಿಕ್ಸೂಚಿ ಭಾಷಣಗೈದು "ಕಲಿಯುಗದಲ್ಲಿ ಸಂಘೇ ಶಕ್ತಿ ಕಲೌಯುಗೇ" ಎಂಬಂತೆ ಎಲ್ಲಾ ಸಮಸ್ಯೆಗಳಿಗೆ ಸಜ್ಜನ ಶಕ್ತಿಯ ಸಂಘಟನೆಯೇ ಪರಿಹಾರವಾಗಿದೆ. ಸಮಸ್ತ ಹಿಂದೂ ಬಾಂಧವರೂ ಸಮಾಜೋತ್ಸವದಲ್ಲಿ ಭಾಗವಹಿಸಿವಂತೆ ಸಮಿತಿಯು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲಚೆಟ್ಟಿಯಾರ್ ನಿರ್ವಹಿಸಿ ಸಮಿತಿಯ ರೂಪೀಕರಣವನ್ನು ಘೋಷಿಸಿದರು. ಆರ್.ಎಸ್.ಎಸ್ ಕಣ್ಣೂರು ವಿಭಾಗ ಸಹಕಾರ್ಯವಾಹ ತಂಬಾನ್, ಆರ್.ಎಸ್.ಎಸ್ ಮಂಗಳೂರು ವಿಭಾಗ ಕಾರ್ಯವಾಹ ನಾ.ಸೀತಾರಾಮ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ.ಎನ್ ಕೃಷ್ಣಭಟ್, ಮಾತೃ ಮಂಡಳಿಯ ಪುಷ್ಪಾ ಅಮೆಕ್ಕಳ, ಮೀರಾ ಆಳ್ವ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಆರ್.ಎಸ್.ಎಸ್ ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ ಚೆಟ್ಟಿಯಾರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಆರ್.ಎಸ್.ಎಸ್ ಜಿಲ್ಲಾ ಕಾರ್ಯವಾಹ್ ಲೊಕೇಶ ಜೋಡುಕಲ್ಲು ಸ್ವಾಗತಿಸಿ, ಆರ್.ಎಸ್.ಎಸ್ ಜಿಲ್ಲಾ ಸಂಪರ್ಕ ಪ್ರಮುಖ್ ತಿಮ್ಮಪ್ಪ ಮೀಯಪದವು ವಂದಿಸಿದರು.
ಎಂದು-ಯಾವಾಗ:
ಡಿಸೆಂಬರ್. 16ರಂದು ಕಾಸರಗೋಡಿನಲ್ಲಿ ಜರಗಲಿರುವ ಐತಿಹಾಸಿಕ ಹಿಂದೂ ಸಮಾಜೋತ್ಸವ ಸಮಿತಿಯ ಗೌರವ ಮಾರ್ಗದರ್ಶಕರಾಗಿ ಜಿಲ್ಲೆಯ ಮಠಾಧೀಶರು ಹಾಗೂ ತಂತ್ರಿವರ್ಯರನ್ನೊಳಗೊಂಡ ಮಂಡಳಿ, ಅಧ್ಯಕ್ಷರಾಗಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ ಶಶಿಧರ, ಹಿಂದೂ ಸಮಾಜೋತ್ಸವ ಸಮಿತಿಯ ಸಂಯೋಜಕರಾಗಿ ಬಿ ಗೋಪಾಲ ಚೆಟ್ಟಿಯಾರ್, ಪ್ರಧಾನ ಕಾರ್ಯದಶರ್ಿಗಳಾಗಿ ಅಶೋಕ ಬಾಡೂರು, ಕೋಶಾಧಿಕಾರಿಗಳಾಗಿ ಐತ್ತಪ್ಪ ಮವ್ವಾರು, ಉಪಾಧ್ಯಕ್ಷರುಗಳು, ಕಾರ್ಯದಶರ್ಿ, ಮತ್ತು 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಆಯ್ಕೆಮಾಡಲಾಯಿತು.