ಸಾಂಸ್ಕೃತಿಕ ಅಕಾಡೆಮಿಯಿಂದ ಪುಸ್ತಕ ವಿತರಣೆ
ಬದಿಯಡ್ಕ: ಪುಸ್ತಕ ಓದುವ ಹವ್ಯಾಸವು ಅರಿವಿನ ಜ್ಞಾನ ವಿಸ್ತಾರತೆಗೆ ಪೂರಕವಾಗುತ್ತದೆ. ಹೊಸ ತಲೆಮಾರು ಓದುವ ಉತ್ಸಾಹ ತೋರಿಸುತ್ತಿದ್ದರೂ, ಬೇಕಾದ ನಿದರ್ೇಶನಗಳು, ಅಗತ್ಯದ ಪುಸ್ತಕಗಳ ಲಭ್ಯತೆಯ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಹೊತ್ತಗೆಗಳನ್ನು ಓದುವ ಬಗ್ಗೆ ಇನ್ನಷ್ಟು ಕೆಲಸಗಳಾಗಬೇಕು ಎಂದು ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಭಿಪ್ರಾಯಬ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ನೇತೃತ್ವದಲ್ಲಿ ಬುಧವಾರ ಬದಿಯಡ್ಕದ ಪೆರಡಾಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜ್ಞಾನಪೀಠ ಪುರಸ್ಕೃತ ಕವಿ, ಕಡಲತೀರದ ಭಾರ್ಗವ ಡಾ.ಕೋಟ ಶಿವರಾಮ ಕಾರಂತರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಕಾಡೆಮಿ ಉಚಿತವಾಗಿ ಕೊಡಮಾಡುವ ಕನ್ನಡ ಪುಸ್ತಕಗಳನ್ನು ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ವಿದ್ಯುನ್ಮಾನ ಗೂಗಲ್ ಗಿಂತಲೂ ಹೆಚ್ಚು ಅರಿವಿನ ಕಣಜಗಳಾದ ಪುಸ್ತಕಗಳು ಇಂದಿನ ಆಧುನಿಕ ಎಲ್ಲಾ ಅವಿಷ್ಕಾರಗಳಿಗೂ ಮೂಲವಾಗಿತ್ತೆಂಬುದನ್ನು ಮರೆಯುವಂತಿಲ್ಲ ಎಂದು ಅವರು ಈ ಸಂದರ್ಭ ತಿಳಿಸಿದರು.
ಪುಸ್ತಕಗಳನ್ನು ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ್ ಅವರು, ವಿದ್ಯಾಥರ್ಿಗಳಿಗೆ ಪುಸ್ತಕಗಳ ಓದುವಿಕೆಯ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಲಾಗುತ್ತಿದೆ. ಸರಕಾರಿ ಶಾಲೆಯಾಗಿರುವುದರಿಂದ ಮಿತಿಗೊಳಪಟ್ಟ ಅನುದಾನಗಳಿಂದ ಪುಸ್ತಕ ಖರೀದಿಸಲಾಗುತ್ತದೆ. ಸಹೃದಯರ ನೆರವಿನೊಂದಿಗೆ ಶಾಲಾ ಪುಸ್ತಕ ಭಂಡಾರವನ್ನು ವಿಸ್ತರಿಸಿ ವಿದ್ಯಾಥರ್ಿಗಳಿಗೆ ಅನುಕೂಲ ಕಲ್ಪಿಸುವ ಯತ್ನಗಳನ್ನು ಮಾಡಲಾಗುವುದೆಂದು ತಿಳಿಸಿದರು.
ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಈ ಸಂದರ್ಭ ಮಾತನಾಡಿ, ಅಕಾಡೆಮಿಯು ಜಿಲ್ಲೆಯ ಎಲ್ಲಾ ಕನ್ನಡ ಶಾಲೆಗಳಿಗೆ ಪುಸ್ತಕಗಳನ್ನು ಕೊಡಮಾಡುವ ಯೋಜನೆಯನ್ನಿರಿಸಿ ಮುನ್ನಡೆಯುತ್ತಿದೆ. ಕೊಡಮಾಡುವ ಹೊತ್ತಗೆಗಳ ಸದುಪಯೋಗವಾದಾಗ ಅಕಾಡೆಮಿಯ ಅಳಿಲ ಸೇವೆ ಸಾರ್ಥಕವಾಗುವುದೆಂದು ತಿಳಿಸಿದರು.
ಪಂಜರಿಕೆ ಸಾಧನಾ ಸೇವಾ ಟ್ರಸ್ಟ್ ನಿದರ್ೇಶಕ ಅರವಿಂದ ಪಂಜರಿಕೆ, ಅಕಾಡೆಮಿ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಮೀಡಿಯಾ ಕ್ಲಾಸಿಕಲ್ ಬಂದಿಯಡ್ಕದ ಅಧ್ಯಕ್ಷ ಬಾಲಕೃಷ್ಣ ಅಚ್ಚಾಯಿ, ಪೆರಡಾಲ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್ ಅನ್ನಡ್ಕ, ಶಿಕ್ಷಕರಾದ ಚಂದ್ರಹಾಸ ನಂಬ್ಯಾರ್, ಶಾಂತಾ ಮಣಿ, ಕಿಶೋರ್ ಸ್ವಾಮಿಕೃಪಾ, ಕವಿ ಗಣೇಶ್ ಪೈ ಬದಿಯಡ್ಕ, ಸಂಘಟಕ ಝಡ್ ಎ.ಕಯ್ಯಾರ್, ಗೀತಾ ಎಂ ಭಟ್, ರಿಶಾದ್ ಮಾಸ್ತರ್, ಕಿಶೋರ್ ಪೆರ್ಲ, ಚಂದ್ರಶೇಖರ್ ಮಾಸ್ತರ್, ಜಯಲತ ಬದಿಯಡ್ಕ, ಗಾಯಕ ವಸಂತ ಬಾರಡ್ಕ, ಋತಿಕ್ ಯಾದವ್, ಶಿಕ್ಷಕಿ ದಿವ್ಯಗಂಗಾ ಪಿ. ಮೊದಲಾದವರು ಉಪಸ್ಥಿತರಿದ್ದರು.