HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ವಾಟ್ಸ್ಪ್ ನಲ್ಲಿ ತ್ಯಾಜ್ಯ ಎಸೆಯುವವರ ಮಾಹಿತಿ 
    ಕಾಸರಗೋಡು: ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ತಂದೆಸೆಯುವ ಮತ್ತು ಉರಿಸುವುದನ್ನು ತಡೆಯಲು ಜಿಲ್ಲೆಯಲ್ಲಿ ಸಂಪೂರ್ಣ ಮಲೀನೀಕರಣ ಮುಕ್ತಗೊಳಿಸಲು ಜಿಲ್ಲಾಕಾರಿ ಕಟ್ಟುನಿಟ್ಟಿನ ಕ್ರಮ ಆರಂಭಿಸಿದ್ದಾರೆ.
    ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ತಂದೆಸೆದಲ್ಲಿ ಅಥವಾ ಉರಿಸುವ ದೃಶ್ಯಗಳು ಸಾರ್ವಜನಿಕರು ವೀಡಿಯೋ ಅಥವಾ ಫೋಟೋ ಸಲ್ಲಿಸಿದ್ದಲ್ಲಿ ಅದರ ಆಧಾರದಲ್ಲಿ ತ್ಯಾಜ್ಯ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರು ವಾಟ್ಸಪ್ಗಳ ಮೂಲಕವೂ ಸಲ್ಲಿಸಬಹುದೆಂದು ಜಿಲ್ಲಾಧಿಕಾರಿ ಡಾ.ಸಜಿತ್ಬಾಬು ತಿಳಿಸಿದ್ದಾರೆ. ಇದರಂತೆ 8547931565 ಎಂಬ ವಾಟ್ಸಪ್ ಮೂಲಕ ಇಂತಹ ಚಿತ್ರ ಮತ್ತು ವೀಡಿಯೋಗಳನ್ನು ಕಳುಹಿಸಿಕೊಡಬಹುದು.
    ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿ ಅದರ ಆಧಾರದಲ್ಲೂ ಕ್ರಮ ಕೈಗೊಳ್ಳಲಾಗುವುದು. ಇದರಂತೆ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದೆಸೆದು ಉರಿಸುವ ದೃಶ್ಯಗಳ  ಫೋಟೋಗಳನ್ನು ನಗರಸಭಾ ಕಾರ್ಯದಶರ್ಿಗೆ ಹಸ್ತಾಂತರಿಸಲಾಗಿದೆ. ಚೆಮ್ನಾಡ್ ಕ್ವಾರ್ಟಸರ್್ ಒಂದರಿಂದ ಮಲೀನ ಜಲವನ್ನು ಸಾರ್ವಜನಿಕ ಪ್ರದೇಶಕ್ಕೆ ಹರಿಯಬಿಟ್ಟ ದೃಶ್ಯವನ್ನು ಚೆಮ್ನಾಡ್ ಪಂಚಾಯತ್ ಕಾರ್ಯದಶರ್ಿಗೆ ನೀಡಲಾಗಿದೆ. ಅದೇ ರೀತಿ ಉಪ್ಪಳ ಪೇಟೆಯಲ್ಲಿ ಖಾಯಂ ಆಗಿ ತ್ಯಾಜ್ಯ ತಂದು ಹಾಕುವ ದೃಶ್ಯಗಳನ್ನು ಅಲ್ಲಿನ ಪಂಚಾಯತ್ ಕಾರ್ಯದಶರ್ಿಗೆ ನೀಡಲಾಗಿದೆ. ಅದಕ್ಕೆ ಹೊಂದಿಕೊಂಡು ತ್ಯಾಜ್ಯಗಳನ್ನು ತಂದು ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದಶರ್ಿಗಳಿಗೆ ಜಿಲ್ಲಾಧಿಕಾರಿ ನಿದರ್ೇಶ ನೀಡಿದ್ದಾರೆ.
    ಇದೇ ರೀತಿ ಹಲವು ಫೋಟೋಗಳು ಮತ್ತು ವೀಡಿಯೋ ಜಿಲ್ಲಾಧಿಕಾರಿಗೆ ಲಭಿಸತೊಡಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ತಂದು ರಾಶಿ ಹಾಕುವ ಮತ್ತು ಮಲೀನ ಜಲವನ್ನು ರಸ್ತೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಹರಿಯಬಿಡುತ್ತಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರು ನೇರವಾಗಿ ಸಂದಶರ್ಿಸಿ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.
   ತ್ಯಾಜ್ಯಗಳನ್ನು ತಂದೆಸೆಯುವವರ ಮತ್ತು ಮಲೀನ ಜಲ ಹರಿಯ ಬಿಡುವ ವೀಡಿಯೋ ಮತ್ತು ಅಂತಹ ಕೃತ್ಯ ಎಸಗುವವರ ಬಗ್ಗೆಯೂ ಸಾರ್ವಜನಿಕರು ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡುವವರಿಗೆ ವಿಶೇಷ ಪಾರಿತೋಷಕಗಳನ್ನು ನೀಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  ಹೀಗೆ ವಾಟ್ಸಪ್ ಮೂಲಕ ಮಾಹಿತಿ ನೀಡುವ ವ್ಯಕ್ತಗಳ ಹೆಸರು ಬಹಿರಂಗಪಡಿಸದೆ ಗುಪ್ತವಾಗಿರಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries