HEALTH TIPS

No title

                   ಕೊಂಡೆವೂರುನ ವಿಶ್ವಜಿತ್ ಅತಿರಾತ್ರ ಸೋಮಯಾಗದ ಮುಂಬಯಿ ಸಭೆ
                  ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿ ಸಾಧ್ಯ  : ಮಾಣಿಲಶ್ರೀ
      ಮುಂಬಯಿ: ಸಮಾಜ ಕಲ್ಯಾಣದ ಸಂಕಲ್ಪ ಹೊಂದಿದ ಸಾಧುಸಂತರು ಧರ್ಮಭೂಮಿಯ ಕರ್ಮ ತೀರಿಸಲು ತಮ್ಮಲ್ಲಿನ ಅಧ್ಯಾತ್ಮಿಕ ಮನಸ್ಸುಗಳನ್ನು  ಶುದ್ಧೀಕರಿಸಿ ಜನಕಲ್ಯಾಣ ಮಾಡಬೇಕೆನ್ನುವ ಉದ್ದೇಶವಿರಿಸಿದ್ದೇವೆ. ಸಂತರು ಭಾವೈಕ್ಯದ ಹರಿಕಾರರು ಆಗಿದ್ದು ಅವರ ಅನುಗ್ರಹದಿಂದ ಅಧ್ಯಾತ್ಮದ ಒಲವನ್ನು ಹೊಂದಿದಾಗಲೇ ವೈಚಾರಿಕ ಪ್ರಜ್ಞೆಯ ಜಾಗೃತಿ ಮೂಡುವುದು. ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿಯಾಗುವುದು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
    ಭಾನುವಾರ ಸಂಜೆ ಮುಂಬಯಿ ಉಪನಗರ ಮುಲುಂಡ್ ಶಿವಾಜಿ ನಗರದಲ್ಲಿನ ನವೋದಯ ಕನ್ನಡ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತಾ ಮುಂಬಯಿ ಸಭೆ ಉದ್ಘಾಟಿಸಿ ಶ್ರೀ ಮೋಹನದಾಸ ಸ್ವಾಮೀಜಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
  ನನ್ನ ಶಿಷ್ಯರಾಗಿದ್ದ ಕೊಂಡೆಯೂರು ಶ್ರೀಗಳಿಗೆ ದೀಕ್ಷೆಯನ್ನಿತ್ತಾಗಲೇ ಅವರಲ್ಲಿ ಭಕ್ತಿಮಾರ್ಗದಿಂದ ಸಮಜೋದ್ಧಾರ ನಡೆಸುವ ಶಕ್ತಿ ಕಂಡಿದ್ದೆ. ಆದುದರಿಂದ ಅವರ ಆಶಯದ ಯಾಗದ ಮಹತ್ವವನ್ನು ನಾವೆಲ್ಲರೂ ತಿಳಿದು ಅವರೊಡನೆ ಒಗ್ಗೂಡಿ ಸಮಾಜ ಕಲ್ಯಾಣದ ಸಂಕಲ್ಪವನ್ನು ಈಡೇರಿಸ ಬೇಕು. ಆ ಮೂಲಕ ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ಬೆಳಗಿಸೋಣ ಎಂದರು.
