ಸ್ತಬ್ದಗೊಂಡ ಹೆದ್ದಾರಿ- ಹಿಂದೂ ನಂಬಿಕೆಗಳಿಗೆ ಅವಮಾನ ಖಂಡನೀಯ- ಅಂಗಾರ ಶ್ರೀಪಾದ
ಉಪ್ಪಳ: ಅತ್ಯಂತ ಪವಿತ್ರ ಆಚರಣೆಗಳ ಮೂಲಕ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕ್ಷೇತ್ರದ ಆಚಾರ ಅನುಷ್ಠಾನಗಳನ್ನು ಉಳಿಸಿಕೊಂಡು ಬಂದಿರುವ ಶಬರಿಮಲೆ ಕ್ಷೇತ್ರಕ್ಕೆ ಏಕಾಏಕಿ ನಂಬಿಕೆಗಳಿಗೇ ಹಾನಿಯನ್ನುಂಟು ಮಾಡುವ ತೀರ್ಪನ್ನು ವಿಧಿಸಿರುವುದು ಖಂಡನೀಯ. ರಾಜ್ಯ ಸರಕಾರ ಪರಮೋಚ್ಚ ನ್ಯಾಯಾಲಯದ ತೀಪರ್ಿಗೆ ಮರುಶೀಲನಾ ಅಜರ್ಿ ಸಲ್ಲಿಸಿ ಮುಂದಿನ ತೀಪರ್ು ಬರುವವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ ತಿಳಿಸಿದರು.
ಶಬರಿಮಲೆ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಹಿಂದೂ ವಿರೋಧಿ ಕ್ರಮದ ವಿರುದ್ಧ ಶಬರಿಮಲೆ ಕ್ರಿಯಾ(ಕರ್ಮಸಮಿತಿ) ಸಮಿತಿ ಮಂಜೇಶ್ವರ ತಾಲೂಕು ನೇತೃತ್ವದಲ್ಲಿ ಸಂಘ ಪರಿವಾರ ಸಹಿತ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದೊಂದಿಗೆ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯನ್ನು ಉಪ್ಪಳದಲ್ಲಿ ಉದ್ಘಾಟಿಸಿ ಅವರು ಮಾತನಡಿದರು.
ಕೇರಳ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸಂಚಾಲಕ ವಿಜಯ್ಕುಮಾರ್ ರೈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದೂ ಧಾಮರ್ಿಕ ವಿಚಾರಗಳ, ಸಂಪ್ರದಾಯ ಪರಂಪರೆಗಳಿಗೆ ಅದರದೇ ಆದ ಐತಿಹ್ಯವಿದೆ. ಪಾರಂಪರಿಕ ರಿವಾಜುಗಳಿವೆ. ಅವುಗಳಲ್ಲಿ ನ್ಯಾಯಾಲಯವಾಗಲಿ, ಸರಕಾರಗಳಾಗಲಿ ಮೂಗು ತೂರಿಸುವ ಅಗತ್ಯವಿಲ್ಲ.ರಾಷ್ಟ್ರದ ಲಕ್ಷಗಟ್ಟಲೆ ದೇವಾಲಯಗಳಿಗೆ ಅವುಗಳದ್ದೇ ಆದ ಅನುಷ್ಠಾನಗಳಿವೆ. ಶಬರಿಮಲೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತೀಮರ್ಾನಗಳನ್ನು ಅದರ ರಾಜಮನೆತನಗಳಿಗೆ ಸೇರಿದ ಜನರು ಹಾಗೂ ಅಲ್ಲಿನ ಧಾಮರ್ಿಕ ಸಮಿತಿಗೆ ಮಾತ್ರ ತೆಗೆದುಕೊಳ್ಳಲು ಅವಕಾಶವಿರುವುದು. