HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಹೀಗೂ ಆಯ್ತು: ಪತ್ನಿಯ ಕಿರುಕುಳ ತಾಳಲಾರದ ಪತಿಯಂದಿರಿಂದ ಶೂರ್ಪನಖಿ ಪ್ರತಿಕೃತಿ ದಹನ
    ಔರಂಗಾಬಾದ್: ದಸರಾ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ದಹಿಸುವುದು ಉತ್ತರ ಭಾರತದಲ್ಲಿನ ಸಂಪ್ರದಾಯ. ಆದರೆ ಈ ಊರಿನ ಪುರುಷರು ತಮಗೆ ಪತ್ನಿಯಂದಿರಿಂದ ಆಗುತ್ತಿರುವ ಕಿರುಕುಳದ ಸಂಕೇತವಾಗಿ ರಾವಣನ ಸೋದರಿ ಶೂರ್ಪನಖಿಯ ಪ್ರತಿಕೃತಿಯನ್ನು ದಹಿಸಿ ತಮ್ಮ ಕೋಪ ತೀರಿಸಿಕೊಳ್ಳುತ್ತಾರೆ.
    ಪತ್ನಿಯಿಂದ ಕಿರುಕುಳ, ನೋವು ಅನುಭವಿಸುತ್ತಿರುವ ಪುರುಷರು ಪತ್ನಿ ಪೀಡಿತ ಪುರುಷ ಸಂಘಟನೆ ಮಾಡಿಕೊಂಡಿದ್ದು ಇವರು ಗುರುವಾರ ರಾತ್ರಿ ಮಹಾರಾಷ್ಟ್ರದ ಔರಂಗಾಬಾದ್ ಸಮೀಪ ಕರೋಲಿ ಎಂಬ ಗ್ರಾಮದಲ್ಲಿ ಶೂರ್ಪನಖಿಯ ಪ್ರತಿಕೃತಿಯನ್ನು ದಹಿಸಿದ್ದಾರೆ.
    ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂಘಟನೆ ಸ್ಥಾಪಕ ಭರತ್ ಪುಲರೆ, ಭಾರತದಲ್ಲಿರುವ ಎಲ್ಲಾ ಕಾನೂನುಗಳು ಪುರುಷರಿಗೆ ವಿರುದ್ಧವಾಗಿ ಮತ್ತು ಮಹಿಳೆಯರ ಪರವಾಗಿರುತ್ತದೆ. ಇದನ್ನು ಸಣ್ಣಪುಟ್ಟ ಕಾರಣಗಳಿಗಾಗಿ ದುರುಪಯೋಗಪಡಿಸಿಕೊಂಡು ಮಹಿಳೆಯರು ಪತಿಯರು ಮತ್ತು ಅತ್ತೆಯಂದಿರಿಗೆ ಕಿರುಕುಳ ನೀಡುತ್ತಾರೆ ಎಂದರು.
ದೇಶದಲ್ಲಿ ಪುರುಷರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ಇದಕ್ಕೆ ಸಾಂಕೇತಿಕವಾಗಿ ನಮ್ಮ ಸಂಘಟನೆ ದಸರಾದ ಕೊನೆ ರಾವಣನ ಪ್ರತಿಕ್ರಿತಿ ಬದಲಿಗೆ ಶೂರ್ಪನಖಿಯ ಪ್ರತಿಕ್ರಿತಿಯನ್ನು ದಹಿಸಿದೆ ಎಂದು ಹೇಳಿದರು.
   ಹಿಂದೂ ಪುರಾಣದ ಪ್ರಕಾರ, ರಾಮ, ರಾವಣರ ಯುದ್ಧ ನಡೆಯಲು ಮೂಲ ಕಾರಣ ಶೂರ್ಪನಖಿ. ಶೂರ್ಪನಖಿಗೆ ಆದ ಅವಮಾನವನ್ನು ತೀರಿಸಲು ರಾವಣ ಸನ್ಯಾಸಿನಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ ಇದು ಕೊನೆಗೆ ರಾಮಾಯಣದಲ್ಲಿ ಯುದ್ಧಕ್ಕೆ ಕಾರಣವಾಗುತ್ತದೆ.
2015ರ ದಾಖಲೆಗಳ ಪ್ರಕಾರ, ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವದರಲ್ಲಿ ಶೇಕಡಾ 74ರಷ್ಟು ಪುರುಷರು ಎನ್ನುತ್ತಾರೆ ಪುಲರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries