HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಮರಾಟಿಗರ ಬೇಡಕೆಗಳಿ ಈಡೇರಿಕೆಗೆ ಸರಕಾರ ಬದ್ದ-ಸಚಿವ ಇ.ಚಂದ್ರಶೇಖರನ್
     ಪೆರ್ಲ: ಮರಾಟಿ ಜನಾಂಗದ ಸಂಘಟಿತ ಹೋರಾಟ-ಸಂಘಟಿತ ಪ್ರಯತ್ನಗಳಿಂದ ಹಿಂತೆಗೆಯಲ್ಪಟ್ಟಿದ್ದ ಮೀಸಲಾತಿ ಮತ್ತೆ ಲಭ್ಯವಾಗಲು ಕಾರಣವಾಯಿತು. ಸಂಘಟನೆಯ ಮುಖಂಡರ ಮತ್ತು ಕಾರ್ಯಕರ್ತರ ಅವಿರತ ಯತ್ನಗಳಿಂದ ಜನಾಂಗದ ಪರಂಪರೆ ಬೆಳೆದು ನಿಂತಿರುವುದು ಶ್ಲಾಘನೀಯ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ ಹಾಗೂ ಶ್ರೀಶಾರದಾ ಮರಾಟಿ ಮಹಿಳಾ ವೇದಕೆಯ ಆಶ್ರಯದಲ್ಲಿ  ಶನಿವಾರ ಬಜಕ್ಕೂಡ್ಲು ಶ್ರೀಮಹಾಲಿಂಗೇಶ್ವರ ಕ್ಷೇತ್ರ ಪರಿಸರದಲ್ಲಿ ಆಯೋಜಿಸಲಾದ ಮರಾಟಿ ಬೋಡರ್ಿಂಗ್ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಮರಾಟಿ ಸಮುದಾಯ ಬಹುಸಂಖ್ಯೆಯಲ್ಲಿರುವ ಜಿಲ್ಲೆಯ ಮರಾಟಿ ವಿಭಾಗದ ಸಮಗ್ರ ವಿಕಾಸಕ್ಕೆ ರಾಜ್ಯ ಸರಕಾರ ಸಾಕಷ್ಟು ಅನುದಾನಗಳನ್ನು ವಿತರಿಸುತ್ತಿದೆ. ಸಾಮಾಜಿಕ, ಆಥರ್ಿಕ ಸುದೃಢತೆಯೊಂದಿಗೆ ಸಮಾಜದ ಮುಖ್ಯ ವಾಹಿನಿಯೊಂದಿಗೆ ಇಂದು ಬೆಳೆದುನಿಂತಿರುವ ಸಮಾಜದ ಯುವ ತಲೆಮಾರು ಇನ್ನಷ್ಟು ಬಲಗೊಳ್ಳುವ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಯತ್ನಿಸಲಾಗುವುದೆಂದು ಸಚಿವರು ತಿಳಿಸಿದರು.
   ಮರಾಟಿ ಬೋಡರ್ಿಂಗ್ ನವೀಕರಣ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ನಾಯ್ಕ ಕಯ್ಯಾರು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ, ಎಣ್ಮಕಜೆ ಗ್ರಾ.ಪಂ. ಪ.ವಿಭಾಗ ಅಧಿಕಾರಿ ಧನಲಕ್ಷ್ಮೀ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಕನರ್ಾಟಕ-ಕೇರಳ ಟ್ರೈಬ್ಲ ಮರಾಟಿ ಫೆಡರೇಶನ್ ಸಲಹೆಗಾರ ಕೆ.ಸುಂದರ ನಾಯ್ಕ, ಕೇರಳ ಮರಾಟಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಡಾ.ಬಿ.ಜಿ.ನಾಯ್ಕ, ಎಸ್.ಸುಂದರ ನಾಯ್ಕ, ಬಿ.ಕೆ.ನಾಯ್ಕ ಬಳ್ಳ, ಡಾ.ಜನಾರ್ಧನ ನಾಯ್ಕ, ಚನಿಯಪ್ಪ ನಾಯ್ಕ, ಡಿ.ಪಿ.ಮಜಕ್ಕಾರ್, ವರ ಮಾಸ್ತರ್ ಪೆರಡಾಲ, ಶಾರದಾ ಕೆಜೆಕ್ಕಾರು ಉಪಸ್ಥಿತರಿದ್ದು ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು. ಮರಾಟಿ ಬೋಡರ್ಿಂಗ್ ಸಮಿತಿ ರಕ್ಷಾಧಿಕಾರಿ ಡಾ.ಬಿ.ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟ್ಟ ನಾಯ್ಕ ಪೆರಿಯಾಲ್ಡ್ಕ ಸ್ವಾಗತಿಸಿ, ಆನಂದ ಬಿಡಾರ ವಂದಿಸಿದರು. ನಾರಾಯಣ ನಾಯ್ಕ ಹಾಗೂ ಶಮರ್ಿಳಾ ಬಜಕ್ಳು ಕಾರ್ಯಕ್ರಮ ನಿರೂಪಿಸಿದರು.
   ಕಾರ್ಯಕ್ರಮದ ಅಮಗವಾಗಿ ಬೆಳಿಗ್ಗೆ ಗಣಹೋಮ, ನೂತನ ಬೋಡರ್ಿಂಗ್ ಕಟ್ಟಡ ಪ್ರವೇಶ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಪರಾಹ್ನ ಬೋಡರ್ಿಂಗ್ ಸಭಾಂಗಣದ ಉದ್ಘಾಟೆಯ ಬಳಿಕ ಸಂಜೆ ವಿವಿಧ ಸಾಂಸ್ಕೃತಿಕ ವೈವಿಧ್ಯಗಳು ನಡೆಯಿತು. ರಾತ್ರಿ ಗೀತಸಾಹಿತ್ಯ ಸಂಭ್ರಮ, ಯಕ್ಷಗಾನ ಬಯಲಾಟಗಳು ನಡೆದವು.

      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries