ಕೂಡ್ಲು ಮಾರಿಗುಡಿಯಲ್ಲಿ ಕಾಸರಗೋಡು ದಸರಾ, ಅಗ್ನಿಸೇವೆ, ಬಟ್ಟಲು ಸೇವೆ
ಕಾಸರಗೋಡು: ಕೂಡ್ಲು ಮಾರಿಗುಡಿ ಎಂದೇ ಪ್ರಸಿದ್ಧವಾದ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದಂಗವಾಗಿ ಅ.14 ರಂದು ಭಾನುವಾರ ಅಗ್ನಿಸೇವೆ ನಡೆಯಲಿದೆ.
ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ 12 ರಿಂದ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ದಸರಾ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ದೇವಸ್ಥಾನದ ಪಾತ್ರಿ ಕೆ.ಮೋಹನ ಕುಂಬ್ಳೆ ಅವರು ಉದ್ಘಾಟಿಸುವರು. ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ಲೀಲಾಧರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಖ್ಯಾತ ಸಂಗೀತ ಕಲಾವಿದ ಬಿ.ಪಿ.ಗೋಪಾಲಕೃಷ್ಣ ಬೆಂಗಳೂರು ಭಾಗವಹಿಸುವರು. ಕೆ.ಉದಯ ಕುಮಾರ್, ಕೆ.ಜಗದೀಶ್ ಕೂಡ್ಲು, ಪ್ರಕಾಶ್ ಮೂಡಬಿದ್ರೆ, ಕೆ.ಮನ್ಮಥ ಕೂಡ್ಲು ಮೊದಲಾದವರು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬಿ.ಪಿ.ಗೋಪಾಲಕೃಷ್ಣ ಬೆಂಗಳೂರು ಅವರಿಂದ ಗಾನ ಸೌರಭ ಹಾಗೂ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ.
ಅ.15 ರಂದು ಸೋಮವಾರ ಬೆಳಗ್ಗೆ 8 ಕ್ಕೆ ಬಟ್ಟಲು ಮೆರವಣಿಗೆ ಹೊರಟು ಕಾಸರಗೋಡು ನಗರ ಪ್ರದಕ್ಷಿಣೆಯೊಂದಿಗೆ ಮಧ್ಯಾಹ್ನ ಶ್ರೀ ಕ್ಷೇತ್ರಕ್ಕೆ ನಿರ್ಗಮಿಸಲಿದೆ. ಸಂಜೆ 6 ಗಂಟೆಗೆ ಬಟ್ಟಲು ಏರಿಸುವ ಪೂಜೆ, 8 ರಿಂದ ಭಜನೆ, 9 ರಿಂದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಅವರಿಂದ ಯಕ್ಷಗಾನ ಕೂಟ, ರಾತ್ರಿ 12 ಗಂಟೆಗೆ ಮಹಾಪೂಜೆ, ಪ್ರಾತ:ಕಾಲ 3 ಗಂಟೆಗೆ ಶ್ರೀ ದೇವಿಯ ಮಂಗಳ ಸ್ನಾನ ನಡೆಯಲಿದೆ.