    2019ರ ಫೆ.18ರಿಂದ 24ರ ತನಕ ಉಪ್ಪಳ ಸಮೀಪದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿರುವ `ವಿಶ್ವಜಿತ್ ಅತಿರಾತ್ರ ಸೋಮಯಾಗ'ದ ಬಗ್ಗೆ ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಂಕ್ಷೀಪ್ತ ಮಾಹಿತಿ ನೀಡಿ. ಭಕ್ತಿಯಿಂದ ಬಂದ ಪ್ರತಿಯೊಬ್ಬ ಭಕ್ತರ ಮನೋಭಿಷ್ಠಗಳನ್ನು ಈಡೇರಿಸುವುದು ಸನ್ಯಾಸಿಗಳ ಧರ್ಮವಾಗಿದೆ. ಸಜ್ಜನರ ಸ್ನೇಹಿಗಳಾಗಿ ಜೀವನ್ನುದ್ದಕ್ಕೂ ಭಕ್ತೋದ್ಧಾರದ ಕಾರ್ಯ ನೆರವೇರಿಸಿ ಜೀವನ ಪಾವನಗೊಳಿಸಲು ಇಂತಹ ಧಾಮರ್ಿಕ ಸೇವೆಗಳು ಅಗತ್ಯವಾಗಿವೆ. ಆದ್ದರಿಂದ ಸೋಮಯಾಗದಲ್ಲಿ ಭಾಗಿಗಳಾಗಿ ಪುಣ್ಯಕ್ಕೆ ಪಾತ್ರರಾಗಿರಿ ಎಂದು ಕರೆಯಿತ್ತರು.
   ವೇದಿಕೆಯಲ್ಲಿ ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿ ಕಾಯರ್ಾಧ್ಯಕ್ಷ ಜಯ ಕೆ. ಶೆಟ್ಟಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಗಣೇಶ್ಪುರಿ ಟ್ರಸ್ಟೀ ನ್ಯಾಯವಾದಿ ಸಂಧ್ಯಾ ಜಾಧವ್, ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮುಂಬಯಿ ಸಮಿತಿ ಮಾಜಿ ಅಧ್ಯಕ್ಷ  ಧರ್ಮಪಾಲ ಯು.ದೇವಾಡಿಗ, ಕೃಷ್ಣ ಎನ್.ಉಚ್ಚಿಲ್, ಮಾಜಿ ಗೌರವಾಧ್ಯಕ್ಷ ರೋಹಿದಾಸ್ ಆರ್.ಬಂಗೇರಾ, ಕನರ್ಾಟಕ ಸರಕಾರದ ಮಾಜಿ ವಿಧಾನ ಪರಿಷತ್ತು ಸದಸ್ಯ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಕೇಂದ್ರ ಸಮಿತಿ ಕಾಯರ್ಾಧ್ಯಕ್ಷ ಮೋನಪ್ಪ ಎಂ.ಭಂಡಾರಿ, ಯಶೋಧಾ ಬೆಟ್ಟಂಪಾಡಿ, ಸಂದೀಪ್ ಶೆಟ್ಟಿ, ಸದಾನಂದ ನಾವರ, ಜಯರಾಮ್ ಪೂಜಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
   ಮುಂಬಯಿ ಸಮಿತಿಯ ಅಶೋಕ್ ಎಂ.ಕೋಟ್ಯಾನ್ ಥಾಣೆ, ಎಸ್.ಕೆ ಶ್ರೀಯಾನ್, ವಿಶ್ವನಾಥ್ ಯು.ಮಾಡಾ, ರವಿ ಎಸ್.ಮಂಜೇಶ್ವರ, ಹರೀಶ್ ಕೆ.ಚೇವಾರ್, ಚಂದ್ರಶೇಖರ ಆರ್.ಬೆಲ್ಚಡ, ತೋನ್ಸೆ ಸಂಜೀವ ಪೂಜಾರಿ ಸಹಿತ ನೂರಾರು ಭಕ್ತರು, ಸಮಿತಿ ಸದಸ್ಯರು ಉಪಸ್ಥಿತರಿದ್ದು, ಶ್ರೀಗಳು ಫಲಮಂತ್ರಾಕ್ಷತೆಯೊಂದಿಗೆ ಹರಸಿದರು.
   ಯಾಗ ಸಮಿತಿ ಗೌರವ ಪ್ರಧಾನ ಕಾರ್ಯದಶರ್ಿ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿ, ಕೊಂಡೆವೂರು ಕ್ಷೇತ್ರದ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಸಿದ್ಧತೆ ಬಗ್ಗೆ ತಿಳಿಸಿದರು.   ಕನರ್ೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ರೈ ವಂದಿಸಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries