HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಇಂದು ಉದಯಗಿರಿಯಲ್ಲಿ ಚಿಣ್ಣರ ಕಲರವ-ದಸರಾ ನಾಡಹಬ್ಬ
        ಬದಿಯಡ್ಕ: ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಚಿಣ್ಣರ ಕಲರವದ ಎರಡನೇ ಕಾರ್ಯಕ್ರಮ ದಸರಾ ನಾಡಹಬ್ಬ ಆಚರಣೆ ಹಾಗೂ ಮಕ್ಕಳ ಕವಿಗೋಷ್ಠಿ ಅ.20 ರಂದು ಶನಿವಾರ ಬೆಳಿಗ್ಗೆ 10 ರಿಂದ ಉದಯಗಿರಿ ಅನುದಾನಿತ ಶಾಲೆಯಲ್ಲಿ ನಡೆಯಲಿದೆ.
    ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಭೆ ಚೇತನ್ ಯಾದವ್ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಸಿರಿಯ ಪ್ರಧಾನ ಕಾರ್ಯದಶರ್ಿ, ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪೆರಡಾಲ ಶ್ರೀಉದನೇಶ್ವರ ದೇವಸ್ಥಾನದ ಮೊಕ್ತೇಸರ ಜಗನ್ನಾಥ ರೈ, ಜಾನಪದ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ, ಕವಿ ಸುಭಾಶ್ ಪೆರ್ಲ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನಾರಾಯಣ ನೆಟ್ಟಣಿಗೆ, ಜನಜಾಗೃತಿ ವೇದಿಕೆ ಸದಸ್ಯ ರವಿಕಾಂತ ಕೇಸರಿ ಕಡಾರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ, ಶಾಲಾ ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ಸಂಧ್ಯಾಗೀತಾ ಬಾಯಾರು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು. ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಚಿಣ್ಣರ ಕಲರವದ ಬಗ್ಗೆ ಮಾಹಿತಿ ನಿಡುವರು. ಬಳಿಕ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿದೆ ಎಮದು ಅಕಾಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries