HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಉಮೇಶ್ ಎಂ.ಸಾಲಿಯಾನ್ ನೇಮಕ
    ಕಾಸರಗೋಡು: ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಉಮೇಶ್ ಎಂ.ಸಾಲಿಯಾನ್ ಅವರನ್ನು ಸರಕಾರ ನೇಮಿಸಿದೆ. ಈ ಬಗ್ಗೆ ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
    2007 ರಲ್ಲಿ ವಿ.ಎಸ್.ಅಚ್ಯುತಾನಂದನ್ ಸರಕಾರದ ಕಾಲಘಟ್ಟದಲ್ಲಿ ಮಂಜೇಶ್ವರ ಕೇಂದ್ರವಾಗಿ ಕೇರಳ ತುಳು ಅಕಾಡೆಮಿಯನ್ನು ಸ್ಥಾಪಿಸಲಾಗಿತ್ತು. ತುಳು ಸಂಶೋಧಕ ಡಾ.ವೆಂಕಟರಾಜ ಪುಣಿಂಚಿತ್ತಾಯ ಅಂದು ಮೊದಲ ಅಧ್ಯಕ್ಷರಾಗಿದ್ದರು. ಬಳಿಕ ನ್ಯಾಯವಾದಿ ಸುಬ್ಬಯ್ಯ ರೈ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಮೂರನೇ ಅವಧಿಯಲ್ಲಿ ಚಿತ್ರಕಲಾವಿದ ಪಿ.ಎಸ್.ಪುಣಿಚಿತ್ತಾಯರು ಆಯ್ಕೆಯಾಗಿದ್ದರೂ, ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಇದೀಗ ಮತ್ತೆ ಹೊಸ ನೇಮಕಾತಿಯ ಆದೇಶ ನೀಡಲಾಗಿದೆ.
    ಈ ಹಿಂದಿನ ಸಮಿತಿಯಲ್ಲಿ  ಉಮೇಶ್ ಸಾಲಿಯಾನ್ ಸದಸ್ಯರಾಗಿದ್ದರು. ಅಕಾಡೆಮಿ ಕಾರ್ಯದಶರ್ಿಯಾಗಿ ಶಿಕ್ಷಣ ಇಲಾಖೆಯ ಉದ್ಯೋಗಿಯಾಗಿರುವ ಮಂಜೇಶ್ವರ ವಕರ್ಾಡಿ ಪಾವಳದ ಪಿ.ವಿಜಯ ಕುಮಾರ್ ಅವರನ್ನು ನೇಮಿಸಲಾಗಿದೆ. ಸಂಸದ ಪಿ.ಕರುಣಾಕರನ್, ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಮಾಜಿ ಕಾರ್ಯದಶರ್ಿ ಬಿ.ಬಾಲಕೃಷ್ಣ ಶೆಟ್ಟಿಗಾರ್ ಸಹಿತ ಹಿಂದಿನ ಸಮಿತಿಯ ಎಲ್ಲಾ ಸದಸ್ಯರನ್ನು ನೂತನ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕೋಶಾಧಿಕಾರಿಯಾಗಿದ್ದಾರೆ.
   ಕನರ್ಾಟಕ ಸರಕಾರದ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಉಮೇಶ್ ಸಾಲಿಯಾನ್ ಕನ್ನಡ, ತುಳು ನಾಟಕಗಳಲ್ಲಿ ಅಭಿನಯಿಸಿ, ನಿದರ್ೇಶಿಸಿದ್ದರು. ಕನ್ನಡ, ಮಲಯಾಳ ಸಿನಿಮಾಗಳಲ್ಲಿ, ಟೆಲಿ ಫಿಲಿಂಗಳಲ್ಲಿ ಅಭಿನಯಿಸಿದ್ದಾರೆ. ಅಕಾಡೆಮಿ ಪ್ರಕಟಿಸುತ್ತಿದ್ದ `ತೆಂಬರೆ'ಯ ಸಂಪಾದಕರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries