ಕಾಂಗ್ರೆಸ್ನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ
ಕಾಸರಗೋಡು: ರಫೇಲ್ ಭ್ರಷ್ಟಾಚಾರ ಮತ್ತು ಬ್ರುವರಿ ಡಿಸ್ಟಿಲರಿ ಭ್ರಷ್ಟಾಚಾರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದಂಗವಾಗಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಯಿತು.
ಧರಣಿಯನ್ನು ಯುಡಿಎಫ್ ಸಂಚಾಲಕ ಬೆನ್ನಿ ಬೆಹನನ್ ಉದ್ಘಾಟಿಸಿ ಮಾತನಾಡಿ ಕೇರಳ ಸರಕಾರ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದಕ್ಕೆ ಉತ್ತಮ ಉದಾಹರಣೆ ರಾಜ್ಯ ಸರಕಾರದ ಬ್ರುವರಿ ಡಿಸ್ಟಲರಿ ಹಾಗೂ ಕೇಂದ್ರ ಸರಕಾರ ನಡೆಸಿದ ರಫೇಲ್ ಒಡಂಬಡಿಕೆ ಎಂದು ಆರೋಪಿಸಿದರು. ಈ ಎರಡೂ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.
ಕೇರಳ ಸರಕಾರದಂತೆ ಕೇಂದ್ರ ಸರಕಾರವೂ ಜನವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದ ಅವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಿಂದಾಗಿ ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ `ಎಲ್ಲಾ ಸರಿಮಾಡಲಾಗುವುದು' ಎಂದು ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಎಡರಂಗ ಸರಕಾರ ಈಗ `ಎಲ್ಲರನ್ನೂ ಸರಿ ಮಾಡುತ್ತಿದೆ' ಎಂದು ಆರೋಪಿಸಿದರು.
ಕೇಂದ್ರ ಸರಕಾರ ಲೋಕಸಭಾ ಚುನಾವಣೆಯಲ್ಲಿ ಹತ್ತು ಹಲವು ಭರವಸೆಗಳನ್ನು ನೀಡಿದ್ದು, ಅವುಗಳಲ್ಲಿ ಯಾವುದನ್ನೂ ಜಾರಿಗೊಳಿಸಿಲ್ಲ. ಬದಲಾಗಿ ಇಂಧನ ಬೆಲೆಯೇರಿಕೆ ಮೊದಲಾದವುಗಳಿಂದ ಶ್ರೀಮಂತರ ಪರವಾಗಿ ನಿಂತಿದೆ ಎಂದು ಆರೋಪಿಸಿದರು.
ಧರಣಿಯಲ್ಲಿ ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಕಾರ್ಯದಶರ್ಿಗಳ ಸಹಿತ ಮುಖಂಡರು ಪಾಲ್ಗೊಂಡಿದ್ದರು.