ಕೇರಳ ರೈತ ಸಂಘದಿಂದ ಪೈವಳಿಕೆ ಗ್ರಾಮ ಕಚೇರಿ ಮುಂದೆ ಧರಣಿ
ಉಪ್ಪಳ: ಕೇರಳ ರೈತ ಸಂಘದ ಮಂಜೇಶ್ವರ ವಲಯ ಸಮಿತಿಯ ವತಿಯಿಂದ ಪೈವಳಿಕೆ ಗ್ರಾಮ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಧರಣಿ ಸತ್ಯಾಗ್ರಹ ನಡೆಯಿತು.
ಈ ಬಾರಿಯ ಮಳೆಗಾಲದಲ್ಲಿ ಕೇರಳ ರಾಜ್ಯದಲ್ಲಿ ತೀವ್ರ ಅತಿವೃಷ್ಠಿಯಿಂದ ಹದಿಮೂರು ಜಿಲ್ಲೆಗಳು ಪ್ರಳಯ ಬಾಧಿತವಾಗಿ, ಪ್ರಮುಖ ಬೆಳೆಗಳಾದ ಭತ್ತ, ಕಾಳುಮೆಣಸು, ಬಾಳೆ, ಏಲಕ್ಕಿ, ತರಕಾರಿ ಕೃಷಿಗಳಿಗೆ ಹಾನಿ ಸಂಭವಿಸಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ಅಡಿಕೆ ಕೂಡಾ ಕೊಳೆ ರೋಗದಿಂದ ಅಡಿಕೆ ಮರಗಳು ಸಾಯುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅತಿ ಶೀಘ್ರದಲ್ಲಿ ಅರ್ಹರಿಗೆ ಪರಿಹಾರ ವಿತರಿಸಬೇಕೆಂದು ಧರಣಿ ಸತ್ಯಾಗ್ರಹ ಆಯೋಜಿಸಲಾಗಿತ್ತು.
ಧರಣಿಯನ್ನು ಜಿಲ್ಲಾ ರೈತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಂ.ರಘುದೇವನ್ ಮಾಸ್ತರ್ ಉದ್ಘಾಟಿಸಿದರು. ಪುರುಷೋತ್ತಮ ಬಳ್ಳೂರು ಅಧ್ಯಕ್ಷತೆ ವಹಿಸಿದರು. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಜಯಾನಂದ, ಮಂಜೇಶ್ವರ ಏರಿಯಾ ಕಾರ್ಯದಶರ್ಿ ಅಬ್ದುಲ್ ರಝಾಕ್ ಚಿಪ್ಪಾರ್, ಬೇಬಿ ಶೆಟ್ಟಿ ಮಾತನಾಡಿದರು.
ಪೈವಳಿಕೆ ನಗರದಿಂದ ಗ್ರಾಮ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಧರಣಿಯಲ್ಲಿ ಪಾಲ್ಗೊಂಡರು. ಕೆ.ಆರ್.ಜಯಾನಂದ ಸ್ವಾಗತಿಸಿ, ಬೇಬಿ ಶೆಟ್ಟಿ ವಂದಿಸಿದರು.