ಶಬರಿಮಲೆಯ ಪಾವಿತ್ರ್ಯವನ್ನು ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧ : ಕೆ.ಶ್ರೀಕಾಂತ್
ಕಾಸರಗೋಡು: ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸುವ ಉದ್ದೇಶದಿಂದ ಶಬರಿಮಲೆ ವಿಚಾರದಲ್ಲಿ ಅನೇಕ ಷಡ್ಯಂತ್ರಗಳು ನಡೆಯುತ್ತಿದೆ. ಇದಕ್ಕೆ ಸಿಪಿಎಂ ನೇತೃತ್ವದ ಕೇರಳ ರಾಜ್ಯ ಸರಕಾರ ಬೆಂಬಲ ನೀಡುತ್ತಿದೆ. ಜನರ ವಿಶ್ವಾಸ, ನಂಬಿಕೆಗೆ ದ್ರೋಹ ಎಸಗಲು ಸಿಪಿಎಂ ಮಹಿಳೆಯರನ್ನು ಶಬರಿಮಲೆಗೆ ಕಳುಹಿಸಲು ಯತ್ನಿಸುತ್ತಿದೆ. ಶಬರಿಮಲೆಯ ಪಾವಿತ್ರ್ಯವನ್ನು ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಹೇಳಿದರು.
ಶಬರಿಮಲೆಯ ಆಚಾರ ಅನುಷ್ಠಾನಗಳಿಗೆ ಧಕ್ಕೆ ತರುವಂತಹ ಪಿಣರಾಯಿ ಸರಕಾರದ ಧೋರಣೆಗೆ ವಿರುದ್ಧವಾಗಿ, ಐದು ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆಯನ್ನು ನೀಡಬಲ್ಲ ಕೇಂದ್ರ ಸರಕಾರದ ಯೋಜನೆಯಾದ ಆಯುಷ್ಮಾನ್ ಭಾರತ ಯೋಜನೆಯನ್ನು ಕೇರಳದಲ್ಲಿ ಶೀಘ್ರವೇ ಅಳವಡಿಸಬೇಕು, ಪ್ರಳಯಾನಂತರ ಪರಿಹಾರ ನಿಧಿಯ ಹಂಚಿಕೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಕೊನೆಗೊಳಿಸಬೇಕು, ಸಿಪಿಎಂ ಪಕ್ಷದ ಸಂಘಟಿತವಾದ ಸರಕಾರಿ ಭೂಮಿ ಕಬಳಿಕೆಯ ವಿಷಯದಲ್ಲಿ ತನಿಖೆಯಾಗಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ನಡೆದ ಮಾಚರ್್ ಮತ್ತು ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತರು ಪಕ್ಷಬೇಧ ಮರೆತು ಹೋರಾಟಕ್ಕೆ ಧುಮುಕಿದ್ದಾರೆ. ಇದರಿಂದ ವಿಚಲಿತಗೊಂಡಿರುವ ಕೇರಳ ರಾಜ್ಯ ಸರಕಾರದ ಪ್ರಮುಖ ಪಕ್ಷವಾಗಿರುವ ಸಿಪಿಎಂ ಜಾತಿಯ ಹೆಸರೆತ್ತಿ ಹಿಂದೂಗಳನ್ನು ಒಡೆಯಲು ಯತ್ನಿಸುತ್ತಿದೆ ಎಂದರು. ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಬೇಕಾದ ಹಾಗೂ ಭಕ್ತರ ಪರವಾಗಿರಬೇಕಾಗಿದ್ದ ದೇವಸ್ವಂ ಮಂಡಳಿ ಸಿಪಿಎಂನ ಕೈಗೊಂಬೆಗಳಂತೆ ವತರ್ಿಸುತ್ತಿದೆ ಎಂದು ಆರೋಪಿಸಿದ ಅವರು ಶಬರಿಮಲೆಗೆ ಯುವತಿಯರ ಪ್ರವೇಶಿಸಲು ಯತ್ನಿಸುತ್ತಿರುವ ಸಿಪಿಎಂ ಯತ್ನ ಖಂಡನಾರ್ಹ ಎಂದರು.
ಶಬರಿಮಲೆಯಲ್ಲಿ ಹಿಂದಿನಿಂದಲು ಬಂದ ಆಚಾರ ವಿಚಾರವನ್ನು ಸಂಪ್ರದಾಯವನ್ನು ಮುರಿಯಲು ಬಿಡುವುದಿಲ್ಲ. ಹಿಂದುಗಳ ಭಾವನೆಗಳನ್ನು ಕೆರಳಿಸಲು ಕೆಲವು ನಾಸ್ತಿಕವಾದಿಗಳು ನ್ಯಾಯಾಲಯ, ಆಡಳಿತ ಯಂತ್ರವನ್ನು ಬಳಸಿಕೊಂಡು ಆಚರಣೆಯನ್ನು ಬಲಿಕೊಡಲು ಯತ್ನಿಸುತ್ತಿದೆ. ಧಾಮರ್ಿಕ ಕ್ಷೇತ್ರಗಳಿಗೆ ಅದರದ್ದೇ ಆದ ನಿಯಮಗಳಿವೆ. ಅದನ್ನು ನಿರ್ಧರಿಸುವುದು ದೈವಜ್ಞರು ಮತ್ತು ತಂತ್ರಿಗಳು ಎಂಬುದು ನೆನಪಿರಲಿ ಎಂದು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಶೆಟ್ಟಿ, ನ್ಯಾಯವಾದಿ ಸದಾನಂದ ರೈ, ಸವಿತಾ ಟೀಚರ್, ಶ್ರೀಲತಾ, ಮಾಲತಿ ಸುರೇಶ್ ಮೊದಲಾದವರು ನೇತೃತ್ವ ನೀಡಿದರು. ಕರಂದಕ್ಕಾಡ್ನಲ್ಲಿರುವ ಬಿಜೆಪಿ ಕಚೇರಿ ಪರಿಸರದಿಂದ ಆರಂಭಗೊಂಡ ಮೆರವಣಿಗೆ ತಾಲೂಕು ಕಚೇರಿ ಪರಿಸರದಲ್ಲಿ ಪೊಲೀಸರು ತಡೆದರು. ಬಿಜೆಪಿ ಮಂಡಲ ಕಾರ್ಯದಶರ್ಿ ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ವಂದಿಸಿದರು.
ತೃಕರಿಪುರ ಮಂಡಲದ ನೀಲೇಶ್ವರ ಟ್ರೆಷರಿ ಕಚೇರಿಗೆ, ಕಾಂಞಂಗಾಡ್ ಮಂಡಲದ ಹೊಸದುರ್ಗ ತಾಲೂಕು ಕಚೇರಿಗೆ, ಉದುಮ ಮಂಡಲದ ಸಬ್ ರಿಜಿಸ್ಟರ್ ಆಫೀಸ್ಗೆ ಮಾಚರ್್ ಹಾಗು ಧರಣಿ ನಡೆಯಿತು.