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಸ್ತ್ರೀ ಪ್ರವೇಶ ಮಾಡಕೂಡದು ಎಂಬ ನಿಯಮವನ್ನು ಮಾಡಿಲ್ಲ. ವಯಸ್ಸಿನ ಪರಿಮಿತಿಯೊಳಗೆ ಹೋಗುಲು ಅವಕಾಶವಿದೆ. ಇದು ಅಲ್ಲಿನ ನಿಷ್ಠೆಯ ಆಚಾರ ವಿಚಾರಗಳಿಗೆ ಸಂಬಂಧಪಟ್ಟದ್ದು. ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿಯನ್ನು ತ್ಯಜಿಸಿ ತೀಪರ್ಿನ ಮರು ಪರಿಶೀಲನಾ ಅಜರ್ಿಯನ್ನು ಶೀಘ್ರ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಉಪ್ಪಳ ಅಯ್ಯಪ್ಪ ಮಂದಿರದ ಗುರುಸ್ವಾಮಿ ಕುಟ್ಟಿಕೃಷ್ಣನ್, ಮಾತೃಮಂಡಳಿ ಜಿಲ್ಲಾಧ್ಯಕ್ಷೆ ಮೀರಾ ಆಳ್ವ,ಜಯಂತಿ.ಟಿ.ಶೆಟ್ಟಿ, ಎ.ಕೆ.ಕಯ್ಯಾರ್ ಉಪಸ್ಥಿತರಿದ್ದರು. ಪ್ರತಿಭಟನೆಯ ಮೊದಲು ಉಪ್ಪಳ ಪ್ರಧಾನ ಅಂಚೆಕಛೇರಿ ಪರಿಸರದಲ್ಲಿ ಶ್ರೀಧರ್ಮಶಾಸ್ತಾ ಭಾವಚಿತ್ರಕ್ಕೆ ಹಣ್ಣುಗಾಯಿ ಸಮಪರ್ಿಸಿ ಚಾಲನೆ ನೀಡಲಾಯಿತು. ಬಳಿಕ ಬಸ್ಸು ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಕ್ಕಿಂತಲೂ ಮಿಕ್ಕಿದ ಮಾತೆಯರು, ಭಕ್ತರು ಪಾಲ್ಗೊಂಡರು.
ಸಂಘರ್ಷ ಸೃಷ್ಟಿಗೆ ಹುನ್ನಾರ:
ಹೆದ್ದಾರಿ ತಡೆ ಪ್ರತಿಭಟನೆ ಆರಂಭಗೊಳ್ಳುತ್ತಿರುವಂತೆ ಕೆಲವರು ಪ್ರತಿಭಟನೆಯನ್ನು ಅಲ್ಲೋಲಕಲ್ಲೋಲಗೊಳಿಸಲು ಯತ್ನಿಸಿದ ಘಟನೆ ನಡೆಯಿತು. ರಸ್ತೆ ತಡೆ ಆರಂಭವಾಗುತ್ತಿದ್ದಂತೆ ಅನವಶ್ಯಕವಾಗಿ ಪ್ರತಿಭಟನಾ ನಿರತರ ಮೇಲೆ ವಾಹನ ಕೊಂಡೊಯ್ಯಲು ಯತ್ನಿಸಿರುವುದು ಅಲ್ಪಹೊತ್ತು ಸಂಘರ್ಷದ ವಾತಾವರಣ ಸೃಷ್ಟಿಗೆ ಕಾರಣವಾಯಿತು.ಪೋಲೀಸರು ತಲಪಿ ಪರಿಸ್ಥಿತಿ ತಿಳಿಗೊಳಿಸಿದರು.
ಮೊಳಗಿದ ಸ್ವಾಮಿಯೇ ಶರಣಂ ಅಯ್ಯಪ್ಪ:
ಇತರ ಪ್ರತಿಭಟನೆಗಿಂತ ವಿಭಿನ್ನವಾಗಿ ಮೂಡಿಬಂದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷ ವಾಕ್ಯ ಮಾತ್ರ ಕೇಳಿಬರುವುದರೊಂದಿಗೆ ಆಧ್ಯಾತ್ಮಿಕತೆಯ ಅಲೆಯೆದ್ದು ಪುಳಕಗೊಳಿಸಿದ್ದು ಗಮನಾರ್ಹವಾಯಿತು.